ಮದುವೆಯ ಮೊದಲ ವಾರ್ಷಿಕೋತ್ಸವದ ದಿನವೇ ದೂಡ ಘೋಷಣೆ ಮಾಡುತ್ತೇನೆ ಎಂದ ಕಾಜಲ್, ಏನಂತೆ ಗೊತ್ತೇ??

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಹಲವು ಸಿನಿ ತಾರೆಯರು ವಿವಾಹ ಮಾಡಿಕೊಂಡಿದ್ದಾರೆ. ಅದರಲ್ಲಿ ಕೆಲವರು ವಿವಾಹ ವಾದ ಬಳಿಕ ನಟನೆಗ್ ಗುಡ್ ಬೈ ಹೇಳಿದ್ದೂ ಇದೆ. ಇನ್ನೂ ಕೆಲವು ಜೋಡಿಗಳು ಜೋಡಿಯಾಗಿಯೇ ತೆರೆ ಮೇಲೇ ಕಾನಿಸಿಕೊಳ್ಳುತ್ತಿದ್ದಾರೆ. ಹೀಗೆ ಕಳೆದ ವರ್ಷ ಮದುವೆಯಾದವರು ಬಹುಭಾಷಾ ತಾರೆ ಕಾಜಲ್ ಅಗರ್ ವಾಲ್!

ಹೌದು ಸ್ನೇಹಿತರೆ ತಮಿಳು, ತೆಲುಗು, ಮಲಯಾಳಂ, ಹಿಂದೆ ಎಲ್ಲಾ ಭಾಷೆಗಳಲ್ಲಿಯೂ ಮಿಂಚಿದ ಚೆಲುವೆ ನಟಿ ಕಾಜಲ್. ಇವರು ಉದ್ಯಮಿ ಗೌತಮ್ ಕಿಚ್ಲು ಅವರನ್ನು ಅಕ್ಟೋಬರ್ ೩೦, ೨೦೨೦ರಲ್ಲಿ ಮದುವೆಯಾಗಿದ್ದರು. ಇನ್ನೇನು ಅವರ ಮೊದಲ ವಿವಾಹ ವಾರ್ಷಿಕೋತ್ಸವ ಹತ್ತಿರ ಬರುತ್ತಿದೆ. ಈ ದಿನ ಏನೆಲ್ಲಾ ಸರ್ಪ್ರೈಸ್ ಇರಬಹುದು ಎಂದು ಅಂದುಕೊಳ್ಳುತ್ತಿದ್ದ ಅಭಿಮಾನಿಗಳಿಗೆ ’ಸದ್ಯದಲ್ಲೇ ಮಹತ್ವದ ಘೋಷಣೆ ಮಾಡಲಿದ್ದೇನೆ’ ಎಂದು ಕಾಜಲ್ ತಮ್ಮ ಇನ್ಸ್ಟಾ ಪೇಜ್ ನಲ್ಲಿ ಹಂಚಿಕೊಂಡಿದ್ದು ಮತ್ತಷ್ಟು ಕುತೂಹಲವನ್ನು ಮೂಡಿಸಿದೆ.

ಬಟ್ಟಲು ಕಂಗಳ ಚೆಲುವೆ ನಟಿ ಕಾಜಲ್ ಅವರು ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಇನ್ನು ಸಿನಿ ಪ್ರಪಂಚದಿಂದ ಹೊರಗೆ, ಅಂದರೆ ಉದ್ಯಮಿ ಒಬ್ಬರನ್ನು ಹಲವು ವರ್ಷಗಳಿಂದ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗಿದ್ದಾರೆ ಕಾಜಲ್ ಹಾಗೂ ಗೌತಮ್. ಇತ್ತೀಚಿಗೆ ತಮ್ಮ ೩೬ ನೇ ವರ್ಷದ ಹುಟ್ಟುಹಬ್ಬವನ್ನು ಕಾಜಲ್ ಆಚರಿಸಿಕೊಂಡಿದ್ದರು ಈ ಸಂದರ್ಭದಲ್ಲಿ ಅವರ ಸಹೋದರಿ ನಿಶಾ ಅಗರ್ ವಾಲ್ ತನ್ನ ಸಹೋದರಿಗೆ ಬೇಗ ಮಗುವಾಗಬೇಕು. ಏಕೆಂದರೆ ನನ್ನ ಮಗೈಗೆ ಈಗಲೇ ಮೂರು ವರ್ಷ, ಲೇಟ್ ಆದರೆ ಆತ ಬರುವ ಮಗುವಿನೊಂದಿಗೆ ಹೊಂದಿಕೊಳ್ಳುವುದು ಕಷ್ಟ ಎಂದು ಹೇಳಿದ್ದರು.

ಇನ್ನು ಕಾಜಲ್ ಅವರ ಪ್ರಗ್ನೆನ್ಸಿ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹುಟ್ಟಿಕೊಂಡಿದ್ದು, ಇನ್ನು ವರೌ ಹೇಳಲು ಹೊರಟಿರುವ ವಿಷಯ ಕೂಡ ಪ್ರಗ್ನೆನ್ಸಿ ಬಗ್ಗೆಯೇ ಇರಬೇಕು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಮದುವೆಯಾದ ಮೇಲೇ ಯಾವ ಹೊಸ ಸಿನಿಮಾಕ್ಕೂ ಕಾಜಲ್ ಸಹಿ ಹಾಕಿಲ್ಲವಂತೆ. ಇಲ್ಲಿವರೆಗೆ ಒಪ್ಪಿಕೊಂಡ ಎಲ್ಲಾ ಸಿನಿಮಾಗಳನ್ನು ಮುಗಿಸಿರುವ ಕಾಜಲ್, ತನ್ನ ಪತಿ ಬೇಡ ಎಂದರೆ ನಟನೆಯನ್ನು ಮುಂದುವರೆಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಸದ್ಯ ಕಾಜಲ್ ಅಗರ್ ವಾಲ್ ಹೇಳಲು ಹೊರಟಿರುವ ವಿಷಯ ಯಾವುದು ಎನ್ನುವುದೇ ಎಲ್ಲರ ಕುತೂಹಲ!

Get real time updates directly on you device, subscribe now.