ದೀಪಕ್ ಚಹರ್ ಪ್ರಪೋಸ್ ಮಾಡಿರುವ ಜಯ ಭಾರದ್ವಾಜ್ ನಿಜಕ್ಕೂ ಯಾರು ಗೊತ್ತೇ?? ಇವರ ಆಸ್ತಿ ಕೇಳಿದರೆ ಪಕ್ಕ ಶಾಕ್ ಆಗ್ತೀರಾ.
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ವಿಷಯವೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ ಆಗಿರುವ ದೀಪಕ್ ಚಾಹರ್ ರವರು ತಮ್ಮ ಬಹುಕಾಲದ ಪ್ರೇಯಸಿಯಾಗಿ ಇರುವ ಜಯಾ ಭಾರದ್ವಾಜ್ ಅವರಿಗೆ ಸ್ಟೇಡಿಯಂನಲ್ಲಿ ಎಲ್ಲರ ಸಮ್ಮುಖದಲ್ಲಿ ಪ್ರೇಮನಿವೇದನೆ ಮಾಡಿಕೊಂಡಿರುವ ವಿಡಿಯೋ. ಹೌದು ಸ್ನೇಹಿತರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬೌಲರ್ ಆಗಿರುವ ದೀಪಕ್ ಚಹಾರ್ ರವರು ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಪಂದ್ಯದಲ್ಲಿ ಸೋತ ನಂತರ ಬಂದು ತಮ್ಮ ಬಹುಕಾಲದ ಭಾರದ್ವಾಜ್ ಅವರಿಗೆ ನೀಡುವ ಮೂಲಕ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ ಅದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದಾರೆ.
ಹೌದು ಸ್ನೇಹಿತರೆ ಇವರಿಬ್ಬರು ಹಲವಾರು ವರ್ಷಗಳ ಕಾಲ ಜೊತೆಯಲ್ಲೇ ಇದ್ದರು ಮಾತ್ರವಲ್ಲದೇ ಈ ಬಾರಿ ಐಪಿಎಲ್ನ ಸೆಕೆಂಡ್ ಇನಿಂಗ್ಸಿನಲ್ಲಿ ಪಂದ್ಯಗಳನ್ನು ವೀಕ್ಷಿಸಲು ದೀಪಕ್ ಚಹರ್ ಅವರೊಂದಿಗೆ ಯುಎಇ ಗೂ ಆಗಮಿಸಿದ್ದರು. ಪಂಜಾಬ್ ವಿರುದ್ಧದ ಕೊನೆಯ ಪಂದ್ಯದಲ್ಲಿ 6 ವಿಕೆಟ್ ಗಳಿಂದ ಸೋತಿತ್ತು. ಈ ಸಂದರ್ಭದಲ್ಲಿ ಕಪ್ತಾನ ರಾಗಿರುವ ಮಹೇಂದ್ರ ಸಿಂಗ್ ಧೋನಿಯವರ ಅನುಮತಿಯನ್ನು ಪಡೆದು ಸ್ಟೇಡಿಯಂನಲ್ಲಿ ದೀಪಕ್ ಚಹಾರ್ ಅವರು ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದಾರೆ. ಇನ್ನು ಈಗ ಕ್ರಿಕೆಟ್ ಪ್ರೇಮಿಗಳು ಜಯ ಭಾರದ್ವಾಜರವರು ಯಾರು ಅವರು ಏನು ಮಾಡುತ್ತಿದ್ದಾರೆ ಎಂಬುದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ನಡೆಸಲು ಪ್ರಾರಂಭಿಸಿದ್ದಾರೆ.

ಬನ್ನಿ ಸ್ನೇಹಿತರೆ ಈ ಕುರಿತಂತೆ ನಾವು ನಿಮಗೆ ಹೇಳುತ್ತೇವೆ. ಜಯ ಭಾರದ್ವಾಜರವರು ಹಿಂದಿ ಬಿಗ್ ಬಾಸ್ ನ ಅಭ್ಯರ್ಥಿ ಹಾಗೂ ನಟ ಆಗಿರುವ ಸಿದ್ಧಾರ್ಥ ಭಾರದ್ವಾಜ್ ರವರ ಸಹೋದರಿ ಆಗಿದ್ದಾರೆ. ಇನ್ನು ಇವರು ದೆಲ್ಲಿಯ ಮೂಲದವರಾಗಿದ್ದಾರೆ. ಇನ್ನು ಇವರ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 120 ಕೋಟಿ ಇದೆ ಎಂಬುದು ತಿಳಿದು ಬಂದಿದೆ. ಇನ್ನು ಜಯ ಭಾರದ್ವಾಜರವರು ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವು ಸುದ್ದಿಗಳ ಪ್ರಕಾರ ದೀಪಕ್ ಚಹರ್ ಹಾಗೂ ಜಯ ಭಾರದ್ವಾಜರವರು ಸದ್ಯದಲ್ಲೇ ಮದುವೆ ಕೂಡ ಆಗಲಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.