ಕನ್ನಡಿಗರಿಗೆ ಮತ್ತೊಂದು ಕಹಿ ಸುದ್ದಿ ನೀಡಿದ ರಶ್ಮಿಕಾ ಮಂದಣ್ಣ, ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದರೂ ಕ್ಯಾರೇ ಎನ್ನದ ರಶ್ಮಿಕಾ, ಮಾಡಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಟಿ ರಶ್ಮಿಕಾ ಮಂದಣ್ಣ ಯುವಕರ ಕ್ರಶ್. ಕನ್ನಡದಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಟನೆಯನ್ನು ಆರಂಭಿಸಿದ್ದ ರಶ್ಮಿಕಾ ಮಂದಣ್ಣ ತಮ್ಮ ಮೊದಲ ಚಿತ್ರದಿಂದಲೇ ಸೂಪರ್ ಹಿಟ್ ನಟಿ ಎನಿಸಿಕೊಂಡರು. ಇದಾದ ಬಳಿಕ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು ತೆಲಗು ಚಿತ್ರಗಳಲ್ಲಿ. ತೆಲುಗಿನಲ್ಲಿ ಒಂದರ ಹಿಂದೊಂದರಂತೆ ಸಿನಿಮಾಗಳಲ್ಲಿ ನಟಿಸಿ ಅಲ್ಲಿಯೂ ಅಭಿಮಾನಿಗಳನ್ನು ಗಳಿಸಿಕೊಂಡರು.

ರಶ್ಮಿಕಾ ಮಂದಣ್ಣ, ತೆಲಗು ತಮಿಳು ಭಾಷೆಗಳ ಜೊತೆ ಬಾಲಿವುಡ್ ನಲ್ಲಿಯೂ ಕೂಡ ಸಿನಿಮಾ ನಟನೆಗೆ ಮುಂದಾಗಿದ್ದಾರೆ. ಬಾಲಿವುಡ್ ನಲ್ಲಿ ಬಿಗ್ ಬಿ ಜೊತೆಯೇ ನಟಿಸಲು ಅವಕಾಶ ಗಳಿಸಿದ್ದು ಹೆಮ್ಮೆಯ ವಿಷಯವೆ! ಇನ್ನು ರಶ್ಮಿಕಾ ಅಮಿತಾಬ್ ಜೊತೆ ’ಗುಡ್ ಬೈ’ ಚಿತ್ರ ಹಾಗೂ ಸಿದ್ಧಾರ್ಥ ಮಲ್ಹೊತ್ರಾ ಜೊತೆಯೂ ತೆರೆ ಹಂಚಿಕೊಂಡಿದ್ದು ಈಗಾಗಲೇ ಚಿತ್ರೀಕರಣ ಮುಗಿಸಿದ ಸಂತೋಷವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡ ಭಾಷೆಯಲ್ಲಿಯೇ ನಟನೆ ಆರಂಭಿಸಿದರೂ ಕೂಡ ಕನ್ನಡ ಚಿತ್ರಗಳಲಿ ಅಷ್ಟಾಗಿ ನಟಿಸಲಿಲ್ಲ, ಕಿರಿಕ್ ಪಾರ್ಟಿ ಆದ ಮೇಲೆ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಷ್ಟೇ. ಇನ್ನು ದ್ರುವ ಸರ್ಜಾ ಅವರೊಂದಿಗೆ ಪೊಗರು ಚಿತ್ರದಲ್ಲಿ ಕಾಣಿಸಿಕೊಂಡಿದ್ದರೂ ಕೂಡ ತೆಲುಗು ಸಿನಿಮಾಗಳಷ್ಟು ಈ ಚಿತ್ರ ಪ್ರೊಮೋಷನ್ ಸರಿಯಾಗಿ ಮಾಡಿಲ್ಲ ಎಂಬ ವಿವಾದಕ್ಕೆ ಗುರಿಯಾಗಿದ್ದರು. ಅದಾದ ಬಳಿಕ ಹೆಚ್ಚು ಕಡಿಮೆ ಕನ್ನಡ ಚಿತ್ರರಂಗದಿಂದ ದೂರವೇ ಉಳಿದರು ರಶ್ಮಿಕಾ ಮಂದಣ್ಣ.
ಇನ್ನು ಕನ್ನಡದವರಾಗಿ ಕನ್ನಡದಲ್ಲಿ ಮುಂದಿನ ನತನೆ ಯಾವಾಗ ಎಂಬ ಪ್ರಶ್ನೆಗೆ ತನಗೆ ತೆಲುಗು ಹಾಗೂ ಹಿಂದಿಯಲ್ಲಿ ನಟಿಸಲು ಸದ್ಯ 365 ದಿನಗಳೇ ಸಾಲುತ್ತಿಲ್ಲ. ಎಲ್ಲಾ ಚಿತ್ರಗಳಲ್ಲೂ ಅಭಿನಯಿಸಲು 500 ಕ್ಕೂ ಹೆಚ್ಚು ದಿನಗಳು ಬೇಕು ಎಂದು ಹೇಳಿದ್ದಾರೆ. ಇನ್ನು ಯಾವ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬರುತ್ತಾರೆ ಕಾದು ನೋಡಬೇಕು.