ನಾಮಕರಣದ ದಿನವೇ ಮೇಘನಾ ರವರ ಕಣ್ಣಲ್ಲಿ ನೀರು, ಪ್ರೇರಣಾ ರವರು ಹೇಳಿದ ಮಾತಿಗೆ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಸರ್ಜಾ ಹಾಗೂ ಮೇಘನರಾಜ್ ಕುಟುಂಬದ ಸದಸ್ಯರಿಗೆ ಈಗ ಸಂತೋಷದ ದಿನಗಳು ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಅವರ ಮನೆಯ ಯುವರಾಜ ನಾಗಿರುವ ಜೂನಿಯರ್ ಚಿರು ಸರ್ಜಾ ರವರಿಗೆ ಅದ್ದೂರಿಯಾಗಿ ನಾಮಕರಣ ಸಮಾರಂಭ ಹಲವಾರು ಗಣ್ಯರ ಎದುರು ಹಾಗೂ ಅವರ ಆಶೀರ್ವಾದದೊಂದಿಗೆ ನಡೆದಿದೆ. ಹೌದು ಸ್ನೇಹಿತರೆ ಮೇಘನರಾಜ ರವರು ಚಿರು ಸರ್ಜಾ ರವರನ್ನು ಕಳೆದುಕೊಂಡ ಮೇಲೆ ಸಾಕಷ್ಟು ದುಃಖದಲ್ಲಿದ್ದರು.

ಆದರೆ ಜೂನಿಯರ್ ಚಿರು ಸರ್ಜಾ ಅವರ ಆಗಮನದಿಂದ ಅವರ ಬಾಳಿನಲ್ಲಿ ಒಂದು ಹೊಸ ಭರವಸೆಯ ಬೆಳಕು ಮೂಡಿತ್ತು. ಇನ್ನು ಮೊನ್ನೆಯಷ್ಟೇ ಖಾಸಗಿ ಹೋಟೆಲೊಂದರಲ್ಲಿ ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಸಮಾರಂಭವನ್ನು ಸಂಭ್ರಮದಿಂದ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಆಚರಿಸಲಾಯಿತು. ಇನ್ನು ಈ ಸಮಾರಂಭದಲ್ಲಿ ಎಲ್ಲಾ ಕಾರ್ಯಕ್ರಮಗಳ ಮೇಲುಸ್ತುವಾರಿಯನ್ನು ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣ ಶಂಕರ್ ಅವರು ವಹಿಸಿಕೊಂಡಿದ್ದು ಬಹಳ ವಿಶೇಷವಾಗಿತ್ತು. ಇನ್ನು ಪ್ರೇರಣಾ ಶಂಕರ್ ರವರು ಮೇಘನ ಸರ್ಜಾ ರವರನ್ನು ತಮ್ಮ ಅಕ್ಕನಂತೆ ಕಾಣುತ್ತಾರೆ.

ಇನ್ನು ಜೂನಿಯರ್ ಚಿರು ಸರ್ಜಾ ನಾಮಕರಣ ಸಮಾರಂಭದಲ್ಲಿ ಪ್ರೇರಣಾ ರವರು ಸಾಕಷ್ಟು ಸಂತೋಷದಿಂದ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಮೇಘನರಾಜ್ ರವರ ಕುರಿತಂತೆ ಮಾತನಾಡಿರುವ ಪ್ರೇರಣಾ ಶಂಕರ್ ಅವರು ನಾವಿಬ್ಬರೂ ಅಕ್ಕ-ತಂಗಿ ಸಂಬಂಧವನ್ನು ಹೊಂದಿದ್ದೇವೆ ಎಂಬುದಾಗಿ ಕೂಡ ಹೇಳಿದ್ದಾರೆ. ಇನ್ನು ಚಿರುಸರ್ಜ ಹೋದಮೇಲೆ ಮೇಘನಾರಾಜ್ ಅವರು ಸಾಕಷ್ಟು ದುಃಖಿತರಾಗಿದ್ದರು. ಆದರೂ ಕೂಡ ಅವನ್ನೆಲ್ಲ ತಮ್ಮ ಮಗನಾಗಿರುವ ಜೂನಿಯರ್ ಚಿರುಸರ್ಜ ರವರ ಸಂತೋಷಕ್ಕಾಗಿ ಮುಚ್ಚಿಕೊಂಡಿದ್ದಾರೆ. ಜೂನಿಯರ್ ಚಿರು ಸರ್ಜಾ ರವರ ಕುರಿತಂತೆ ಸಾಕಷ್ಟು ಕನಸುಗಳ ಗೋಪುರವನ್ನು ಅವರು ಕಟ್ಟಿಕೊಂಡಿದ್ದಾರೆ ಎಂಬ ಮಾತನ್ನು ಕೂಡ ಹೇಳಿದ್ದಾರೆ. ಈ ಮಾತುಗಳನ್ನು ಕೇಳಿಸಿಕೊಂಡು ಮೇಘನಾ ರಾಜ್ ಅವರು ಸಂತೋಷದಿಂದ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

Get real time updates directly on you device, subscribe now.