ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಪತ್ನಿ ರೇವತಿಗೆ ಪತ್ರ ಬರೆದ ನಿಖಿಲ್ ! ಎಷ್ಟು ಅದ್ಭುತವಾಗಿ ಸಾಲುಗಳನ್ನು ಬರುತ್ತಿದ್ದಾರೆ ಗೊತ್ತಾ?

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಯುವ ನಟ ನಿಖಿಲ್ ಕುಮಾರಸ್ವಾಮಿ ಹಾಗೂ ಅವರ ಪತ್ನಿ ರೇವತಿ ರವರು ಕನ್ನಡ ಚಿತ್ರರಂಗದ ಜೋಡಿಗಳಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು. ಈ ಜೋಡಿಯು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಜೀವನದ ಕೆಲವೊಂದು ಅನುಭವಗಳನ್ನು ಹಾಗೂ ಫೋಟೋಗಳನ್ನು ಹಂಚಿ ಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸದಾ ಸಂವಾದದಲ್ಲಿ ಇರುತ್ತಾರೆ.

ಇನ್ನು ನಿಖಿಲ್ ಕುಮಾರಸ್ವಾಮಿ ರವರನ್ನು ಎಷ್ಟೇ ಟ್ರೋಲ್ ಮಾಡಿದರೂ ಕೂಡ ನಿಖಿಲ್ ಕುಮಾರಸ್ವಾಮಿ ರವರ ವೈಯಕ್ತಿಕ ಜೀವನವನ್ನು ಮಾತ್ರ ಯಾರು ಬೆಟ್ಟು ಮಾಡಿ ತೋರಿಸುವುದಿಲ್ಲ, ಮೊದಲಿನಿಂದಲೂ ಅಷ್ಟೇ ಯಾರು ಇನ್ನಿತರ ವಿಷಯಗಳಲ್ಲಿ ನಿಖಿಲ್ ಕುಮಾರಸ್ವಾಮಿ ರವರನ್ನು ಟ್ರೋಲ್ ಮಾಡಿದರು ಕೂಡ ವೈಯಕ್ತಿಕ ಜೀವನದ ಕುರಿತು ಯಾವುದೇ ರೋಗಗಳನ್ನು ನೀವು ಕಾಣಲು ಸಾಧ್ಯವೇ ಇಲ್ಲ.

ಇನ್ನೂ ಈ ಜೋಡಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು ವಿವಿಧ ರೀತಿಯ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ, ಈ ಫೋಟೋಗಳು ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ವೈರಲ್ ಆಗುತ್ತಿರುತ್ತವೆ, ಇನ್ನು ಈ ಜೋಡಿಯು ಮದುವೆಯಾಗಿ ಇದೀಗ ಒಂದು ವರ್ಷ ಮುಗಿದಿದ್ದು ಕಳೆದ ವರ್ಷ ಕೊರೋನಾದ ನಡುವೆ ಗಣ್ಯರ ಸಮ್ಮುಖದಲ್ಲಿ ಈ ಜೋಡಿಯು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ವಾರ್ಷಿಕೋತ್ಸವದ ಅಂಗವಾಗಿ ನಿಖಿಲ್ ಕುಮಾರಸ್ವಾಮಿ ರವರು ತಮ್ಮ ಪತ್ನಿ ರೇವತಿ ರವರಿಗೆ ವಿಶೇಷವಾದ ಪತ್ರವೊಂದನ್ನು ಬರೆದು ಶುಭ ಹಾರೈಸಿ, ಮದುವೆಯ ಫೋಟೋ ಹಂಚಿಕೊಂಡು ಈ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪತ್ರ ಬಹಳ ವೈರಲ್ ಆಗಿದ್ದು ನಿಖಿಲ್ ಕುಮಾರಸ್ವಾಮಿ ಅವರು ಈ ರೀತಿ ಬರೆದು ಕೊಂಡಿದ್ದಾರೆ.

ಸರಿಯಾಗಿ ನೀನು ಒಂದು ವರ್ಷದ ಹಿಂದೆ ನನ್ನ ಬದುಕಿಗೆ ಬಂದಿದ್ದೀರಿ, ನೀವು ಬಂದ ದಿನದಿಂದಲೂ ಇಲ್ಲಿಯವರೆಗೂ ನಮ್ಮಿಬ್ಬರ ಬದುಕಿನಲ್ಲಿ ಬಹಳಷ್ಟು ಮರೆಯಲಾಗದ ಸುಂದರ ಕ್ಷಣಗಳು ಬಂದು ಹೋಗಿವೆ, ನಾವಿಬ್ಬರೂ ನಮ್ಮಿಬ್ಬರನ್ನು ಕಂಡುಕೊಳ್ಳಲು ಬಹಳ ಅದೃಷ್ಟಶಾಲಿಗಳು. ಬದುಕು ಒಂದು ನೇರವಾದ ರಸ್ತೆ ಅಲ್ಲ ಎಂಬುದು ನನಗೆ ಅರಿವಾಗಿದೆ, ಬದುಕಿನಲ್ಲಿ ಸಾಕಷ್ಟು ಅಡೆತಡೆಗಳಿವೆ, ಆದರೆ ನಾನು ಸರಾಗವಾಗಿ ಪ್ರಯಾಣ ಮಾಡುತ್ತಿರುವುದಕ್ಕೆ ನೀವೇ ಕಾರಣ ಎಂದಿದ್ದಾರೆ,

ಹೀಗೆ ಮಾತನ್ನು ಮುಂದುವರೆಸಿರುವ ನಿಖಿಲ್ ಕುಮಾರಸ್ವಾಮಿ ರವರು ಹೆಣ್ಣಾಗಿ ಹುಟ್ಟುವುದು ಸುಲಭವಲ್ಲ, ನಾವು ಯಾವುದಾದರೂ ಗುರಿಗಳನ್ನು ತಲುಪುತ್ತೇವೆ ಅಥವಾ ಸಾಧಿಸುತ್ತೇವೆ ಮತ್ತು ಕುಟುಂಬಗಳನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರಿಸುತ್ತೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಅಂದರೆ ಹೆಣ್ಣು ಮಾಡುವ ತ್ಯಾಗದ ಪ್ರಮಾಣ ನಿಜಕ್ಕೂ ಪ್ರಶಂಸಿಸುವುದಕ್ಕಿಂತಲೂ ಹೆಚ್ಚಾಗಿದೆ, ಅದೇ ಕಾರಣಕ್ಕಾಗಿ ನಾನು ಎಲ್ಲಾ ಮಹಿಳೆಯರಿಗೆ ದೊಡ್ಡ ಚಪ್ಪಾಳೆಯನ್ನು ನೀಡಲು ಬಯಸುತ್ತೇನೆ. ನಮ್ಮನ್ನು ಆಶೀರ್ವದಿಸಿದ ಮತ್ತು ನಮ್ಮನ್ನು ಇಷ್ಟ ಪಟ್ಟ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷವಾಗಿದೆ ಎಂದಿಗೂ ಮರೆಯಲಾಗದ ದಿನ ಇದಾಗಿದೆ ನಮ್ಮನ್ನು ಆಶೀರ್ವದಿಸಿದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು ಧನ್ಯವಾದಗಳು ನಿಮ್ಮ ಪ್ರೀತಿ ಹಾರೈಕೆಗಳು ಸದಾ ಹೀಗೆ ಇರಲಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಬರೆದುಕೊಂಡಿದ್ದಾರೆ

Get real time updates directly on you device, subscribe now.