ಬಿಗ್ ಬಾಸ್ ನಲ್ಲಿ ನಡೆಯಿತು ಲವ್ ಪ್ರಪೋಸಲ್, ದಿವ್ಯ ಹುರುಡುಗ ರವರು ಉಂಗುರ ನೀಡಿ ಹೇಳಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ, ಬಿಗ್ ಬಾಸ್ ಮನೆಯ ಪ್ರೇಮ ಪಕ್ಷಿಗಳು ಎಂದೇ ಹೆಸರಾಗಿರುವ ಅರವಿಂದ ಕೆಪಿ ಹಾಗೂ ದಿವ್ಯ ಉರುಡುಗ ನಡುವೆ ನೇರಾ ನೇರವಾಗಿ ಲವ್ ಪ್ರಪೋಸಲ್ ನಡೆದಿದ್ದು ದಿವ್ಯ ಉರುಡುಗ ರವರು ಅವರ ತಂದೆ ನೀಡಿದ್ದ ಚಿನ್ನದ ಉಂಗುರವನ್ನು ಅರವಿಂದ್ ರವರ ಕೈಗೆ ನೀಡಿ ಜೀವನ ಪೂರ್ತಿ ಜೊತೆಯಾಗಿರು ಎಂದು ಹೇಳುವ ಮೂಲಕ ಪ್ರೀತಿಯ ಸುದ್ದಿಗೆ ಮತ್ತಷ್ಟು ಬಲ ತುಂಬಿದ್ದಾರೆ.
ಹೌದು ಸ್ನೇಹಿತರೇ ಬಿಗ್ ಬಾಸ್ ಕೆಲವೊಂದು ಕೆಂಪು ಬಲೂನ್ ಗಳನ್ನು ಮನೆಗೆ ಕಳುಹಿಸಿ, ಹುಡುಗರು ತಮಗೆ ಇಷ್ಟವಾದ ಹುಡುಗಿಗೆ ಈ ಬಲೂನುಗಳನ್ನು ನೀಡಬೇಕು ಹಾಗೂ ಹುಡುಗಿಯರು ತಮ್ಮ ಬಳಿ ಇರುವ ತಮ್ಮ ಸ್ವಂತದ ವಸ್ತುಗಳನ್ನು ತಮಗೆ ಇಷ್ಟವಾದ ಹುಡುಗರಿಗೆ ನೀಡಬೇಕು ಎಂದು ಬಿಗ್ ಬಾಸ್ ಆದೇಶಿಸಿದ್ದರು.
ಮಂಜು ಪಾವಗಡ ರವರು ಅಂದು ಕೊಂಡಂತೆ ದಿವ್ಯ ಸುರೆಶ್ ರವರಿಗೆ ಬಲೂನ್ ನೀಡಿದರು, ಅದೇ ಸಮಯದಲ್ಲಿ ಮಾತನಾಡಿದ ರಾಜೀವ್ ರವರು ಶುಭ ಪೂಂಜಾ ರವರಿಗೆ ಬಲೂನ್ ನೀಡುವ ಮೂಲಕ ಶುಭ ಪೂಂಜಾ ರವರು ಮನಸ್ಸಿಗೆ ಹತ್ತಿರವಾದ ಸ್ನೇಹಿತೆ ಎಂದರು. ಇನ್ನು ರಘು ರಘು ರವರು ಅಂದು ಕೊಂಡಂತೆ ವೈಷ್ಣವೀ ರವರಿಗೆ ಬಲೂನ್ ನೀಡಿದರು. ಇದೇ ಸಮಯದಲ್ಲಿ ನನ್ನ ಮಗಳನ್ನು ದಿವ್ಯ ಸುರೇಶ್ ರವರನ್ನು ನೋಡಿದರೇ ನೆನಪಾಗುತ್ತದೆ ಅದೇ ಕಾರಣಕ್ಕಾಗಿ ಬಲೂನ್ ದಿವ್ಯ ಸುರೆಶ್ ರವರಿಗೆ ನೀಡುತ್ತೇನೆ ಎಂದು ಚಕ್ರವರ್ತಿ ಚಂದ್ರಚುಡ್ ರವರು ಹೇಳಿದರು.
ಇನ್ನು ಮತ್ತೊಂದು ಕಡೆ ಅರವಿಂದ ಕೆಪಿ ರವರು ದಿವ್ಯ ಅವರಿಗೆ ನೀಡಿ ದಿವ್ಯ ರವರು ನನ್ನ ಜೀವನದಲ್ಲಿ ಬಹಳ ಸ್ಪೆಷಲ್, ನಾನು ಮೊದಲಿನಿಂದಲೂ ಯಾರ ಬಳಿಯು ಕೂಡ ಹೆಚ್ಚು ಮಾತನಾಡುವುದಿಲ್ಲ ಆದರೆ ದಿವ್ಯ ರವರು ನಾನು ಮಾತನಾಡದೆ ಇದ್ದರೂ ಕೂಡ ನನ್ನ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿ ಕೊಳ್ಳುತ್ತಾರೆ, ಎಂದು ಭಾವುಕ ಮಾತುಗಳಲ್ಲಿ ದಿವ್ಯ ರವರಿಗೆ ಬಲೂನ್ ನೀಡಿದರು.
ಇತ್ತಕಡೆ ಮಾತನ್ನು ಆರಂಭಿಸಿದ ಹೆಣ್ಣು ಮಕ್ಕಳು ತಮ್ಮ ಸ್ವಂತ ವಸ್ತುಗಳನ್ನು ಹುಡುಗರಿಗೆ ನೀಡುವಾಗ, ಒಂದು ಹೆಜ್ಜೆ ಮುಂದೆ ಹೋದ ದಿವ್ಯ ಉರುಡುಗ ರವರು, ಅರವಿಂದ್ ರವರು ನನಗೆ ಎಷ್ಟು ಸ್ಪೆಷಲ್ ಅಂತ ಹೇಳೋಕೆ ಸಾಧ್ಯವೇ ಇಲ್ಲ, ನನ್ನ ಜೀವನದಲ್ಲಿ ಅವರು ಅಷ್ಟು ಸ್ಪೆಷಲ್, ಅವರು ನನ್ನ ಜೀವನದ ಪೂರ್ತಿ ನನ್ನ ಜೊತೆಗಿರಬೇಕು ಎಂಬ ಆಸೆ ನನಗಿದೆ, ಅದಕ್ಕಾಗಿಯೇ ನನ್ನ ಅಪ್ಪ ನನಗೆ ಪ್ರೀತಿಯಿಂದ ಕೊಟ್ಟಿರುವ ಈ ಚಿನ್ನದ ಉಂಗುರವನ್ನು ಅರವಿಂದ್ ರವರಿಗೆ ಕೊಡುತ್ತೇನೆ ಎಂದು ಹೇಳಿ ಉಂಗುರ ಕೊಟ್ಟರು.
ಈ ಮಾತುಗಳನ್ನು ಹೇಳುವಾಗ ಅರವಿಂದ ಕೆಪಿ ರವರು ಭಾವುಕರಾಗಿ ಕಣ್ಣೀರಿಡುತ್ತಿದ್ದರು, ಇದೇ ಸಮಯದಲ್ಲಿ ಮನೆಯ ಸದಸ್ಯರೆಲ್ಲರೂ ಕೂಡ ಜೋರಾಗಿ ಸದ್ದು ಮಾಡುತ್ತಾ ಪ್ರೇಮ ಪಕ್ಷಿಗಳ ಕಾಲೆಳೆಯಲು ಪ್ರಯತ್ನ ಪಟ್ಟರು. ದಿವ್ಯ ಉರುಡುಗ ಅವರ ಬಳಿ ತೆರಳಿದ ಅರವಿಂದ್ ರವರು ಉಂಗುರ ಪಡೆದು ಕೊಂಡರು. ಈ ಮೂಲಕ ಇಬ್ಬರ ನಡುವೆ ಪ್ರೀತಿ ಇದೆ ಎಂಬ ಮಾತಿಗೆ ಮತ್ತಷ್ಟು ಪುಷ್ಠಿ ದೊರೆಯಿತು. ಇದನ್ನು ಕಂಡ ನೆಟ್ಟಿಗರು ಬಹಳ ಸಂತಸ ವ್ಯಕ್ತಪಡಿಸಿದ್ದು, ನಿಜವಾಗಲೂ ಇವರಿಬ್ಬರೂ ನಿಜಜೀವನದಲ್ಲಿ ಒಂದಾದರೇ ಖಂಡಿತ ಉತ್ತಮ ಜೋಡಿ ಆಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.