ಯುವರತ್ನ ನಟಿ ಸಾಯೇಷಾ ಹಾಗೂ ಅವರ ಪತಿ ನಡುವೆಯಿರುವ ವಯಸ್ಸಿನ ಅಂತರ ಎಷ್ಟು ಗೊತ್ತೆ?? ಬಹುತೇಕ ಡಬಲ್.

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಹಲವಾರು ಯಶಸ್ವಿ ಚಿತ್ರಗಳನ್ನು ನೀಡುವ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಕೆಲವೇ ಕೆಲವು ತಿಂಗಳುಗಳಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ಕೊಂಡ ನಟಿ ಸಾಯೇಷಾ ರವರು ಇದೀಗ ಕನ್ನಡ ಚಿತ್ರರಂಗಕ್ಕೆ ಕೂಡ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಇವರು ನಟಿಸಿದ ಕನ್ನಡದ ಮೊದಲ ಚಿತ್ರ ಯುವರತ್ನ ಬಾಕ್ಸಾಫೀಸ್ ನಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.

ಪಕ್ಕ ಫ್ಯಾಮಿಲಿ ಎಂಟರ್ಟೈನರ್ ಹಾಗೂ ಯುವಕರಿಗೆ ಉತ್ತಮ ಸಂದೇಶವನ್ನು ಹೊತ್ತಿರುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಸಾಯೇಷಾ ರವರು ಮೊದಲ ಚಿತ್ರರಂಗದಲ್ಲಿ ಯಶಸ್ಸು ಪಡೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಚಿತ್ರದ ನಂತರ ಮತ್ಯಾವ ಕನ್ನಡ ಚಿತ್ರದಲ್ಲಿ ನಟಿಸುತ್ತಾರೆ ಎಂಬುದು ಕೂಡ ಅಭಿಮಾನಿಗಳಲ್ಲಿ ಉತ್ತರ ಸಿಗದ ಪ್ರಶ್ನೆಯಾಗಿದೆ. ಮೊದಲ ಚಿತ್ರದಲ್ಲಿ ಕಡಿಮೆ ಕಾಣಿಸಿಕೊಂಡರೂ ಕೂಡ ಬಹಳ ಮುದ್ದಾಗಿ ಕಾಣಿಸಿಕೊಂಡಿರುವ ಸಾಯೇಷಾ ಅವರ ಮುಂದಿನ ಕನ್ನಡ ಚಿತ್ರ ಯಾವುದು ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ.

ಇನ್ನು ಸಾಯೇಷಾ ಅವರ ವೈಯಕ್ತಿಕ ಜೀವನದ ಕುರಿತು ನಾವು ಮಾಹಿತಿ ನೀಡುವುದಾದರೆ ಇಂಗ್ಲೆಂಡ್ನಲ್ಲಿ ಜನಿಸಿದ ಇವರು ಮೂಲತಹ ಭಾರತದ ಮುಂಬೈ ನಗರದವರು, ಬಹುತೇಕ ತಮ್ಮ ಜೀವನದ ಸಮಯವನ್ನು ಇಂಗ್ಲೆಂಡ್ನಲ್ಲಿ ಕಳೆದಿರುವ ಇವರು ತೆಲುಗು ಚಿತ್ರರಂಗದ ಅಖಿಲ್ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತದ ನಂತರ ತಮಿಳು ಬಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿರುವ ಇವರು 2019ರಲ್ಲಿ ತಮಿಳು ಚಿತ್ರರಂಗದ ನಟ ಆರ್ಯ ಅವರನ್ನು ಮದುವೆಯಾಗಿದ್ದಾರೆ. ಇವರಿಬ್ಬರ ನಡುವಿನ ವಯಸ್ಸಿನ ಅಂತರವನ್ನು ನಾವು ಗಮನಿಸುವುದಾದರೆ ಸ್ನೇಹಿತರೇ ಇಂದಿನ ಲೆಕ್ಕಾಚಾರದ ಪ್ರಕಾರ ಸಾಯೇಷಾ ಅವರಿಗೆ ಕೇವಲ 23 ವರ್ಷ ಆರ್ಯ ರವರಿಗೆ ನಲವತ್ತು ವರ್ಷಗಳಾಗಿವೆ. ಅಂದರೆ ಇವರಿಬ್ಬರ ನಡುವಿನ ವಯಸ್ಸಿನ ಅಂತರ 17.

Get real time updates directly on you device, subscribe now.