ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ಚಂದ್ರಕಲಾ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಲಕ್ಷ ಗೊತ್ತಾ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಾಲ್ಕನೇ ವಾರದಲ್ಲಿ ಹಿರಿಯ ನಟಿ ಹಾಗೂ ಖ್ಯಾತ ಕಿರುತೆರೆಯ ಹಿರಿಯ ನಟಿಯಾಗಿರುವ ಚಂದ್ರಕಲಾ ಮೋಹನ್ ರವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಇತರ ಸ್ಪರ್ಧಿಗಳು ಬಹಳ ಉತ್ತಮವಾಗಿ ಆಟವಾಡುತ್ತಿರುವ ಕಾರಣ ಶಂಕರ್ ಹಾಗೂ ಚಂದ್ರಕಲಾ ರವರಲ್ಲಿ ಇಬ್ಬರು ಹೊರ ಬರಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು ಇದೀಗ ಆ ಮಾತು ನಿಜವಾಗಿದೆ.

ಇನ್ನು ಕಳೆದ ಕೆಲವು ದಿನಗಳ ಹಿಂದೆ ಚಂದ್ರಕಲಾ ರವರು ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡ ಕೆಲವೊಂದು ವೈಯಕ್ತಿಕ ಮಾತುಗಳು ಕೂಡ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ ಎಂಬುದು ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆಯಿಂದ ತಿಳಿದು ಬಂದಿದೆ, ಕೆಲವರು ಅವರ ವೈಯಕ್ತಿಕ ಜೀವನದ ನೋವನ್ನು ಹೇಳಿ ಕೊಂಡಿದ್ದಾರೆ ಎಂದು ಬೆಂಬಲಕ್ಕೆ ನಿಂತರೇ ಮತ್ತಷ್ಟು ಜನ ತಂದೆಯ ಕುರಿತು ಈ ರೀತಿಯ ವೇದಿಕೆಗಳಲ್ಲಿ ನೋವನ್ನು ಹಂಚಿಕೊಳ್ಳುವುದು ನಿಜಕ್ಕೂ ಬೇಡವಾಗಿತ್ತು ಎಂಬ ಅಭಿಪ್ರಾಯ ತಿಳಿಸಿದ್ದಾರೆ.

ಅದೇನೇ ಆಗಲಿ ಈ ಎರಡು ಪರ ಹಾಗೂ ವಿರೋಧದ ಚರ್ಚೆಗಳ ನಡುವೆ ಜನರು ನಾಲ್ಕನೇ ವಾರ ಚಂದ್ರಕಲಾ ಮೋಹನ್ ಅವರನ್ನು ಮನೆಯಿಂದ ಹೊರ ಕಳುಹಿಸುವ ನಿರ್ಧಾರ ಮಾಡಿದ್ದಾರೆ. ಇನ್ನು ಹೀಗೆ ನಾಲ್ಕನೇ ವಾರ ಮನೆಯಿಂದ ಹೊರ ಬಂದಿರುವ ಚಂದ್ರಕಲ ರವರ ಸಂಭಾವನೆ ಎಷ್ಟು ಎಂಬುದನ್ನು ನಾವು ನೋಡುವುದಾದರೆ, ಸ್ನೇಹಿತರೆ ಪ್ರತಿ ವಾರ ಚಂದ್ರಕಲಾ ಮೋಹನ್ ರವರು 40 ಸಾವಿರ ರೂಪಾಯಿಗಳನ್ನು ಸಂಭಾವನೆಗಾಗಿ ಪಡೆದು ಕೊಳ್ಳುತ್ತಿದ್ದರು, ಅಂದರೆ ಒಟ್ಟಾಗಿ ನಾಲ್ಕು ವಾರಗಳಿಗೆ 1.6 ಲಕ್ಷ ರೂಪಾಯಿಗಳನ್ನು ಸಂಭಾವನೆಯನ್ನಾಗಿ ಪಡೆದು ಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಇನ್ನು ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.