ಖ್ಯಾತ ಧಾರವಾಹಿಯ ನಟಿ ಇದೀಗ ಸಿನಿಮಾಗೆ ಎಂಟ್ರಿ ! ಬಿಗ್ ಬಾಸ್ ಕಿಶನ್ ಜೊತೆ ನಟಿಯಾಗಿ ಪಾದರ್ಪಣೆ

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಧಾರವಾಹಿಗಳು ದಿನೇ ದಿನೇ ಹೆಚ್ಚಿನ ಪ್ರಸಿದ್ದಿ ಪಡೆದು ಕೊಂಡಂತೆ ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟನೆ ಮಾಡಿರುವ ಕಲಾವಿದರು ಕೂಡ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ಕೊಳ್ಳುತ್ತಿದ್ದಾರೆ, ಹೀಗೆ ಜನಪ್ರಿಯತೆಯನ್ನು ಪಡೆದು ಕೊಂಡ ಬಳಿಕ ಬಹುತೇಕ ನಟಿಯರಿಗೆ ಸಿನಿಮಾಗಳಲ್ಲಿ ನಟನೆ ಮಾಡಲು ಅವಕಾಶ ಸಿಗುತ್ತಿದೆ.

ಇತ್ತೀಚೆಗಷ್ಟೇ ನಿಮಗೆಲ್ಲರಿಗೂ ತಿಳಿದಿರುವಂತೆ ಜೀ ಕನ್ನಡ ವಾಹಿನಿಯ ಪಾರು, ಜೊತೆ ಜೊತೆಯಲ್ಲಿ, ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿಯರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶ ಸಿಕ್ಕಿದೆ, ಇದೀಗ ಈ ಸರದಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಮತ್ತೊಬ್ಬ ನಾಟಿಗೆ ಅವಕಾಶ ಒದಗಿ ಬಂದಿದ್ದು, ಈ ಸಿನಿಮಾದಲ್ಲಿ ಬಿಗ್ಬಾಸ್ ಕಿಶನ್ ರವರು ನಟರಾಗಿ ನಟಿಸುತ್ತಿದ್ದಾರೆ.

ಹೌದು ಸ್ನೇಹಿತರೇ ಇದೀಗ ಕಿರುತೆರೆಯಿಂದ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿರುವ ನಟಿ ಮತ್ಯಾರು ಅಲ್ಲ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಗೀತ ಧಾರಾವಾಹಿ ನಟಿ ಭವ್ಯ ಗೌಡ, ಇವರು ಕಿರುತೆರೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದು ಕೊಂಡ ಬಳಿಕ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ಸಿನಿಮಾಗೆ ಡಿಯರ್ ಕಣ್ಮಣಿ ಎಂದು ಹೆಸರು ಕೂಡ ಇಡಲಾಗಿದೆ. ಗೀತಾ ಧಾರವಾಹಿಯಲ್ಲಿ ಭವ್ಯ ಗೌಡ ರವರು ಸಾಂಪ್ರದಾಯಿಕ ಪಾತ್ರದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾದಲ್ಲಿ ಮಾಡರ್ನ್ ಪಾತ್ರಕ್ಕೆ ನಟನೆ ಮಾಡಲಿದ್ದಾರೆ ಎಂಬುದು ತಿಳಿಸಿದ್ದಾರೆ.

Get real time updates directly on you device, subscribe now.