ನಟನೆ ಅಷ್ಟೇ ಅಲ್ಲಾ, ಹೊಸ ಉದ್ಯಮಕ್ಕೆ ಕೈ ಹಾಕಿದ ಮೇಘ ಶೆಟ್ಟಿ, ಏನು ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಜೊತೆ ಜೊತೆಯಲಿ ಧಾರಾವಾಹಿ ಪಾತ್ರಧಾರಿ ಮೇಘ ಶೆಟ್ಟಿ ರವರು ಇದೀಗ ಬಹು ಬೇಡಿಕೆಯ ಕಿರುತೆರೆಯ ಕಲಾವಿದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಧಾರವಾಹಿಯಲ್ಲಿ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಮೇಘ ಶೆಟ್ಟಿ ರವರು ಕೆಲವೊಂದು ಆಲ್ಬಮ್ ಸಾಂಗ್ ಗಳಿಗೆ ಕೂಡ ಹೆಜ್ಜೆ ಹಾಕಿದ್ದಾರೆ.
ಇನ್ನು ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಮೇಘ ಶೆಟ್ಟಿ ರವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಹೊಸ ಚಿತ್ರದಲ್ಲಿ ನಡೆಸುತ್ತಿದ್ದಾರೆ, ಈಗಾಗಲೇ ಚಿತ್ರ ಸೆಟ್ಟೇರಿದ್ದು ಇನ್ನೇನು ಕೆಲವೇ ಕೆಲವು ತಿಂಗಳುಗಳಲ್ಲಿ ಚಿತ್ರ ಬಿಡುಗಡೆ ಯಾಗಲಿದೆ. ಇನ್ನು ಇತ್ತೀಚೆಗಷ್ಟೇ ಗೃಹ ಪ್ರವೇಶ ಮಾಡಿ ಮುಗಿಸಿರುವ ಮೇಘ ಶೆಟ್ಟಿರವರಿಗೆ ಇದೀಗ ಹೊಸ ಉದ್ಯಮವೊಂದಕ್ಕೆ ಕೈ ಹಾಕಿದ್ದಾರೆ.
ಹೌದು ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಎಲ್ಲ ನಟ-ನಟಿಯರು ಸೇರಿದಂತೆ ಇನ್ನಿತರ ಸೆಲೆಬ್ರೆಟಿಗಳು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಹಾಗೂ ಅದೇ ಸಮಯದಲ್ಲಿ ಉದ್ಯಮವಾಗಿ ಮಾಡಲು ಯುಟ್ಯೂಬ್ ಚಾನೆಲ್ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಇದೀಗ ಮೇಘ ಶೆಟ್ಟಿ ರವರು ಹೊಸ ಯೂಟ್ಯೂಬ್ ಚಾನೆಲ್ ಒಂದನ್ನು ಆರಂಭ ಮಾಡಿದ್ದಾರೆ, ಈ ಕುರಿತು ಬರೆದು ಕೊಂಡಿರುವ ಮೇಘಾ ಶೆಟ್ಟಿ ರವರು ನಾನು ಪ್ರತಿದಿನ ವಿವಿಧ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತೇನೆ ನನ್ನ ಪ್ರೀತಿಯ ಅಭಿಮಾನಿಗಳಿಗಾಗಿ ಯುಟ್ಯೂಬ್ ಚಾನೆಲ್ ಪ್ರಾರಂಭಿಸುತ್ತಿದ್ದೇನೆ ಎಂದು ಹೇಳಿ ಸಬ್ಸ್ಕ್ರೈಬ್ ಮಾಡಲು ಮನವಿ ಮಾಡಿಕೊಂಡಿದ್ದಾರೆ.