ಹಿರಿಯ ನಟಿ ಲಕ್ಷ್ಮಿ ದೇವಿರವರ ಮೊಮ್ಮಗಳು ಕೂಡ ಖ್ಯಾತ ಧಾರವಾಹಿ ನಟಿ. ಯಾರು ಗೊತ್ತೇ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ನಾವು ಹಲವಾರು ಕಲಾವಿದರನ್ನು ಮರೆಯಲು ಸಾಧ್ಯವಿಲ್ಲ, ಹೆಚ್ಚಿನ ಸಿನಿಮಾಗಳಲ್ಲಿ ಹೆಚ್ಚಿನ ಸದ್ದು ಮಾಡದೇ, ನಾಯಕ ನಟಿಯಾಗಿ ಹೆಚ್ಚಿನ ಚಿತ್ರಗಳಲ್ಲಿ ನಟನೆ ಮಾಡದೇ ಇದ್ದರೂ ಕೂಡ ಚಿಕ್ಕ ಪಾತ್ರಗಳಾದರೂ ಚೊಕ್ಕ ಪಾತ್ರಗಳಲ್ಲಿ ನಿರ್ವಹಣೆ ಮಾಡಿರುವ ಕಲಾವಿದರು ಕನ್ನಡ ಚಿತ್ರರಂಗದ ಏಳಿಗೆಗೆ ತಮ್ಮದೇ ಆದ ಪ್ರತ್ಯೇಕ ಕೊಡುಗೆ ನೀಡಿದ್ದಾರೆ ಎಂದರೆ ತಪ್ಪಾಗಲಾರದು.

ಹೀಗೆ ಸರಿ ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿ, ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಪ್ರತ್ಯೇಕ ಕೊಡುಗೆ ನೀಡುವ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಹಿರಿಯ ನಟಿ ಎಂಎನ್ ಲಕ್ಷ್ಮೀದೇವಿ ರವರನ್ನು ಕೂಡ ಯಾರೂ ಮರೆಯಲು ಸಾಧ್ಯವಿಲ್ಲ,

ಇವರು ಅದೆಷ್ಟೋ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ, ನಿಮಗೆ ನೆನಪಾಗಬೇಕು ಎಂದರೇ ಯಶ್ ಹಾಗೂ ಕೃತಿ ಕರಬಂಧ ಕಾಂಬಿನೇಷನ್ ನಲ್ಲಿ ಮೂಡಿಬಂದ ಗೂಗ್ಲಿ ಸಿನಿಮಾದಲ್ಲಿ, ಕಾರಿನಲ್ಲಿ ಮದುವೆಗೆ ತೆರಳುವಾಗ ಅಜ್ಜಿಲೇಹ ತೆಗೆದುಕೊಂಡು ಹೋಗಬೇಕು ಎಂದು ಹತ್ತು ನಿಮಿಷಗಳು ಕೂಡ ಸ್ಕ್ರೀನ್ ನಲ್ಲಿ ಕಾಣಿಸದೇ ಇದ್ದರು ಮರೆಯ ದಂತಹ ಪಾತ್ರ ಮಾಡಿರುವ ನಟಿ ಮತ್ಯಾರು ಅಲ್ಲ ಅವರೇ ಲಕ್ಷ್ಮೀದೇವಿ.

ಈಗ್ಯಾಕೆ ಇದರ ಕುರಿತು ಎಂದುಕೊಂಡಿರಾ, ನಟಿ ಲಕ್ಷ್ಮೀದೇವಿ ರವರ ಮೊಮ್ಮಗಳು ಕೂಡ ಇದೀಗ ಕನ್ನಡ ಕಿರುತೆರೆಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ವಿವಿಧ ಧಾರವಾಹಿಗಳಲ್ಲಿ ವಿವಿಧ ಪಾತ್ರಗಳನ್ನು ನಟನೆ ಮಾಡುವ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ದೀಪಿಕಾ ಶರಣ್ ರವರು ಲಕ್ಷ್ಮೀದೇವಿ ರವರ ಮೊಮ್ಮಗಳು. ದೀಪಿಕಾ ಶರಣ್ ರವರು ಇತ್ತೀಚೆಗೆ ಯಾರೇ ನೀ ಮೋಹಿನಿ ಧಾರವಾಹಿ ಯಲ್ಲಿ ಹೆಚ್ಚು ಸದ್ದು ಮಾಡಿದ್ದಾರೆ, ಇನ್ನು ಪದ್ಮಾವತಿ ಧಾರವಾಹಿಯಲ್ಲಿ ಕೂಡ ನಟನೆ ಮಾಡಿದ್ದರು, ಮೇರಿ ಎಂಬ ಸಿನಿಮಾದಲ್ಲಿ ಕೂಡ ಇವರು ನಟನೆ ಮಾಡುತ್ತಿದ್ದಾರೆ.

Get real time updates directly on you device, subscribe now.