ಶಂಕರ್ ಅಶ್ವತ್ ಅವರು ನಡೆದುಕೊಂಡ ರೀತಿಗೆ ಮತ್ತೊಮ್ಮೆ ಎಲ್ಲರೂ ಫಿದಾ ! ಅಷ್ಟಕ್ಕೂ ಅವರು ಮಾಡಿದ್ದೇನು ಗೊತ್ತಾ?

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಶಂಕರ್ ಅಶ್ವತ್ಥ್ ರವರು ಬಹುಜನರ ಫೇವರೆಟ್ ಸ್ಪರ್ದಿಗಳಲ್ಲಿ ಒಬ್ಬರಾಗಿದ್ದಾರೆ, ಜೀವನದಲ್ಲಿ ಸಾಕಷ್ಟು ಕಂಡಿರುವ ಶಂಕರ್ ಅಶ್ವತ್ ರವರು ಕೇವಲ ಸಿಂಪತಿ ಆಧಾರದ ಮೇರೆಗೆ ಜನರನ್ನು ಸೆಳೆಯುತ್ತಿದ್ದಾರೆ ಎಂದು ಹಲವಾರು ಜನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು . ಆದರೆ ಶಂಕರ್ ಅಶ್ವತ್ ರವರು ಕೇವಲ ಸಿಂಪತಿ ಆಧಾರದ ಮೇರೆಗೆ ಜನರ ಮನ ಗೆದ್ದಿಲ್ಲ, ಬದಲಾಗಿ ತಮ್ಮದೇ ಆದ ನಡೆಗಳ ಮೂಲಕ ಶಂಕರ್ ಅಶ್ವತ್ ರವರು ಯಾಕೆ ಜನರು ತನ್ನನ್ನು ಇಷ್ಟಪಡುತ್ತಾರೆ ಎಂಬುದನ್ನು ತೋರಿಸುತ್ತಿದ್ದಾರೆ.

ಹೌದು ಸ್ನೇಹಿತರೆ ಇದೀಗ ಇದೇ ರೀತಿಯ ಪ್ರಸಂಗ ಮತ್ತೊಮ್ಮೆ ನಡೆದಿದ್ದು ಶಂಕರ್ ಅಶ್ವತ್ ರವರು ನಿಜಕ್ಕೂ ತಮ್ಮ ಉತ್ತಮ ನಡೆಯ ಮೂಲಕ ಮತ್ತೊಮ್ಮೆ ಜನರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಸ್ನೇಹಿತರೇ ಅರವಿಂದ್ ಹಾಗೂ ದಿವ್ಯ ರವರಿಗೆ ಸಿಕ್ಕಿದ್ದ ವಿಶೇಷವಾದ ಚಾರ್ಜರ್ ವಾಪಸ ನೀಡಿದ್ದರೆ ಬೆಡ್ರೂಮ್ ವಾಪಾಸ್ ಪಡೆಯಬಹುದಾಗಿತ್ತು ಆದರೆ ಈ ಜೋಡಿ ಅದಕ್ಕೆ ಒಪ್ಪಲಿಲ್ಲ.

ಈ ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿರುವ ಪ್ರತಿಯೊಬ್ಬರು ಕೂಡ ಬೇಸರಗೊಂಡಿದ್ದರು, ಇನ್ನು ಕೆಲವರು ಶಂಕರ್ ಅವರಿಗೆ ವಯಸ್ಸಾಗಿದೆ. ಅವರ ಮುಖ ನೋಡಿಯಾದರೂ ವಾಪಸ ನೀಡಬೇಕಾಗಿತ್ತು ಎಂದರು, ಆದರೆ ಇದೇ ಸಮಯದಲ್ಲಿ ಅರವಿಂದ್ ಹಾಗೂ ದಿವ್ಯ ರವರ ಬಳಿ ತೆರಳಿದ ಶಂಕರ್ ಅಶ್ವತ್ ನನಗೆ ವಯಸ್ಸಾಗಿದೆ ನನಗೆ ತೊಂದರೆ ಆಗಿದೆ ಎಂದು ಯಾವುದೇ ಕಾರಣಕ್ಕೂ ಭಾವಿಸಬೇಡಿ, ಬಿಗ್ ಬಾಸ್ ನೀಡಿರುವ ವಿಶೇಷ ಚಾರ್ಜರ್ ಇಟ್ಟುಕೊಳ್ಳುವ ಎಲ್ಲ ಹಕ್ಕು ನಿಮಗಿದೆ, ಇದು ನಿಮ್ಮ ನಿರ್ಧಾರ ನಿಮ್ಮ ನಿರ್ಧಾರದ ಕುರಿತು ನಾನು ಪ್ರಶ್ನೆ ಮಾಡುವುದಿಲ್ಲ, ನನ್ನ ಮುಖ ನೋಡಿ ನಿಮ್ಮ ನಿರ್ಧಾರ ಬದಲಾಯಿಸಬೇಡಿ ಇದು ಕೇವಲ ಆಟ ಎಂದು ಅರವಿಂದ್ ಹಾಗೂ ದಿವ್ಯ ರವರಿಗೆ ಹೇಳಿ ಮನಗೆದ್ದಿದ್ದಾರೆ

Get real time updates directly on you device, subscribe now.