ಬಿಗ್ ಬಾಸ್ ಮನೆಗೆ ಒಂದೆರಡು ದಿನಗಳ ಅತಿಥಿಯಾಗಿ ಬರುತ್ತಾರೆ ಕನ್ನಡದ ಸ್ಟಾರ್ ನಟಿ ! ಯಾರಂತೆ ಗೊತ್ತಾ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ಎಡವಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಪ್ರತಿ ಬಾರಿಯೂ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ ಎಂದರೆ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾರ್ಯಕ್ರಮವನ್ನು ನೋಡುತ್ತಿದ್ದರು. ಆದರೆ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮ ಉತ್ತಮ ಟಿಆರ್ಪಿ ಪಡೆದುಕೊಳ್ಳುವಲ್ಲಿ ಕೊಂಚ ವಿಫಲವಾಗಿದೆ.

ಅಚ್ಚರಿಯೆಂದರೆ ಸಾಮಾನ್ಯವಾಗಿ ವಾರದ ಕೊನೆಯ ದಿನ ಕಿಚ್ಚನ ಪಂಚಾಯತಿಯ ದಿನಗಳಂದು ಟಿಆರ್ಪಿ ಬಹಳ ಹೆಚ್ಚಿರುತ್ತಿತ್ತು. ಆದರೆ ಈ ಬಾರಿ ಕಿಚ್ಚನ ಪಂಚಾಯಿತಿಗೂ ಕೂಡ ಹೆಚ್ಚಿನ ಟಿಆರ್ಪಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಆಸಕ್ತಿದಾಯಕ ಟಾಸ್ಕ್ ಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ಸೆಳೆಯುವ ತಂತ್ರ ಮಾಡಲಾಗುತ್ತಿದೆ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿರುವ ಮಾತಿನಂತೆ ಪ್ರೇಕ್ಷಕರು ಬಿಗ್ ಬಾಸ್ ಕುರಿತು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ, ಇದಕ್ಕೆಲ್ಲ ಮೂಲ ಕಾರಣವೆಂದರೆ ಈ ಬಾರಿ ಹೆಚ್ಚಾಗಿ ಹೇಳಿಕೊಳ್ಳುವ ಸೆಲೆಬ್ರಿಟಿಗಳು ಮನೆಗೆ ಹೋಗಿಲ್ಲ ಹಾಗೂ ಮನೆಗೆ ಹೋಗಿರುವ ಸೆಲೆಬ್ರೆಟಿಗಳಲ್ಲಿ ಕೆಲವರನ್ನು ಹೊರತು ಪಡಿಸಿದರೇ ಉಳಿದವರ ಸೇಫ್ ಆಟಕ್ಕೆ ಮೊರೆಹೋಗಿ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ವಿಫಲವಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ಪ್ರೇಕ್ಷಕರನ್ನು ಬಿಗ್ ಬಾಸ್ ಮನೆಯ ಕಡೆ ತಿರುಗಿ ನೋಡುವಂತೆ ಮಾಡಿ ಮತ್ತೊಮ್ಮೆ ಪಿಆರ್ಪಿ ಲಿಸ್ಟಿನಲ್ಲಿ ಮೇಲಕ್ಕೇರಲು ಬಿಗ್ ಬಾಸ್ ಸಿದ್ಧತೆ ನಡೆಸುತ್ತಿದೆ ಎಂಬುದು ತಿಳಿದು ಬಂದಿದೆ, ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೇಗವಾಗಿ ಹಬ್ಬುತ್ತಿದ್ದು, ಹಲವಾರು ಜನರು ಈ ಸುದ್ದಿಯನ್ನು ಮೆಚ್ಚಿಕೊಂಡಿದ್ದಾರೆ ಹಾಗೂ ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿಯನ್ನು ಸ್ವಾಗತ ಮಾಡಲು ಸಿದ್ಧವಾದಂತೆ ಕಾಣುತ್ತಿದ್ದಾರೆ.

ಹೌದು ಸ್ನೇಹಿತರೇ ಬಿಗ್ ಬಾಸ್ ಮನೆಗೆ ಮತ್ತಷ್ಟು ರಂಗು ತರಲು ಬಿಗ್ ಬಾಸ್ ಆಯೋಜಕರು ಸಿದ್ಧತೆ ನಡೆಸಿದ್ದು ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚಿ ಇದೀಗ ಕನ್ನಡ ಚಿತ್ರರಂಗದಿಂದ ದೂರ ಉಳಿದಿರುವ ನಟಿಯನ್ನು ಒಂದೆರಡು ದಿನಗಳ ಕಾಲ ಅತಿಥಿ ಆಗಿ ಬಿಗ್ ಬಾಸ್ ಮನೆಯ ಒಳಗಡೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಇನ್ನು ಆನಟಿ ಮತ್ತ್ಯಾರು ಅಲ್ಲ ಅವರೇ, ಸಿನಿಮಾ ಮಾಡಿ ಹಲವಾರು ವರ್ಷಗಳಾಗಿದ್ದರೂ ಲಕ್ಷಾಂತರ ಜನರ ಬಾಯಲ್ಲಿ ಫೇವರೆಟ್ ನಟಿ ಯಾರು ಎಂದರೇ ಕೇಳಿ ಬರುವ ಮೊಟ್ಟ ಮೊದಲ ಹೆಸರು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ. ಹೌದು ಸ್ನೇಹಿತರೇ ಇದೀಗ ರಮ್ಯ ರವರನ್ನು ಬಿಗ್ ಬಾಸ್ ಮನೆಯ ಒಳಗಡೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದು, ಒಂದೆರಡು ದಿನಗಳ ಕಾಲ ಅತಿಥಿಯಾಗಿ ರಮ್ಯಾರವರು ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಒಂದು ವೇಳೆ ಅದೇ ನಡೆದಲ್ಲಿ ಖಂಡಿತ ಬಿಗ್ ಬಾಸ್ ಪ್ರೇಕ್ಷಕರು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Get real time updates directly on you device, subscribe now.