ಬಿಗ್ ಬಾಸ್ ರಾಜೀವ್ ರವರ ಹೆಂಡತಿಯನ್ನು ನೋಡಿದ್ದೀರಾ ಮೊದಲ ಬಾರಿಗೆ ತೋರಿಸುತ್ತೇವೆ ನೋಡಿ. ಹೇಗಿದೆ ಗೊತ್ತಾ ಕ್ಯೂಟ್ ಜೋಡಿ??

42

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಬಹಳ ಅತ್ಯುತ್ತಮವಾಗಿ ಆಟವಾಡಿ ಜನಪ್ರಿಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿರುವ ರಾಜೀವ್ ರವರು ಈ ಮುನ್ನ ಯುವಕರಿಗೆ ಬಹಳ ಚೆನ್ನಾಗಿ ತಿಳಿದಿದ್ದರು, ಯಾಕೆಂದರೆ ಕ್ರಿಕೆಟ್ ಲೀಗ್ ನಲ್ಲಿ ಸಾಕಷ್ಟು ಕೊಡುಗೆ ನೀಡಿ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿರುವ ರಾಜೀವ್ ರವರು ಯುವಕರಿಗೆ ಹೆಚ್ಚಾಗಿ ತಿಳಿದಿದ್ದರು. ಆದರೆ ಗೃಹಿಣಿಯರ ವಿಚಾರಕ್ಕೆ ಬಂದಾಗ ರಾಜೀವ್ ರವರು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿರಲಿಲ್ಲ, ಆದರೆ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ರಾಜೀವ್ ರವರು ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಬಹುತೇಕ ಮನೆಯಲ್ಲಿ ಗೃಹಿಣಿಯರು ತಪ್ಪದೆ ಬಿಗ್ ಬಾಸ್ ನೋಡುವ ಕಾರಣ ರಾಜೀವ್ ರವರು ಇದೀಗ ಚಿರಪರಿಚಿತ ಸೆಲೆಬ್ರಿಟಿ ಆಗುತ್ತಿದ್ದಾರೆ, ಇನ್ನು ಇತ್ತೀಚೆಗಷ್ಟೇ ಬಿಗ್ಬಾಸ್ ರಾಜೀವ್ ರವರಿಗೆ ವಿಶೇಷ ಅವಕಾಶವನ್ನು ನೀಡಿ ರಾಜೀವ್ ರವರ ಮನೆಯಿಂದ ವಿಶೇಷ ಸಂದೇಶವನ್ನು ಹೊತ್ತು ತಂದಿದ್ದರು, ಈ ಮೆಸೇಜ್ ನಲ್ಲಿ ರಾಜೀವ್ ರವರ ಪತ್ನಿ ರೇಷ್ಮಾ ರವರು ಮಾತನಾಡಿ, ಬೇಬಿ ಕ್ಯಾಪ್ಟನ್ ಆಗಿದ್ದಕ್ಕೆ ನಿನಗೆ ಶುಭಾಶಯಗಳು ಚೆನ್ನಾಗಿ ಆಟ ಆಡುತ್ತಿದ್ದೀಯಾ, ಹೀಗೆ ಆಟವನ್ನು ಮುಂದುವರೆಸಿ, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ, ನೀವು ಯಾವುದೇ ಕ್ರೀಡೆಯಲ್ಲಿ ತಂಡವನ್ನು ಬಹಳ ತಾಳ್ಮೆಯಿಂದ ಮುನ್ನಡೆಸುತ್ತೀರೀ, ಅದೇ ರೀತಿ ಬಿಗ್ ಬಾಸ್ ಮನೆಯಲ್ಲಿ ಕೂಡ ಕ್ಯಾಪ್ಟನ್ಸಿ ಮಾಡಿ, ನಿಮ್ಮ ಕೂದಲು ಕೆಳಗೆ ಕಟ್ಟಿರುವುದು ಚೆನ್ನಾಗಿಲ್ಲ, ನಾನು ಕಟ್ಟುವ ಹಾಗೆ ಮೇಲೆ ಜುಟ್ಟು ಕಟ್ಟಿಕೊಳ್ಳಿ ಎಂದು ಹೇಳಿದರು.

ಈ ಮೆಸೇಜ್ ಬಂದ ತಕ್ಷಣ ರಾಜೀವ್ ರವರಿಗೆ ಮದುವೆಯಾಗಿದೆ ಎಂದು ಎಲ್ಲರಿಗೂ ತಿಳಿಯಿತು, ಅಚ್ಚರಿಯೆಂದರೆ ಬಿಗ್ ಬಾಸ್ ಮನೆಯಲ್ಲಿ ಶುಭ ಪೂಂಜಾ ರವರಿಗೆ ಮಾತ್ರ ರಾಜೀವ್ ರವರಿಗೆ ಮದುವೆಯಾಗಿದೆ ಎಂಬುದು ತಿಳಿದಿತ್ತು, ಶಂಕರ ಅಶ್ವಥ್ ರವರಿಗೆ ರಾಜೀವ್ ಮದುವೆಯಾಗಿರುವ ವಿಚಾರ ತಿಳಿದೇ ಇರಲಿಲ್ಲ.

ಹೀಗೆ ರಾಜೀವ್ ಪತ್ನಿ ರವರು ಮಾತನಾಡಿದ ಮಾತುಗಳು ವೈರಲ್ ಆಗಿತ್ತು, ಇನ್ನು ರಾಜೀವ್ ರವರ ಪತ್ನಿ ರವರ ಕುರಿತು ನಿಮಗೆ ಮಾಹಿತಿ ನೀಡುವುದಾದರೆ, ರಾಜೀವ್ ಪತ್ನಿ ಒಬ್ಬರು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಆದ ಸ್ವಂತ ಸ್ಟುಡಿಯೋ ಹೊಂದಿರುವ ರೇಷ್ಮಾ ರವರು ರಾಜೀವ್ ರವರ ಎಲ್ಲ ಬಟ್ಟೆಗಳನ್ನು ತಾವೇ ಡಿಸೈನ್ ಮಾಡುತ್ತಾರೆ ಎಂಬುದು ತಿಳಿದು ಬಂದಿದೆ.

Get real time updates directly on you device, subscribe now.