ನೋಡಲು 20 ವರ್ಷದವರಂತೆ ಕಾಣುವ ನಾಗಿಣಿ ನಮ್ರತಾ ರವರ ನಿಜವಾದ ವಯಸ್ಸೆಷ್ಟು ಗೊತ್ತಾ??
ನಮಸ್ಕಾರ ಸ್ನೇಹಿತರೇ ಕಿರುತೆರೆಯಲ್ಲಿ ಪುಟ್ಟಗೌರಿ ಮದುವೆ ಮೂಲಕ ಜನಪ್ರಿಯತೆಯನ್ನು ಪಡೆದು ಕೊಂಡ ನಮ್ರತಾ ಗೌಡರವರು ತದ ನಂತರ ಇದೀಗ ಟಿವಿ ಧಾರಾವಾಹಿಗಳಲ್ಲಿ ನಟನೆ ಮಾಡಿ ಉತ್ತಮ ಕಲಾವಿದೆ ಎನಿಸಿಕೊಂಡಿದ್ದಾರೆ. ಹೀಗೆ ವಿವಿಧ ಧಾರಾವಾಹಿಗಳಲ್ಲಿ ನಟನೆ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದು ಕೊಂಡು ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ ಭಾಗ-2 ಧಾರಾವಾಹಿಯಲ್ಲಿ ನಾಯಕಿ ನಟಿಯಾಗಿ ಮಿಂಚುತ್ತಿದ್ದಾರೆ.
ಇವರು ನಟನೆ ಮಾಡುವ ರೀತಿ ಹಾಗೂ ಗಳಿಸುತ್ತಿರುವ ಜನಪ್ರಿಯತೆಯನ್ನು ನೋಡಿದರೇ ಖಂಡಿತ ಅವರಿಗೆ ಅವಕಾಶ ಸಿಕ್ಕರೆ ಬೆಳ್ಳಿ ಪರದೆ ಯಲ್ಲಿಯೂ ಕೂಡ ಭರವಸೆಯ ನಟಿಯಾಗಿ ಮಿಂಚು ವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಅದರ ಕುರಿತು ನಿಮಗೆ ತಿಳಿಯದ ಕೆಲವೊಂದು ವೈಯಕ್ತಿಕ ಮಾಹಿತಿಗಳನ್ನು ಇಂದು ನೀಡುತ್ತೇವೆ ಕೇಳಿ.
ಸ್ನೇಹಿತರೇ ನಟಿಯಾಗಿ ಮಿಂಚುತ್ತಿರುವ ನಮ್ರತಾ ರವರು ಉತ್ತಮ ಡ್ಯಾನ್ಸರ್ ಕೂಡ ಆಗಿದ್ದಾರೆ, ಹುಟ್ಟಿ ಬೆಳೆದಿದ್ದು ರಾಜಧಾನಿ ಬೆಂಗಳೂರಿನಲ್ಲಿ. ಆಚಾರ್ಯ ಎನ್ ಆರ್ ವಿ ಕಾಲೇಜಿನಿಂದ ಪದವಿಯನ್ನು ಪಡೆದು ಕೊಂಡಿರುವ ನಮ್ರತಾ ಗೌಡ ರವರು ಕೃಷ್ಣ ರುಕ್ಮಿಣಿ ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ತದ ನಂತರ ಪುಟ್ಟಗೌರಿ ಮದುವೆ ಯಲ್ಲಿ ಹಿಮಾ ಪಾತ್ರದಲ್ಲಿ ನಟಿಸುವ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರು. ಅದ್ಭುತವಾಗಿ ಡ್ಯಾನ್ಸ್ ಕೂಡ ಮಾಡುವ ನಮ್ರತಾ ರವರು ತಕದಿಮಿತ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಟಾಪ್ ಐದರ ಸ್ಪರ್ಧಿಗಳಲ್ಲಿ ಹೆಸರು ಪಡೆದು ಕೊಂಡಿದ್ದರು, ಇನ್ನು ನೋಡಲು 20 ವರ್ಷದ ಆಸುಪಾಸಿನಲ್ಲಿರುವವರಂತೆ ಕಾಣುವ ನಮ್ರತಾ ಅವರ ನಿಜವಾದ ವಯಸ್ಸು 27 ವರ್ಷ, 1993 ರಲ್ಲಿ ಜನಿಸಿರುವ ಇವರು ಇದೀಗ ಕನ್ನಡ ಕಿರುತೆರೆಯ ಭರವಸೆಯ ನಟಿ ಎನಿಸಿಕೊಂಡಿದ್ದಾರೆ.