ಮದುವೆ ಮಾಡಿಕೊಳ್ಳಲು ಸೀರಿಯಲ್ ಬಿಟ್ಟ ಚಂದನ್ ! ಹುಡುಗಿ ಯಾರು ಗೊತ್ತಾ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ತದ ನಂತರ ಧಾರವಾಹಿಗಳಲ್ಲಿ ಕೂಡಾ ಭಾಗವಹಿಸಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಕಿರುತೆರೆಯ ಖ್ಯಾತ ನಟ ಚಂದನ್ ರವರ ನಿಮಗೆಲ್ಲರಿಗೂ ತಿಳಿದಿರುವಂತೆ ಇತರ ಭಾಷೆಗಳ ಕಿರು ತೆರೆಯಲ್ಲಿಯೂ ಕೂಡ ನಟನೆ ಮಾಡುತ್ತಿದ್ದಾರೆ. ಬೆಳ್ಳಿಪರದೆಯಲ್ಲಿಯೂ ಕೂಡ ತಮ್ಮ ಅದೃಷ್ಟವನ್ನು ಪರೀಕ್ಷಿಸಿರುವ ಚಂದನ್ ರವರ ವಿವಿಧ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.

ಇನ್ನು ಎಷ್ಟು ದಿವಸ ಚಂದನ್ ರವರು ಹೋದ ಕಡೆಯಲ್ಲಾ ಪ್ರತಿ ಬಾರಿಯೂ ಚಂದನ್ ರವರಿಗೆ ಮದುವೆ ಕುರಿತು ಸಾಕಷ್ಟು ಪ್ರಶ್ನೆಗಳು ಕೇಳಿ ಬರುತ್ತಿದ್ದವು. ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಚಂದನ್ ರವರ ಮದುವೆಯ ಕುರಿತು ಪ್ರಶ್ನೆಗಳು ಹೆಚ್ಚಾಗಿ ಕೇಳಿ ಬರುತ್ತಿದ್ದವು, ಇನ್ನು ಇವರು ಬಹುತೇಕ ಬಾರಿ ಹೊರಗಿನ ಪ್ರಪಂಚ ದಲ್ಲಿ ಕಾಣಿಸಿಕೊಂಡಾಗಲೆಲ್ಲ ಲಕ್ಷ್ಮೀ ಬಾರಮ್ಮ ಧಾರವಾಹಿ ಯಲ್ಲಿ ಚಿನ್ನು ಪಾತ್ರದಾರಿ ಕವಿತ ಗೌಡ ರವರ ಜೊತೆ ಹೆಚ್ಚಾಗಿ ಕಾಣಿಸುತ್ತಿದ್ದ ಕಾರಣ ಇವರಿಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಹಾಗೂ ಪ್ರಶ್ನೆಗಳು ಕೂಡ ಮೂಡಿದ್ದವು.

ಒಟ್ಟಿನಲ್ಲಿ ಇದೀಗ ಈ ಕಾಲ ಬಂದಂತೆ ಕಾಣುತ್ತಿದ್ದು ಚಂದನ್ ರವರು ತಮ್ಮ ಮದುವೆಗಾಗಿ ಸೀರಿಯಲ್ ನಿಂದ ಬ್ರೇಕ್ ತೆಗೆದು ಕೊಂಡಿದ್ದಾರೆ, ಈ ವಿಷಯವನ್ನು ಅವರೇ ಖಚಿತಪಡಿಸಿದ್ದು ಹುಡುಗಿ ಕವಿತಾ ಗೌಡ ರವರೆ ಎಂದು ಪ್ರಶ್ನೆ ಮಾಡಿದಾಗ ಚಂದನ್ ರವರು ಈಗಲೂ ಕೂಡ ಮೌನಕ್ಕೆ ಜಾರಿದ್ದಾರೆ, ಇಲ್ಲ ಎಂದು ಕೂಡ ಉತ್ತರ ನೀಡಿಲ್ಲ ಅಷ್ಟೇ ಅಲ್ಲದೆ ಯಾರು ಎಂದು ಹೇಳಿ ಎಂದು ಕೇಳಿದಾಗ ಈಗಲೇ ಈ ವಿಷಯ ಹೇಳಿದರೆ ಸುದ್ದಿ ದೊಡ್ಡದಾಗುತ್ತದೆ ಎಂದು ಸುಮ್ಮನಾಗಿದ್ದಾರೆ. ಇತ್ತೀಚೆಗೆ ಮಿಲನ ನಾಗರಾಜ್ ಹಾಗೂ ಕೃಷ್ಣರವರ ಮದುವೆಯಲ್ಲಿಯು ಕೂಡ ಚಂದನ್ ಹಾಗೂ ಕವಿತಾ ರವರು ಒಟ್ಟಾಗಿ ಕಾಣಿಸಿಕೊಂಡು ಸದ್ದು ಮಾಡಿದರು.

Get real time updates directly on you device, subscribe now.