ಡಿ ಬಾಸ್ ರಾಬರ್ಟ್ ಕಂಡು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು ಗೊತ್ತಾ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡದ ಖ್ಯಾತ ನಟರಲ್ಲಿ ಒಬ್ಬರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಟಿಸಿರುವ ರಾಬರ್ಟ್ ಸಿನಿಮಾ ವರ್ಣರಂಜಿತ ಓಪನಿಂಗ್ ಪಡೆದು ಕೊಂಡಿದೆ. ಕನ್ನಡ ಚಿತ್ರರಂಗದ ಎಲ್ಲ ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡಿರುವ ರಾಬರ್ಟ್ ಸಿನಿಮಾ ಇದೀಗ ದಾಖಲೆಗಳನ್ನು ತನ್ನ ಹೆಸರಿಗೆ ಬರಿಸಿಕೊಳ್ಳುವ ಸರದಿಯನ್ನು ಆರಂಭಿಸಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿರುವ ರಾಬರ್ಟ್ ಸಿನಿಮಾ ತೆಲುಗಿನಲ್ಲಿಯೂ ಕೂಡ ಧೂಳೆಬ್ಬಿಸುವುದರಲ್ಲಿ ಯಶಸ್ವಿಯಾಗಿದೆ.

ಇನ್ನು ಕನ್ನಡದ ಮತ್ತೊಬ್ಬ ಖ್ಯಾತ ನಟ ಯಶ್ ರವರನ್ನು ನ್ಯಾಷನಲ್ ಲೆವೆಲ್ ಗೆ ತೆಗೆದು ಕೊಂಡು ಹೋಗಿ ಇಡೀ ಭಾರತವನ್ನು ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ರವರು ರಾಬರ್ಟ್ ಸಿನಿಮಾ ಬಿಡುಗಡೆ ಯನ್ನು ಕಂಡು ತಮ್ಮದೇ ಆದ ರೀತಿಯಲ್ಲಿ ರಾಬರ್ಟ್ ಸಿನಿಮಾ ಕುರಿತು ವಿಶೇಷ ಮಾತುಗಳನ್ನು ಹಾಡಿದ್ದಾರೆ.

ಹೌದು ಸ್ನೇಹಿತರೇ ಕೆಜಿಎಫ್ ಚಿತ್ರ ತಂಡದ ಕಲಾವಿದರು ಈಗಾಗಲೇ ರಾಬರ್ಟ್ ಸಿನಿಮಾಗೆ ವಿಶೇಷ ಶುಭಾಶಯವನ್ನು ತಿಳಿಸಿದೆ. ಇದಾದ ಬಳಿಕ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಾಂತ್ ನೀಲ್ ರವರು ರಾಬರ್ಟ್ ತಂಡಕ್ಕೆ ಒಳ್ಳೆಯದಾಗಲಿ, ದರ್ಶನ್ ಸರ್ ರವರಿಗೆ ದೊಡ್ಡ ಅಭಿನಂದನೆಗಳು, ನಿರ್ದೇಶಕ ತರುಣ್ ಸುಧೀರ್ ಹಾಗೂ ಉಮಾಪತಿ ರವರಿಗೆ ಕೂಡ ಅದ್ದೂರಿ ಓಪನಿಂಗ್ ಪಡೆದುಕೊಂಡ ಕಾರಣ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ, ಎರಡು ಹಬ್ಬಗಳು ಒಂದೇ ದಿನ ಬಂದಿವೆ ಎಂದಿದ್ದಾರೆ. ಅಂದರೆ ನಿನ್ನೆ ಶಿವರಾತ್ರಿ ಹಬ್ಬ ಇದ್ದ ಕಾರಣ ಶಿವರಾತ್ರಿ ಹಾಗೂ ರಾಬರ್ಟ್ ಸಿನಿಮಾ ಎರಡನ್ನೂ ಸೇರಿಸಿ ಎರಡು ಹಬ್ಬಗಳು ಎಂದು ಹೇಳಿದ್ದಾರೆ.

Get real time updates directly on you device, subscribe now.