ಕೊನೆಗೂ ರಾಬರ್ಟ್ ಸಿನಿಮಾದ ಅಧಿಕೃತ ಕಲೆಕ್ಷನ್ ಹೊರಗೆ ! ಇಷ್ಟೇನಾ ಅಂದ್ರು ಡಿ ಬಾಸ್ ಫ್ಯಾನ್ಸ್ ! ಎಷ್ಟು ಗೊತ್ತೆ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ರಾಬರ್ಟ್ ಸಿನಿಮಾ ಇದೀಗ ನಿನ್ನೆಯಷ್ಟೇ ಕರ್ನಾಟಕ ಹಾಗೂ ತೆಲುಗು ರಾಜ್ಯಗಳಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕ್ಷಣದಿಂದಲೂ ರಾಬರ್ಟ್ ಚಿತ್ರದ ಸಿನಿಮಾದ ಕುರಿತು ಹಾಗೂ ಸಿನಿಮಾ ಮೊದಲ ದಿನದಲ್ಲಿ ಮಾಡಿದ ಕಲೆಕ್ಷನ್ ಕುರಿತು ಹೆಚ್ಚಿನ ಚರ್ಚೆ ನಡೆಯುತ್ತಿದೆ. ಹೀಗೆ ಹೆಚ್ಚಿನ ಚರ್ಚೆ ಆರಂಭವಾದ ತಕ್ಷಣ ಅಂದಾಜಿನ ಲೆಕ್ಕಾಚಾರಗಳು ಕೇಳಿ ಬಂದಿದ್ದವು.

ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ಕೂಡ ಅಂದಾಜಿನ ಲೆಕ್ಕಾಚಾರಗಳು ಕೇಳಿ ಬರುತ್ತವೆ, ಅದರಲ್ಲಿಯೂ ನೆನ್ನೆಯಿಂದ ರಾಬರ್ಟ್ ಸಿನಿಮಾ ಬರೋಬ್ಬರಿ ಮೊದಲ ದಿನದಂದು 40 ಕೋಟಿ ಗಳಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದೆ ಎಂಬ ಪೋಸ್ಟ್ ಗಳು ಹರಿದಾಡುತ್ತಿವೆ, ಕನ್ನಡದ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಟಿವಿ 9 ಕೂಡ ಅಂದಾಜಿನ ಲೆಕ್ಕಾಚಾರಗಳನ್ನು ಬಿಡುಗಡೆ ಮಾಡಿ 25 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಆಗಿದೆ ಎಂದು ಹೇಳಿಕೆ ನೀಡಿತು, ಅದೇ ಸಮಯದಲ್ಲಿ 20 ಕೋಟಿ, 40 ಕೋಟಿ,25 ಕೋಟಿ ಹೀಗೆ ವಿವಿಧ ಅಂಕಿ ಅಂಶಗಳು ಕೇಳಿಬರುತ್ತಿವೆ.

ಆದರೆ ಇದೀಗ ನಿನ್ನೆಯ ಲೆಕ್ಕಾಚಾರಗಳ ನಡುವೆ ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ಸರಿಯಾದ ಲೆಕ್ಕಗಳು ಹೊರ ಬಂದಿದ್ದು, ಕೊನೆಗೂ ಥಿಯೇಟರುಗಳಿಂದ ಹಾಗೂ ಬುಕ್ ಮೈ ಶೋ ಸಂಸ್ಥೆಯಿಂದ ಅಧಿಕೃತ ಟಿಕೆಟ್ ಮಾರಾಟವಾದ ಸಂಖ್ಯೆಗಳನ್ನು ತೆಗೆದುಕೊಂಡು ಎಷ್ಟು ಕೋಟಿ ಮಾಡಿದೆ ಎಂಬುದು ತಿಳಿದು ಬಂದಿದೆ, ಹೌದು ಸ್ನೇಹಿತರೇ ಇದೀಗ ಬಂದಿರುವ ಲೆಕ್ಕಾಚಾರಗಳ ಪ್ರಕಾರ ಸರಿಯಾಗಿ ರಾಬರ್ಟ್ ಸಿನಿಮಾ ಮೊದಲನೇ ದಿನ 17.24 ಕೋಟಿ ಹಾಗೂ ತೆಲುಗಿನ ರಾಜ್ಯಗಳಲ್ಲಿ 3.12 ಕೋಟಿ ಹಣವನ್ನು ಗಳಿಸಿದೆ. ಸಾವಿರದ ಐನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಇಷ್ಟು ಹಣ ಗಳಿಸಿದೆ, ಈ ಅಂಕಿ ಅಂಶಗಳನ್ನು ಗಮನಿಸುವುದಾದರೇ ಕೆಜಿಎಫ್ ಚಿತ್ರ ಬಿಡುಗಡೆಯಾದ ದಿನ 24 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಮೊದಲನೇ ಸ್ಥಾನದಲ್ಲಿದೆ (ಕನ್ನಡ 18 ಕೋಟಿ, ಬೇರೆ ಭಾಷೆ 6 ಕೋಟಿ).

Get real time updates directly on you device, subscribe now.