ಕಾಣಿಸುವಷ್ಟು ಯಂಗ್ ಅಲ್ಲ ಬಿಗ್ ಬಾಸ್ ಮನೆಯ ಚೆಲುವೆ ದಿವ್ಯ ಉರುಡುಗ ! ವಯಸ್ಸೆಷ್ಟು ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಕ್ಯೂಟ್ ಆದ ಹುಡುಗಿಯೊಬ್ಬಳು ಇದೀಗ ಪ್ರೇಕ್ಷಕರ ಮನವನ್ನು ಕದಿಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇನ್ನೂ ಹೆಚ್ಚಿನ ಸದ್ದು ಮಾಡದೆ ಇದ್ದರೂ ಕೂಡ ಹುಡುಗರು ಇವರಿಗಾಗಿ ಬಿಗ್ ಬಾಸ್ ನೋಡುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಟ್ರೋಲ್ ಪೇಜ್ ಗಳು ದಿವ್ಯ ಉರುಡುಗ ರವರ ಫೋಟೋಗಳನ್ನು ಹಾಕುತ್ತಾ ಇವರಿಗಾಗಿಯೇ ಬಿಗ್ ಬಾಸ್ ನೋಡುತ್ತಿದ್ದೇವೆ ಎನ್ನುತ್ತಿದ್ದಾರೆ

ಕನ್ನಡ ಕಿರುತೆರೆಯಲ್ಲಿ ವಿವಿಧ ಧಾರವಾಹಿಗಳಲ್ಲಿ ನಟಿಸಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡು ತದ ನಂತರ ಕನ್ನಡ ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಿ ಅಲ್ಲಿಯೂ ಕೂಡ ಹುಲಿರಾಯ, ಫೇಸ್ ಟು ಫೇಸ್, ಧ್ವಜ ಹಾಗೂ ರಾಂಚಿ ಚಿತ್ರಗಳ ಮೂಲಕ ಭರ್ಜರಿಯಾಗಿ ಸದ್ದು ಮಾಡಿ ಇದೀಗ ಬಿಗ್ ಬಾಸ್ ಮನೆಗೆ ತೆರಳಿರುವ ದಿವ್ಯ ಉರುಡುಗ ರವರು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಪಡೆದು ಕೊಂಡಿದ್ದಾರೆ.

2017ರಲ್ಲಿ ಕನ್ನಡ ಬೆಳ್ಳಿ ಕೆರೆಗೆ ಹೆಜ್ಜೆಯಿಟ್ಟ ದಿವ್ಯ ಉರುಡುಗ ರವರು ಮೂಲತಃ ಮಂಗಳೂರಿನವರಾಗಿದ್ದರೂ ಕೂಡ ಸಂಪೂರ್ಣವಾಗಿ ಬೆಳೆದಿದ್ದು ಬೆಂಗಳೂರಿನಲ್ಲಿ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯ ರಾಗಿರುವ ದಿವ್ಯ ಉರುಡುಗ ರವರು ಸುಮಾರು ಒಂದುವರೆ ಲಕ್ಷ ಆಸುಪಾಸಿನಲ್ಲಿ ಬೆಂಬಲಿಗರನ್ನು ಹೊಂದಿದ್ದಾರೆ. ಇನ್ನು ನೋಡಲು 25 ಆಸು ಪಾಸಿನವರಂತೆ ಕಾಣುವ ದಿವ್ಯ ಉರುಡುಗ ರವರು ಹುಟ್ಟಿದ್ದು 1990 ರಲ್ಲಿ, ಅಂದರೆ ಇದೀಗ ಇವರ ವಯಸ್ಸು 31 ವರ್ಷ. ಇವರು ಬಿಗ್ ಬಾಸ್ ಮನೆಯಲ್ಲಿ ಆಟ ಹಾಡುತ್ತಿರುವ ರೀತಿಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Get real time updates directly on you device, subscribe now.