ಮನೆಯಿಂದ ಹೊರಗಡೆ ಬಂದ ಧನುಶ್ರೀ ಸಿಕ್ಕ ಸಂಭಾವನೆ ಎಷ್ಟು ಗೊತ್ತೆ?? ಯಪ್ಪಾ ಇಷ್ಟೊಂದ
ನಮಸ್ಕಾರ ಸ್ನೇಹಿತರೇ ಕನ್ನಡದ ಬಹು ನಿರೀಕ್ಷಿತ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇದೀಗ ಮೊದಲನೇ ವಾರದ ಎಲಿಮಿನೇಷನ್ ನಡೆದಿದೆ. ಟಿಕ್ ಟಾಕ್ ಮೂಲಕ ಜನಪ್ರಿಯತೆ ಗಳಿಸಿ ಮನೆಯ ಒಳಗಡೆ ಕಾಲಿಟ್ಟಿದ್ದ ಧನುಶ್ರೀ ರವರ ಮೊದಲನೇ ವಾರದಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ನಡೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಕುರಿತು ಹೆಚ್ಚಿನ ಚರ್ಚೆ ನಡೆದಿತ್ತಾದರೂ ಹೆಚ್ಚಿನ ಪ್ರೇಕ್ಷಕರ ಮನಗೆಲ್ಲುವಲ್ಲಿ ಧನುಶ್ರೀ ರವರು ಮೊದಲ ವಾರದಲ್ಲಿ ಕೊಂಚ ವಿಫಲವಾಗಿದ್ದಾರೆ.
ಟಿಕ್ ಟಾಕ್ ಅಪ್ಲಿಕೇಶನ್ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಧನುಶ್ರೀ ರವರ ಮನೆಗೆ ತೆರಳಿದಾಗ ಖಂಡಿತ ಅಭಿಮಾನಿಗಳು ಇವರನ್ನು ಮನೆಯಲ್ಲಿ ಉಳಿಸಿಕೊಳ್ಳುತ್ತಾರೆ ಎಂದು ನಂಬಲಾಗಿತ್ತು, ಲಕ್ಷಾಂತರ ಫಾಲ್ಲೋರ್ ಗಳು ಇರುವ ಕಾರಣ ನಿರ್ಮಲ ರವರು ಹೊರ ಬರುತ್ತಾರೆ ಎಂದು ನಂಬಲಾಗಿತ್ತು, ಆದರೆ ಕೊನೆಯದಾಗಿ ನಿರ್ಮಲ ರವರು ಸೇಫಾಗಿ ಧನುಶ್ರೀ ರವರು ಮನೆಯಿಂದ ಹೊರ ಬಂದಿದ್ದಾರೆ.
ಇನ್ನು ಹೀಗೆ ಮೊದಲನೇ ವಾರದಲ್ಲಿ ಹೊರ ಬಂದಿರುವ ಧನುಶ್ರೀ ರವರ ಸಂಭಾವನೆ ಕುರಿತು ಮಾತನಾಡುವುದಾದರೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಧನುಶ್ರೀ ರವರಿಗೆ ಒಂದು ವಾರಕ್ಕೆ 20 ಸಾವಿರ ರೂಪಾಯಿ ಸಂಭಾವನೆ ನೀಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಪ್ರತಿ ವಾರಕ್ಕೆ 20 ಸಾವಿರ ರೂಪಾಯಿಗಳಂತೆ ಲೆಕ್ಕ ಹಾಕಲಾಗುತ್ತಿತ್ತು, ಈಗ ಮೊದಲನೇ ವಾರದಲ್ಲಿ ಇವರು ಹೊರ ಬರುವ ಮೂಲಕ ಇವರಿಗೆ ಕೇವಲ ಒಂದು ವಾರದ ಸಂಭಾವನೆ ಮಾತ್ರ ಲಭ್ಯವಾಗಿದೆ. ಅಂದರೆ ಬಿಗ್ ಬಾಸ್ ಮನೆಗೆ ತೆರಳಿ ಕೇವಲ 20 ಸಾವಿರ ರೂಪಾಯಿ ಗಳಿಸಿ ಧನುಶ್ರೀ ರವರು ಮನೆಯಿಂದ ಹೊರ ಬಂದಿದ್ದಾರೆ.