ಅನು ಸಿರಿಮನೆ ಗೃಹಪ್ರವೇಶಕ್ಕೆ ಅನಿರುದ್ಧ್ ಕೊಟ್ಟ ಭರ್ಜರಿ ಉಡುಗೊರೆಯೇನು ಗೊತ್ತಾ??

10

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಕಿರುತೆರೆಯಲ್ಲಿ ಬಹಳ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಧಾರವಾಹಿಗಳಲ್ಲಿ ಒಂದಾಗಿರುವ ಜೊತೆ ಜೊತೆಯಲ್ಲಿ ದಾರವಾಹಿ ಮೂಲಕ ಬಾರಿ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಅನು ಪಾತ್ರದಾರಿ ಮೇಘ ಶೆಟ್ಟಿರವರಿಗೆ ಬೆಂಗಳೂರು ನಗರದಲ್ಲಿ ಹೊಸ ಮನೆ ಕಟ್ಟಿಸಿ ಇತ್ತೀಚೆಗೆ ಗೃಹ ಪ್ರವೇಶ ಮಾಡಿ ಮುಗಿಸಿದ್ದಾರೆ. ಹೆಚ್ಚಿನ ಸದ್ದಿಲ್ಲದಂತೆ ಗೃಹ ಪ್ರವೇಶ ಮಾಡಿ ಮುಗಿಸಿರುವ ಮೇಘ ಶೆಟ್ಟಿ ರವರು ಕೇವಲ ಆತ್ಮೀಯರನ್ನು ಮಾತ್ರ ಗೃಹಪ್ರವೇಶಕ್ಕೆ ಆಹ್ವಾನಿಸಿದ್ದರು ಎನ್ನಲಾಗಿದೆ

ಇನ್ನು ಗೃಹಪ್ರ ವೇಶಕ್ಕೆ ಜೊತೆ ಜೊತೆಯಲ್ಲಿ ತಂಡದ ಎಲ್ಲಾ ಕಲಾವಿದರಿಗೂ ಆಹ್ವಾನ ನೀಡಲಾಗಿತ್ತು ಅದರಂತೆ ಬಹುತೇಕರು ಮೇಘ ಶೆಟ್ಟಿ ರವರ ಗೃಹ ಪ್ರವೇಶಕ್ಕೆ ತೆರಳಿ ಶುಭ ಹಾರೈಸಿದ್ದಾರೆ. ಈ ಕುರಿತು ಮಾಧ್ಯಮಗಳಲ್ಲಿ ಹೆಚ್ಚಿನ ಸುದ್ದಿ ಪ್ರಸಾರವಾಗದೆ ಇದ್ದರೂ ಮೇಘ ಶೆಟ್ಟಿ ರವರು ಹಂಚಿಕೊಂಡಿರುವ ಫೋಟೋಗಳು ಇದೀಗ ವೈರಲ್ ಆಗುತ್ತಿದೆ.

ಇನ್ನು ಜೊತೆ ಜೊತೆಯಲ್ಲಿ ಧಾರವಾಹಿಯಲ್ಲಿ ಆರ್ಯವರ್ಧನ್ ಪಾತ್ರದಲ್ಲಿ ನಟನೆ ಮಾಡುತ್ತಿರುವ ಅನಿರುದ್ ರವರು ಕೂಡ ಮೇಘ ಶೆಟ್ಟಿ ರವರ ಗೃಹ ಪ್ರವೇಶಕ್ಕೆ ಹೋಗಿ ಶುಭಹಾರೈಸಿ ಬಂದಿದ್ದಾರೆ, ಗೃಹ ಪ್ರವೇಶಕ್ಕೆ ಹೋಗಿದ್ದ ಅನಿರುದ್ ರವರು ಮೇಘ ಶೆಟ್ಟಿರವರಿಗೆ ಗೃಹಪ್ರ ವೇಶದ ಅಂಗವಾಗಿ ಒಂದು ಟಿವಿಯನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ ಎನ್ನಲಾಗಿದೆ, ಇನ್ನು ಟಿವಿಯ ಬೆಲೆ ಬರೋಬ್ಬರಿ ಎಂಟು ಲಕ್ಷ ಅಂತೆ. ಇನ್ನು ಇದೇ ಸಂದರ್ಭದಲ್ಲಿ ಜೊತೆ ಜೊತೆಯಲಿ ಕಲಾವಿದರ ತಂಡ ವಿವಿಧ ಉಡುಗೊರೆಗಳ ಮೂಲಕ ಶುಭ ಹಾರೈಸಿದ್ದಾರೆ ಎಂಬುದು ತಿಳಿದು ಬಂದಿದೆ.

Get real time updates directly on you device, subscribe now.