ನಮ್ಮೆಲ್ಲರ ನೆಚ್ಚಿನ ನಟಿಯರ ಬಯೋಪಿಕ್ ನಲ್ಲಿ ನಟಿಸುವಾಸೆ ಎಂದ ರಶ್ಮಿಕ ! ಬೇಡವೇ ಬೇಡ ಎಂದ ಕನ್ನಡಿಗರು ಯಾಕೆ ಗೊತ್ತಾ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಇದೀಗ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ರವರು, ಸದಾ ಒಂದಲ್ಲ ಒಂದು ವಿವಾದಗಳು ತಮ್ಮ ಸುತ್ತ ಸುತ್ತುವಂತೆ ಮಾಡಿ ಕೊಂಡಿರುತ್ತಾರೆ. ಇವರು ಕನ್ನಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾಗಿ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಭಾಷೆಯ ಕುರಿತು ನಡೆದ ಹೇಳಿಕೆಗಳು ವಿವಾದ ಸೃಷ್ಟಿಸಿದ್ದರು.

ತದನಂತರ ತೆಲುಗು ಚಿತ್ರದಲ್ಲಿ ಅವಕಾಶ ಪಡೆದು ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ರವರು ಇಷ್ಟೆಲ್ಲ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಿದ್ದರೂ ಕೂಡ ಟ್ರೋಲ್ಗಳು ಇವರಿಂದ ದೂರ ಸರಿದಿಲ್ಲ, ಸದಾ ಟ್ರೋಲ್ ಪೇಜ್ ಗಳಿಗೆ ಇವರಿಂದ ಸಾಕಷ್ಟು ವಿಷಯಗಳು ಸಿಗುತ್ತವೆ, ಎಂದಿನಂತೆ ಟ್ರೋಲ್ ಪೇಜ್ ಗಳು ಸಾಕಷ್ಟು ಪ್ರೀತಿಯಲ್ಲಿ ರಶ್ಮಿಕಾ ಮಂದಣ್ಣ ರವರನ್ನು ಟ್ರೋಲ್ ಮಾಡುತ್ತಿರುತ್ತಾರೆ.

ಇದೀಗ ಅದೇ ರೀತಿಯ ಘಟನೆ ಯೊಂದು ನಡೆದಿದ್ದು ಸಂದರ್ಶನದಲ್ಲಿ ಭಾರತದಲ್ಲಿ ಬಯೋಪಿಕ್ ಸಿನಿಮಾಗಳ ಹವಾ ಜೋರಾಗಿದೆ ನೀವು ಯಾವ ನಟಿಯ ಬಯೋಪಿಕ್ ನಟಿಸಲು ಇಷ್ಟಪಡುತ್ತೀರಿ ಎಂದರೆ ರಶ್ಮಿಕಾ ಮಂದಣ್ಣ ರವರು ನಾನು ಖ್ಯಾತ ನಟಿ ಸೌಂದರ್ಯ ಹಾಗೂ ಶ್ರೀದೇವಿ ರವರ ಬಯೋಪಿಕ್ ಸಿನಿಮಾ ಗಳಲ್ಲಿ ನಟಿಸಲು ಇಷ್ಟಪಡುತ್ತೇನೆ ಅವಕಾಶ ಸಿಕ್ಕರೆ ನಾನು ನಟಿಸಲು ಸಿದ್ಧವಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ಇವರು ಈ ಹೇಳಿಕೆ ನೀಡಿದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಟ್ರೊಲ್ ಗಳು ಹರಿದುಬಂದಿದ್ದು, ಎಲ್ಲರೂ ಕೂಡ ಬೇಡವೇ ಬೇಡ ಎನ್ನುತ್ತಿದ್ದಾರೆ. ಆದರೆ ಮಾಡಿ ಎಂದು ಹೇಳುವ ಅಭಿಮಾನಿಗಳಿಗೆ ಏನು ಕಡಿಮೆ ಇಲ್ಲ ಸಾಕಷ್ಟು ಅಭಿಮಾನಿಗಳು ನಿಮಗೆ ಸೂಕ್ತ ವಾಗುವಂತಹ ಪಾತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.