ಜೊತೆ ಜೊತೆಯಲ್ಲಿ ಧಾರವಾಹಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅಭಿಮಾನಿಗಳು ಯಾಕೆ ಗೊತ್ತೆ??
ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಇದೀಗ ಜೊತೆ ಜೊತೆಯಲ್ಲಿ ದಾರವಾಹಿ ಪ್ರಮುಖ ತಿರುವುಗಳನ್ನು ಪಡೆದು ಕೊಳ್ಳುತ್ತಿದೆ, ಇದೀಗ ಅನು ಸಿರಿಮನೆ ಹಾಗೂ ಆರ್ಯವರ್ಧನ್ ರವರ ನಡುವಿನ ಪ್ರೀತಿಯ ವಿಷಯ ಎಲ್ಲರಿಗೂ ತಿಳಿದು ಹೋಗಿದೆ. ಆರ್ಯವರ್ಧನ್ ಮನೆಯವರಿಗೂ ಹಾಗೂ ಅನು ಸಿರಿಮನೆ ರವರ ಕುಟುಂಬದವರಿಗೂ ಕೂಡ ಇವರಿಬ್ಬರ ಪ್ರೀತಿಯ ವಿಷಯ ಖಚಿತವಾಗಿ ತಿಳಿದು ಬಿಟ್ಟಿದೆ.
ಅದೇ ಕಾರಣಕ್ಕಾಗಿ ಸೂರ್ಯ ರವರ ಜೊತೆ ನಡೆಯಬೇಕಿದ್ದ ಅನು ಸಿರಿಮನೆ ರವರ ಮದುವೆ ಕೂಡ ನಿಂತು ಹೋಗಿದೆ. ಹೀಗೆ ಪ್ರಮುಖ ತಿರುವುಗಳನ್ನು ಪಡೆದು ಕೊಳ್ಳುತ್ತಿರುವ ಸಂದರ್ಭದಲ್ಲಿ ಅಭಿಮಾನಿಗಳು ಜೊತೆ ಜೊತೆಯಲಿ ಧಾರವಾಹಿಯ ವಿರುದ್ಧ ಗರಂ ಆಗಿದ್ದಾರೆ. ಧಾರವಾಹಿಯ ವಿರುದ್ಧದ ಮಾತುಗಳನ್ನು ಆಡಲು ಆರಂಭಿಸಿದ್ದಾರೆ. ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆರ್ಯವರ್ಧನ್ ಹಾಗೂ ಅನು ಸಿರಿಮನೆ ರವರ ನಡುವಿನ ಪ್ರೀತಿಯ ವಿಷಯ ಗೊತ್ತಾಗಿ ಸೂರ್ಯ ರವರ ಜೊತೆ ನಡೆಯ ಬೇಕಿದ್ದ ಮದುವೆ ನಿಂತು ಹೋಗಿದೆ,
ಇನ್ನು ಇದೇ ಸಂದರ್ಭದಲ್ಲಿ ಪ್ರೀತಿಯ ವಿಷಯ ಎಲ್ಲರಿಗೂ ತಿಳಿದ ಕಾರಣ ಆರ್ಯವರ್ಧನ್ ರವರು ಹಾಗೂ ಅವರ ಕುಟುಂಬ ದವರು ಸುಬ್ಬು ಸಿರಿ ಮನೆಯವರನ್ನು ಒಪ್ಪಿಸಿ ಅದೇ ಮಂಟಪದಲ್ಲಿ ಅಣು ಹಾಗೂ ಅಆರ್ಯವರ್ಧನ್ ರವರನ್ನು ಒಂದು ಮಾಡುತ್ತಾರೆ ಎಂದು ಎಲ್ಲರೂ ಅಂದು ಕೊಂಡಿದ್ದರು, ಈಗಾಗಲೇ ಧಾರವಾಹಿಯಲ್ಲಿ ಸಾಕಷ್ಟು ಎಳೆದಂತಾಗಿದೆ ಆದ ಕಾರಣ ಇನ್ನು ಮುಂದೆ ಈ ಕಥೆಯನ್ನು ಎಳೆಯುವುದಿಲ್ಲ ಎಂದು ಅಂದು ಕೊಂಡಿದ್ದರು. ಆದರೆ ಇದೀಗ ಯಾರೂ ಊಹಿಸದ ರೀತಿಯಲ್ಲಿ ಮದುವೆ ಮನೆಯಿಂದ ಕುಟುಂಬಗಳು ಹೊರಟಿದ್ದು, ಮತ್ತಷ್ಟು ದಿನ ಕೇವಲ ಆರ್ಯವರ್ಧನ್ ಹಾಗೂ ಅನುಶ್ರೀಮನೆ ರವರ ಮದುವೆ ಮಾತುಕತೆಯ ಕಥೆ ಮುಂದುವರೆಯಲಿದ್ದು ಪ್ರೇಕ್ಷಕರು ಇಷ್ಟು ದಿವಸ ಎಳೆದಿರುವುದು ಸಾಲದು ಎಂದು ಇನ್ನೂ ಎಳೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ