ಕನ್ನಡದ ಓವರ್ ರೇಟೆಡ್ ಸಿನಿಮಾ ನಟ ಹಾಗೂ ನಟಿಯರು ಯಾರ್ಯಾರು ಗೊತ್ತಾ??

9

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಚಿತ್ರರಂಗದಲ್ಲಿ ಜನಪ್ರಿಯತೆ ಗೊಳ್ಳುವುದು ಕೆಲವೊಮ್ಮೆ ಸುಲಭದ ಕೆಲಸದಂತೆ ಕಾಣುತ್ತದೆ ಇನ್ನು ಕೆಲವೊಮ್ಮೆ ಸಾಕಷ್ಟು ಶ್ರಮ ವಹಿಸಿದರೂ ಕೂಡ ಜನಪ್ರಿಯತೆ ಪಡೆದು ಕೊಳ್ಳುವುದು ಅಸಾಧ್ಯ. ಕೆಲವರು ರಾತ್ರೋ ರಾತ್ರಿ ಒಂದು ಕಣ್ಸನ್ನೆಯಿಂದ ಜನಪ್ರಿಯತೆ ಪಡೆಯುತ್ತಾರೆ ಮತ್ತು ಕೆಲವರು ಹತ್ತಾರು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ನಟನೆ ಮಾಡಿದರು ಕೂಡ ಜನಪ್ರಿಯತೆ ಪಡೆಯಲು ಸಾಧ್ಯವಾಗುವುದಿಲ್ಲ.

ಇನ್ನು ಕೆಲವು ಸಿನಿಮಾ ನಟರಿಗೆ ಹಾಗೂ ನಟಿಯರಿಗೆ ಹೆಚ್ಚಿನ ಜನಪ್ರಿಯತೆ ಹಾಗೂ ಹೆಚ್ಚಿನ ಅಭಿಮಾನಿಗಳು ಇದ್ದಾರೆ ಎಂಬಂತೆ ಬಿಂಬಿಸಲಾಗುತ್ತದೆ, ಆದರೆ ಅವರ ಚಿತ್ರದ ಯಶಸ್ಸನ್ನು ನೋಡಿದರೆ ಇವರಿಗೆ ನಿಜವಾಗಲೂ ಅತಿ ಹೆಚ್ಚು ಅಭಿಮಾನಿಗಳು ಇದ್ದಾರೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಹೀಗೆ ಕನ್ನಡ ಚಿತ್ರರಂಗದಲ್ಲಿ ಓವರ್ ರೇಟ್ ಪಡೆದುಕೊಂಡಿರುವ ಸಿನಿಮಾ ನಟ ಹಾಗೂ ನಟಿಯರ ಬಗ್ಗೆ ಮಾಹಿತಿ ನೀಡುತ್ತೇವೆ ಕೇಳಿ

ಕನ್ನಡದ ಖ್ಯಾತ ನಟರಲ್ಲಿ ಒಬ್ಬರಾಗಿರುವ ಚಿಕ್ಕಣ್ಣ ರವರು ಸಾಲು ಸಾಲು ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದಾರೆ, ಕಿರಾತಕ ಸಿನೆಮಾದ ಮೂಲಕ ಜನಪ್ರಿಯತೆ ಪಡೆದುಕೊಂಡ ಚಿಕ್ಕಣ್ಣನವರು ತದನಂತರ ಹತ್ತಾರು ಸಿನಿಮಾಗಳಲ್ಲಿ ನಟನೆ ಮಾಡಿ ಇದೀಗ ಅರಬರು ಸಿನಿಮಾಗಳಲ್ಲಿ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಆದರೆ ಸತ್ಯ ಹೇಳಬೇಕು ಎಂದರೆ ಕಿರಾತಕ ಮೂವಿ ಯಲ್ಲಿ ಇವರು ನೀಡಿದ ಮನರಂಜನೆ ತದನಂತರ ಇಲ್ಲಿಯವರೆಗೂ ಯಾವುದೇ ಸಿನಿಮಾದಲ್ಲೂ ನೀಡಲು ಸಾಧ್ಯವಾಗಿಲ್ಲ, ಯುವಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಇವರು ಇಷ್ಟವಾದರೂ ಕೂಡ ಡಬಲ್ ಮೀನಿಂಗ್ ಡೈಲಾಗ್ ಗಳಿಂದ ಫ್ಯಾಮಿಲಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಕೊಂಚ ವಿಫಲವಾಗಿದ್ದಾರೆ ಎಂದರೆ ತಪ್ಪಾಗಲಾರದು. ಆದ್ದರಿಂದ ಚಿಕ್ಕಣ್ಣ ರವರು ತಮ್ಮ ಕಾಮಿಡಿ ಟೈಮಿಂಗ್ ಸರಿ ಮಾಡಿಕೊಂಡು ಫ್ಯಾಮಿಲಿ ಪ್ರೇಕ್ಷಕರನ್ನು ನಗಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಖಂಡಿತಾ ಇವರು ತಮ್ಮ ಹಾವ ಭಾವ ಹಾಗೂ ಡೈಲಾಗ್ ಗಳ ಮೂಲಕ ಸಾಕಷ್ಟು ಮನರಂಜನೆ ನೀಡುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ಟಾಪ್ ಹಾಸ್ಯ ಕಲಾವಿದ ನಾಗು ಕೂಡ ಬೆಳೆಯಬಹುದು.

ಇನ್ನು ರಶ್ಮಿಕ ಮಂದನ್ನ, ಸ್ನೇಹಿತರೆ ಕಿರಿಕ್ ಪಾರ್ಟಿ ಚಿತ್ರದಲ್ಲಿ ಇವರನ್ನು ಅಪ್ಸರೆ ಎಂದು ತೋರಿಸಲಾಗಿತ್ತು, ಕನ್ನಡಿಗರು ಕೂಡ ಬಹಳ ಇಷ್ಟ ಪಟ್ಟು ಚಿತ್ರವನ್ನು ನೋಡಿದರೆ, ಆದರೆ ಭಾಷೆ ಕುರಿತಾದ ಕೆಲವೊಂದು ವಿವಾದಗಳು ಹಾಗೂ ಇವರು ನಡೆದುಕೊಂಡ ರೀತಿ ಯಾರಿಗೂ ಇಷ್ಟವಾಗಲಿಲ್ಲ, ಈಗಲೂ ಕೂಡ ಮಾಧ್ಯಮಗಳಲ್ಲಿ ಕರ್ನಾಟಕದ ಕೃಷ್ ಎಂದು ರಶ್ಮಿಕಾ ಮಂದಣ್ಣ ರವರನ್ನು ತೋರಿಸಲಾಗುತ್ತದೆ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇವರ ಪೋಸ್ಟ್ ಗಳಿಗೆ ಸಿಗುವ ಪ್ರತಿಕ್ರಿಯೆ ನೋಡಿದರೆ ನಿಮಗೆ ಇವರು ಓವರ್ ರೇಟ್ ಪಡೆದುಕೊಂಡಿದ್ದಾರೆ ಎಂಬುದರ ಅರಿವಾಗುತ್ತದೆ.

ಇನ್ನು ಮೂರನೆಯದಾಗಿ ಆಂಕರ್ ಅನುಶ್ರೀ, ಸ್ನೇಹಿತರೆ ಇವರು ಅದ್ಭುತವಾಗಿ ನಿರೂಪಣೆ ಮಾಡುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಈಗಾಗಲೇ 15ಕ್ಕೂ ಹೆಚ್ಚು ಸರಿಗಮಪ ಸೀಸನ್ ಗಳು ಸೇರಿದಂತೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ಹಾಗೂ ಹತ್ತಕ್ಕೂ ಹೆಚ್ಚು ಅವಾರ್ಡ್ ಫಂಕ್ಷನ್ ಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿರುವ ಅನುಶ್ರೀ ರವರು ಇತರ ಆಂಕರ್ ಇದ್ದಾರೆ ಎಂಬುದನ್ನು ಮರೆಸುವಂತೆ ಮಾಡಿದ್ದಾರೆ, ಖಂಡಿತ ಕನ್ನಡದಲ್ಲಿ ಸಾಕಷ್ಟು ಆಂಕರ್ ಗಳಿದ್ದು ಅವರಿಗೂ ಕೂಡ ಅವಕಾಶ ನೀಡದೆ ಇರುವಷ್ಟು ಅಂಡರ್ ರೇಟ್ ಮಾಡುವ ಹಾಗಿಲ್ಲ, ಆದಕಾರಣ ಅನುಶ್ರೀ ರವರಿಗೆ ಕೊಂಚ ಹೆಚ್ಚು ರೇಟಿಂಗ್ ನೀಡಲಾಗುತ್ತಿದೆ ಎಂದರೆ ತಪ್ಪಾಗಲಾರದು.

ಇನ್ನು ನಿಖಿಲ್ ಕುಮಾರಸ್ವಾಮಿ ವೈಯಕ್ತಿಕ ಜೀವನದ ವಿಚಾರವನ್ನು ಪಕ್ಕಕ್ಕೆ ಇಟ್ಟು ಮಾತನಾಡುವುದಾದರೆ ಮೊದಲ ಸಿನಿಮಾ ನೂರು ಕೋಟಿ ಬಜೆಟ್, ರಾಜಮೌಳಿ ರವರ ತಂದೆ ಕಥೆ ಹೀಗೆ ಸಾಕಷ್ಟು ಸದ್ದು ಮಾಡುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಕೂಡ ಪ್ರೇಕ್ಷಕರನ್ನು ಥೇಟರ್ ಗಳತ್ತ ಸೆಳೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದರು, ಇನ್ನು ಬಹು ನಿರೀಕ್ಷಿತ ಚಿತ್ರ ಹಾಗೆ ಹೀಗೆ ಎಂದು ಫುಲ್ ಓವರ್ ರೇಟ್ ಮಾಡಿ ಬಿಡುಗಡೆ ಮಾಡಿದ ಸೀತಾರಾಮ ಕಲ್ಯಾಣ ಕೂಡ ಮಂಡ್ಯದಲ್ಲಿ ಉಚಿತ ಟಿಕೆಟ್ ನೋಡಿದರೂ ಜನರು ನೋಡಲಿಲ್ಲ, ಆದರೂ ಕೂಡ ಮಾಧ್ಯಮಗಳು ಇವರನ್ನು ಕನ್ನಡದ ಟಾಪ್ ನಟ ಎಂದು ಉಚ್ಚರಿಸುವುದನ್ನು ಕಂಡರೆ ನಿಜಕ್ಕೂ ನಗು ಬರುತ್ತದೆ.

Get real time updates directly on you device, subscribe now.