ಸ್ಯಾಮ್ ಜ್ಯಾಮ್ ಶೋ ನಿರೂಪಣೆಗಾಗಿ ದಾಖಲೆ ಸಂಭಾವನೆ ಪಡೆದುಕೊಂಡ ಸಮಂತ ! ಎಷ್ಟು ಕೋಟಿ ಗೊತ್ತಾ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರ ರಂಗದಲ್ಲಿ ತನ್ನದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿರುವ ಸಮಂತಾ ರವರ ಚಿತ್ರ ಬಿಡುಗಡೆ ಯಾಗುತ್ತದೆ ಎಂದರೆ ಅಭಿಮಾನಿಗಳು ಪ್ರತ್ಯೇಕ ಕಟೌಟ್ ನಿಲ್ಲಿಸುತ್ತಾರೆ. ಈಗಾಗಲೇ ಸಾಕಷ್ಟು ಯಶಸ್ಸಿನ ಚಿತ್ರಗಳನ್ನು ನೀಡಿರುವ ಸಮಂತಾ ರವರ ತೆಲುಗಿನ ಟಾಪ್ ನಟಿಯರಲ್ಲಿ ಈಗಲೂ ಕೂಡ ಒಬ್ಬರಾಗಿದ್ದಾರೆ. ವೈವಾಹಿಕ ಜೀವನದಿಂದ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳದೆ ಹೋದರೂ ಕೂಡ ನಟಿಸಿದ ಚಿತ್ರಗಳೆಲ್ಲವೂ ಕೂಡ ಯಶಸ್ಸಿನ ಸಾಲಿಗೆ ಸೇರಿಕೊಳ್ಳುತ್ತವೆ

ಹೀಗಿರುವಾಗ ಮದುವೆಯಾದ ಮೇಲೂ ಕೂಡ ನಂಬರ್ 1 ನಟಿ ಎಂದರೆ ತಪ್ಪಾಗಲಾರದು ಹಾಗೂ ಸಂಭಾವನೆಯನ್ನು ದಿನೇ ದಿನೇ ಹೆಚ್ಚು ಮಾಡಿಕೊಳ್ಳುತ್ತಿರುವ ಸಮಂತಾ ರವರು ಮದುವೆಯಾದ ಮೇಲೆ ನಟಿಯರಿಗೆ ಬೇಡಿಕೆ ಕಡಿಮೆಯಾಗುತ್ತದೆ ಎಂಬ ವಾಡಿಕೆಯನ್ನು ತಪ್ಪು ಎಂದು ಸಾಬೀತು ಮಾಡಿದ್ದಾರೆ. ಇದೀಗ ನಿರೂಪಕಿಯಾಗಿಯೂ ಕೆಲಸ ಆರಂಭಿಸಿರುವ ಸಮಂತಾ ರವರು ಸ್ಯಾಮ್ ಜ್ಯಾಮ್ ಎಂಬ ಶೋಗೆ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರರಂಗದಂತೆ ಇಲ್ಲಿಯೂ ಕೂಡ ಮೋಡಿ ಮಾಡಿರುವ ಸಮಂತಾ ರವರು ಅಭಿಮಾನಿಗಳನ್ನು ಕಾರ್ಯಕ್ರಮ ನೋಡುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ

ಇನ್ನು ಹೀಗೆ ದಿನೇ ದಿನೇ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಿರುವ ಸಮಂತಾ ರವರು ಸ್ಯಾಮ್ ಜ್ಯಾಮ್ ಶೋ ನಡೆಸಿಕೊಡಲು ಬರೋಬ್ಬರಿ 3 ಕೋಟಿ ಸಂಭಾವನೆ ಪಡೆದು ಕೊಳ್ಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ, ಈಗಾಗಲೇ ಎಂಟು ಸಂಚಿಕೆಗಳು ಬಿಡುಗಡೆಯಾಗಿದ್ದು 8 ಸಂಚಿಕೆಗಳಿಗಾಗಿ 3 ಕೋಟಿ ರೂ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಇನ್ನು ಎಂಟು ಸಂಚಿಕೆಗಳಲ್ಲಿ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ರಾಕುಲ್ ಪ್ರೀತ್ ಸಿಂಗ್, ಅಲ್ಲು ಅರ್ಜುನ್ ಸೇರಿದಂತೆ ಹಲವಾರು ಖ್ಯಾತ ಚಲನಚಿತ್ರ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ.

Get real time updates directly on you device, subscribe now.