ಕೊನೆಗೂ ಬಟಾಬಯಲಾಯಿತು ಸರಿಗಮಪ ವಿಜೇತರಿಗೆ ಹಾಗೂ ರನ್ನರ್-ಅಪ್ ಗೆ ಸಿಕ್ಕಿದ ಖಚಿತ ಹಣ ! ಎಷ್ಟು ಗೊತ್ತಾ??
ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಜೀ ಕನ್ನಡ ವಾಹಿನಿಯು ಹೊಸ ವಿವಾದಕ್ಕೆ ಸಿಲುಕಿತ್ತು. ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋಗಳನ್ನು ನಡೆಸಿ ಜೀ ಕನ್ನಡ ವಾಹಿನಿಯ ವರ್ಚಸ್ಸಿಗೆ ತಕ್ಕಂತೆ ನಡೆದು ಕೊಳ್ಳುವುದಿಲ್ಲ ತಾನು ನೀಡಿದ ಭರವಸೆಯಂತೆ ವಿಜೇತರಿಗೆ ಹಾಗೂ ಇನ್ನಿತರ ಸ್ಪರ್ಧಿಗಳಿಗೆ ಹಣ ನೀಡುವುದಿಲ್ಲ ಎಂಬ ಸುದ್ದಿ ವೈರಲ್ ಆಗಿತ್ತು. ಇದಕ್ಕೆಲ್ಲ ಕಾರಣವೇನೆಂದರೆ ಸರಿಗಮಪ ಕಾರ್ಯಕ್ರಮದ ಮಾಜಿ ಸ್ಪರ್ಧಿ ಹನುಮಂತ ರವರು ಕಳೆದ ಕೆಲವು ದಿನಗಳ ಹಿಂದೆ ಬೇಕರಿ ಮಾಲೀಕನಿಗೆ ಹೇಳಿದ್ದಾರೆ ಎನ್ನಲಾಗುತ್ತಿರುವ ವಿಷಯ. ಹನುಮಂತ ರವರು ಬೇಕರಿ ಮಾಲೀಕನ ಬಳಿ ತೆರಳಿ ಜೀ ಕನ್ನಡ ವಾಹಿನಿಯ ಹೇಳಿದಂತೆ ನಡೆದುಕೊಂಡಿಲ್ಲ ನನಗೆ ಯಾವುದೇ ಫ್ಲಾಟ್ ಕೂಡ ನೀಡಿಲ್ಲ ಹಣ ಕೂಡ ಅಷ್ಟಾಗಿ ನೀಡಿಲ್ಲ ಎಂದು ಹೇಳಿದ್ದಾರೆ ಎಂದು ಬೇಕರಿ ಮಾಲೀಕ ಹೇಳಿಕೆ ನೀಡಿದ್ದರು
ಭಾರಿ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ಸರಿಗಮಪ ಶೋನ ಕುರಿತು ಆರೋಪ ಬಂದ ಕಾರಣ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ಕೆಲವು ಕ್ಷಣಗಳಲ್ಲಿ ಭಾರಿ ಸದ್ದು ಮಾಡಿತ್ತು. ಆದರೆ ಕೊನೆಗೆ ಹನುಮಂತ ರವರು ನನಗೆ ಜೀ ಕನ್ನಡ ವಾಹಿನಿ ಮಾತು ನೀಡಿದ ಎಲ್ಲಾ ರೀತಿಯಲ್ಲಿ ನನಗೆ ಸಲ್ಲಬೇಕಾದದ್ದನ್ನು ಸಲ್ಲಿಸಿದೆ ಎಂದು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ಈ ಬಾರಿಯ ಸರಿಗಮಪ ವಿಜೇತರಿಗೆ ಹಾಗೂ ರನ್ನರ್ ಅಪ್ ಗಳಿಗೆ ಮತ್ತು ರತ್ನಮ್ಮ ಹಾಗೂ ಮಂಜಮ್ಮ ರವರಿಗೆ ಎಷ್ಟು ಹಣ ನೀಡಲಾಗಿದೆ ಎಂಬುದನ್ನು ವಾಹಿನಿ ಸ್ಪಷ್ಟಪಡಿಸಬೇಕು ಎಂಬ ಒತ್ತಾಯ ಅಭಿಮಾನಿಗಳಿಂದ ಕೇಳಿ ಬಂದಿತ್ತು. ಇದೀಗ ಈ ವಿಷಯ ಇದೀಗ ಕಿರುತೆರೆಯ ಮೂಲಗಳಿಂದ ಮಾಹಿತಿ ತಿಳಿದುಬಂದಿದ್ದು ಜೀ ಕನ್ನಡ ವಾಹಿನಿಯ ಮಾತು ನೀಡಿದಂತೆ ವಿಜೇತರಿಗೆ 10ಲಕ್ಷ ರನ್ನರ್-ಅಪ್ ಗೆ ಐದು ಲಕ್ಷ ಹಾಗೂ ರತ್ನಮ್ಮ ಹಾಗೂ ಮಂಚಮ್ಮ ರವರಿಗೆ ಜನರಿಂದ ಸಂಗ್ರಹದ ಎರಡೂವರೆ ಲಕ್ಷದ ಜೊತೆಗೆ ಇನ್ನು ಎರಡುವರೆ ಲಕ್ಷ ಸೇರಿಸಿ ಬ್ಯಾಂಕಿನಲ್ಲಿ ಡೆಪೋಸಿಟ್ ಮಾಡಲಾಗಿದೆ ಎಂಬುದು ತಿಳಿದುಬಂದಿದೆ. ಈ ಮೂಲಕ ನಡೆಯುತ್ತಿದ್ದ ವಿವಾದಕ್ಕೆ ಪರದೆ ಎಳೆದಂತಾಗಿದೆ.