ದರ್ಶನ್ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದ ಜಗ್ಗೇಶ್ ಫ್ಯಾನ್ಸ್ ! ಮಾಡಿದ್ದೇನು ಗೊತ್ತಾ??

2

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಹಿರಿಯ ನಟ ಜಗ್ಗೇಶ್ ರವರು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ನಡೆಯುತ್ತಿರುವ ವಿವಾದ ಇದೀಗ ತಾರಕಕ್ಕೇರಿದೆ. ದರ್ಶನ್ ಅಭಿಮಾನಿಗಳು ಜಗ್ಗೇಶ್ ರವರು ಚಿತ್ರೀಕರಣದಲ್ಲಿ ನಿರತವಾಗಿದ್ದಾಗ ಹೋಗಿ ತೋರಿದ ವರ್ತನೆಯಿಂದ ಜಗ್ಗೇಶ್ ರವರ ಬಹಳ ಅಸಮಾಧಾನ ಗೊಂಡಿದ್ದಾರೆ. ಅದೇ ಕಾರಣಕ್ಕಾಗಿ ಇದೀಗ ಎಲ್ಲರಿಂದ ಅಂತರ ಕಾಯ್ದುಕೊಳ್ಳುವ ಸೂಚನೆಯನ್ನು ಕೂಡ ನೀಡಿದ್ದಾರೆ

ನನ್ನ ಮನಸ್ಸಿಗೆ ಬಹಳ ನೋವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ರವರು ಇದೀಗ ವಿಡಿಯೋ ಕೂಡ ಹರಿ ಬಿಟ್ಟಿದ್ದಾರೆ, ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಜಗ್ಗೇಶ್ ಅವರು ನಿಜಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದು ಚಿತ್ರೀಕರಣದ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಮಾಡಿದ್ದು ತಪ್ಪು ಎಂದು ಹೇಳಿಕೆ ನೀಡಿದ್ದಾರೆ.

ಇನ್ನು ಇಷ್ಟೆಲ್ಲಾ ನಡೆಯುತ್ತಿರುವ ಸಂದರ್ಭದಲ್ಲಿ ದರ್ಶನ್ ಅಭಿಮಾನಿ ಗಳಂತೆ ಜಗ್ಗೇಶ್ ಅಭಿಮಾನಿಗಳು ಕೂಡ ಇದೀಗ ವಿವಾದಕ್ಕೆ ಕಾಲಿಟ್ಟಿದ್ದು, ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿ ಫಿಲಂ ಚೇಂಬರ್ ನ ಬಳಿ ಎಲ್ಲಾ ಅಭಿಮಾನಿಗಳು ಜಮಾಯಿಸಿದ್ದು, ಅಲ್ಲಿ ಹೋದವರು ಯಾರು ಎಂಬುದನ್ನು ಈ ಕೂಡಲೇ ಪರಿಶೀಲನೆ ನಡೆಸಿ ಚಿತ್ರೀಕರಣ ಸ್ಥಳಕ್ಕೆ ಹೋಗಿ ಅವಮಾನ ಮಾಡಿದವರು ಯಾರು ಎಂಬುದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಬೇಕು. ಇವರು ದರ್ಶನ್ ಅಭಿಮಾನಿಗಳೇ ಎಂಬುವ ಅನುಮಾನ ನಮಗಿದೆ, 40 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಜಗ್ಗೇಶ್ ರವರಿಗೆ ಅಗೌರವ ತೋರುವ ಪ್ರತಿಯೊಬ್ಬರಿಗೂ ಕೂಡ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗಬೇಕು ಎಂದು ಮನವಿ ಮಾಡಿದ್ದಾರೆ.

Get real time updates directly on you device, subscribe now.