ರಾತ್ರಿ ವೇಳೆ ಸಾಮಾನ್ಯರಂತೆ ನಿಂತಿದ್ದ ಮಹಿಳಾ ಡಿಸಿಪಿಗೆ ಬೈಕ್ ನಲ್ಲಿ ಬಂದ ಆ ಮೂವರು ಯುವಕರು ಮಾಡಿದ್ದೇನು ಗೊತ್ತಾ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಯಾವ ದಿನ ಭಾರತೀಯ ಮಹಿಳೆ ರಾತ್ರಿ 12 ಘಂಟೆಗೆ ನಿರ್ಭೀತಿಯಿಂದ ಒಬ್ಬಳೇ ಒಡಾಡುತ್ತಾಳೋ, ಆ ದಿನ ನಮಗೆ ನಿಜಕ್ಕೂ ಸ್ವಾತಂತ್ರ ಬಂದ ಹಾಗೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಆದರೂ ಈಗಲೂ ಮಹಿಳೆಯರು ರಾತ್ರಿ ವೇಳೆ ಓಡಾಡಲು ಆಗುತ್ತಿಲ್ಲ. ಈ ಕೆಳಗಿನ ಘಟನೆ ನಿಜವಾಗಲೂ ನಡೆದಿದ್ದು.

ರಾತ್ರಿ ವೇಳೆ ಮಹಿಳೆಯರು ಎದುರಿಸುವ ಸಾಮಾನ್ಯ ತೊಂದರೆಗಳನ್ನ ರಿಯಾಲಿಟಿ ಚೆಕ್ ಮಾಡಲು ಕೇರಳ ರಾಜ್ಯದ ಕ್ಯಾಲಿಕಟ್ ನಗರದ ಮಹಿಳಾ ಡಿಸಿಪಿ ಮೇರಿ ಜೋಸೆಫ್ ಒಂದು ಉಪಾಯ ಹೂಡುತ್ತಾರೆ. ತಾವು ಹಾಗೂ ತಮ್ಮಿಬ್ಬರು ಸಹೋದ್ಯೋಗಿಗಳು ಇಂದು ರಾತ್ರಿ ಸಾಮಾನ್ಯ ಮಹಿಳೆಯರಂತೆ ವೇಷ ತೊಟ್ಟು ಕ್ಯಾಲಿಕಟ್ ನ ಹಲವು ಬೀದಿಗಳಲ್ಲಿ ಸುತ್ತಿ, ಮಹಿಳೆಯರು ಎದುರಿಸುತ್ತಿರುವ ತೊಂದರೆಗಳನ್ನು ತಿಳಿದುಕೊಳ್ಳೋಣ ಎಂಬ ನಿರ್ಧಾರಕ್ಕೆ ಬರುತ್ತಾರೆ. ಈ ಪ್ರಯತ್ನಕ್ಕೆ ಸೌಮ್ಯ ಮತ್ತು ಸವಿತಾ ಎಂಬ ಮಹಿಳಾ ಪೇದೆಗಳು ಸಾಥ್ ನೀಡುತ್ತಾರೆ. ರಾತ್ರಿ 10 ಘಂಟೆಗೆ ಸರಿಯಾಗಿ ಸಾಮಾನ್ಯ ಮಹಿಳೆಯರಂತೆ ವೇಷ ತೊಟ್ಟು ಹಲವು ಬೀದಿಗಳಲ್ಲಿ ಸಂಚರಿಸಲು ಶುರುಮಾಡಿಕೊಳ್ಳುತ್ತಾರೆ.

ಈ ವೇಳೆ ಬೈಕ್ ನಲ್ಲಿ ಬಂದ ಮೂವರು ಯುವಕರು, ಬರುತ್ತಿಯಾ ಎಂದು ಕೆಟ್ಟ ಸನ್ನೆ ಮಾಡುವ ಮೂಲಕ, ಕೆಟ್ಟ ಪದಗಳಲ್ಲಿ ನಿಂದಿಸುತ್ತಾ ಕರೆಯುತ್ತಾರೆ. ಇನ್ನು ರಾತ್ರಿ ಬಸ್ ಸ್ಟಾಂಡ್ ನಲ್ಲಿಯೂ ಸಹ ಯುವಕರೇ ತುಂಬಿರುತ್ತಾರೆ. ಅವರೆಲ್ಲರೂ ಕೆಟ್ಟ ದೃಷ್ಠಿಯಿಂದ ಮೇರಿ ಜೋಸೆಫ್ ರನ್ನ ನೋಡುತ್ತಿರುತ್ತಾರೆ. ಹಗಲೊತ್ತಿನಲ್ಲಿ ಗಿಜಗುಡುವ ಸ್ಥಳಗಳಲ್ಲಿ, ರಾತ್ರಿ ಮಾತ್ರ ಮಹಿಳೆಯರಿಗೆ ಕೆಟ್ಟ ಅನುಭವಗಳು ಆಗುವುದು ಗಮನಕ್ಕೆ ಬರುತ್ತದೆ. ಎಲ್ಲರೂ ಮಹಿಳೆಯನ್ನ ಕೆಟ್ಟ ದೃಷ್ಠಿಯಿಂದ ನೋಡಿದರೇ ಹೊರತು, ಯಾರು ಸಹ ಮಹಿಳೆಯ ಕಷ್ಟ,ಕಾರ್ಪಣ್ಯವನ್ನ ಕೇಳಲಿಲ್ಲ, ಕುಂದು-ಕೊರತೆಯನ್ನ ಸಹ ವಿಚಾರಿಸಲಿಲ್ಲ.

ಹೀಗೆ ಒಂದು ಪ್ರದೇಶದಲ್ಲಿ ನಿಂತಾಗ, ಗಸ್ತು ತಿರುಗುತ್ತಿದ್ದ ಪೋಲಿಸ್ ವಾಹನ ಬಂದು ಮೇರಿ ಜೋಸೆಫ್ ರನ್ನ ಏನಾದರೂ ಸಹಾಯ ಬೇಕಾ ಎಂದು ಕೇಳುತ್ತದೆ ಹೊರತು, ಅವರೇ ನಮ್ಮ ಡಿಸಿಪಿ ಎಂದು ಗುರುತಿಸುವುದಿಲ್ಲ. ಈ ಕೆಟ್ಟ ಅನುಭವಗಳಿಂದ ಧೃಢ ನಿರ್ಧಾರಕ್ಕೆ ಬಂದ ಮೇರಿ ಜೋಸೆಫ್ , ಮರು ದಿನವೇ ಆ ಸ್ಥಳಗಳಿಗೆ ಬೀಟ್ ಪೋಲಿಸರನ್ನ ನೇಮಿಸುತ್ತಾರೆ. ಅಗತ್ಯ ಬೀದಿ ದೀಪಗಳು ಹಾಗೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುತ್ತಾರೆ. ಪ್ರೆಸ್ ಮೀಟ್ ನಲ್ಲಿ ಬೀದಿ ಕಾಮಣ್ಣರಿಗೆ ಎಚ್ಚರಿಸಿ, ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ವಿವರಿಸುತ್ತಾರೆ. ಅಂದು ಡಿಸಿಪಿ ಮೇರಿ ಜೋಸೆಫ್ ರ ಆ ಕ್ರಮದಿಂದ ಕ್ಯಾಲಿಕಟ್ ಸಿಟಿ ಬೀದಿ ಕಾಮಣ್ಣರಿಂದ ಇಂದು ಮುಕ್ತವಾಗಿದೆ. ಡಿಸಿಪಿ ಮೇರಿ ಜೋಸೆಫ್ ರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Get real time updates directly on you device, subscribe now.