ತನ್ನ ಮಗಳನ್ನು ಮದುವೆಯಾಗುವವರಿಗೆ ಹೊಸ ಷರತ್ತು ವಿಧಿಸಿದ ಶಾರುಖ್, ಎಷ್ಟು ರೂಲ್ಸ್ ಗೊತ್ತಾ??

15

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಎಂದರೆ ರಂಗಿಂಗ್ ದುನಿಯಾದ ಕಲರ್ಫುಲ್ ತಾಣ ಎಂದೇ ಹೇಳಬಹುದು. ನಮ್ಮ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ವೀಕ್ಷಕರನ್ನು ಹೊಂದಿರುವ ಚಿತ್ರರಂಗ ಎಂದರೂ ತಪ್ಪಿಲ್ಲ. ಇಲ್ಲಿ ಭಾರತದ ದೊಡ್ಡ ದೊಡ್ಡ ಸ್ಟಾರ್ ಗಳು ಉಗಮ ವಾಗಿರುವುದನ್ನು ನಾವು ನೋಡಬಹುದು. ಇಂದಿಗೂ ಸಹ ಬಾಲಿವುಡ್ ಇಡೀ ವಿಶ್ವದಲ್ಲೇ ಶ್ರೀಮಂತ ಚಿತ್ರರಂಗಗಳಲ್ಲಿ ಒಂದಾಗಿದೆ. ಈ ಬಾಲಿವುಡ್ಡನ್ನು ಕೆಲವು ದಶಕಗಳ ಹಿಂದಷ್ಟೇ ಒಬ್ಬ ಹುಡುಗ ಬಂದು ನಟಿಸಿ ಈಗ ಈ ಚಿತ್ರರಂಗವನ್ನು ಅಳುತ್ತಿರುವುದನ್ನು ನೀವು ನೋಡುತ್ತಿದ್ದೀರಾ. ನಾವು ಯಾರ ಬಗ್ಗೆ ಹೇಳಿದ್ದೇವೆ ಅಂತ ಗೊತ್ತಾಯ್ತಾ.

ನೀವು ಕರೆಕ್ಟಾಗಿ ಗೆಸ್ ಮಾಡಿದಿರಾ ಅಂತ ಗೊತ್ತು ಆದರೂ ನಾವೇ ಹೇಳ್ತೀವಿ ಬಿಡಿ. ಹೌದು ನಾವು ಮಾತನಾಡುತ್ತಿರುವುದು ಡೆಲ್ಲಿಯಿಂದ ಯಾರ ಸಹಾಯವೂ ಇಲ್ಲದೆ ಮುಂಬೈಗೆ ಬಂದು ಕಷ್ಟಪಟ್ಟು ದುಡಿದು ನಂತರ ಬಾಲಿವುಡ್ನಲ್ಲಿ ನಟಿಸಿ ಈಗ ಬಾಲಿವುಡ್ ಕಿಂಗ್ ಖಾನ್ ಎಂದೇ ಪ್ರಸಿದ್ಧರಾಗಿರುವ ಶಾರುಖ್ ಖಾನ್ ರವರ ಬಗ್ಗೆ ಹೇಳುತ್ತಿದ್ದೇವೆ. ಶಾರುಖ್ ಖಾನ್ ಬಾಲಿವುಡ್ ಗೆ ಬಂದ ಕ್ಷಣದಲ್ಲಿ ಎಂತೆಂಥ ದೊಡ್ಡ ಸ್ಟಾರ್ ಇದ್ದಾರೆಂದರೆ ಅಮಿತಾಬಚ್ಚನ್ ಇತ್ತ ಧರ್ಮೇಂದ್ರ ಹೆಸರು ಹೇಳುತ್ತ ಹೋದರೆ ಲಿಸ್ಟ್ಗೆ ಜಾಗ ಸಾಕಾಗುವುದಿಲ್ಲ.

ಇಂತಹ ಚಿತ್ರರಂಗದ ತಿಮಿಂಗಿಲಗಳ ನಡುವೆ ತಮ್ಮ ಸ್ವಂತ ಪರಿಶ್ರಮ ಹಾಗೂ ಪ್ರತಿಭೆ ಮೂಲಕ ಇಂದು ಜಗತ್ತಿನ ಶ್ರೀಮಂತ ನಟರಾಗಿರುವ ಶಾರುಖಾನ್ ರವರ ಜೀವನ ಎಲ್ಲಾ ಯುವಜನತೆಗೆ ಸ್ಪೂರ್ತಿಯಾದದ್ದು. ಒಂದು ತಿನ್ನಲು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಶಾರುಖ್ ಖಾನ್ ಈಗ ಅದೆಷ್ಟು ಜನರ ಜೀವಕ್ಕೆ ಬೆಳಕಾಗಿದ್ದಾರೆ. ಬಾಲಿವುಡ್ನ ಪ್ರತಿ ಪ್ರಸಿದ್ಧ ನಟರು ಶಾರುಖಾನ್ ರವರ ಡೇಟ್ಗೆ ಕಾಯುತ್ತಾ ಕ್ಯೂನಲ್ಲಿ ನಿಂತಿರುವುದು ಇಂದಿಗೂ ನಡೆಯುತ್ತಿದೆ. ಶಾರುಖ್ ಖಾನ್ ರವರು ಚಿತ್ರಗಳು ಹಿಟ್ ಆಗಲಿ ಫ್ಲಾಪ್ ಆಗಲಿ ಅವರ ಮಾರುಕಟ್ಟೆ ಹಿಡಿಯೋದಕ್ಕೆ ಚಾನ್ಸೇ ಇಲ್ಲ.

ಅದಕ್ಕೆ ಅವರನ್ನು ಬಾಲಿವುಡ್ನ ಬಾದಶಹ ಎಂದು ಕರೆಯಲಾಗುತ್ತದೆ. ಶಾರುಖ್ ಖಾನ್ ರವರದ್ದು ಲವ್ ಮ್ಯಾರೇಜ್ ಎಂದು ಎಲ್ಲರಿಗೂ ಗೊತ್ತಿದೆ ಅವರ ಪತ್ನಿ ಗೌರಿ ಖಾನ್ ಶಾರುಖ್ ಖಾನ್ ಅವರ ಕಷ್ಟದ ಸಮಯದಲ್ಲಿ ಜೊತೆ ನಿಂತು ಈಗ ಅವರ ಯಶಸ್ಸಿಗೆ ಕಾರಣರಾಗಿದ್ದಾರೆ. ಶಾರುಖ್ ಖಾನ್ ರವರಿಗೆ ಒಬ್ಬಳು ಮಗಳು ಕೂಡ ಇದ್ದಾಳೆ ಅವರ ಹೆಸರು ಸುಹಾನ ಖಾನ್. ಈಗಾಗಲೇ ಸುಹಾನಾ ಖಾನ್ ರವರಿಗೆ 21 ವರ್ಷ ವಯಸ್ಸಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ಸ್ಟಾರ್ ನಟನ ಪುತ್ರಿ ಎಂದು ಹಲವಾರು ಅಭಿಮಾನಿಗಳು ಕೂಡ ಹುಟ್ಟಿಕೊಂಡಿದ್ದಾರೆ.

ಶಾರುಖ್ ಖಾನ್ ರವರ ಮಗಳು ಸುಹಾನ ಖಾನ್ ರವರನ್ನು ಮದುವೆಯಾಗಿ ಬಯಸುವವರು ಅಥವಾ ಲವ್ ಮಾಡ ಬಯಸುವವರು ಕಿಂಗ್ ಖಾನ್ ರವರ ಕೆಲವು ಶರತ್ತುಗಳಲ್ಲಿ ಪಾಸ್ ಆಗ್ಬೇಕಂತೆ. ಈ ಶರತ್ತುಗಳಲ್ಲಿ ಪಾಸಾದವರು ಶಾರುಖ್ ಖಾನ್ ರವರು ರವರ ಮಗಳನ್ನು ಮದುವೆಯಾಗಬಹುದು ಅಂತೆ. ಆ ಶರತ್ತುಗಳು ಯಾವುದೆಂದು ತಿಳಿಯೋಣ ಬನ್ನಿ. ಶಾರುಖ್ ಖಾನ್ ರವರು ಹೇಳೋ ಪ್ರಕಾರ ಅವರು ತಮ್ಮ ಮಗಳನ್ನು ತುಂಬಾ ಪ್ರೀತಿಸುತ್ತಾರೆ ಹಾಗಾಗಿ ಅವಳನ್ನು ಪ್ರೀತಿಸುವರು ಕೂಡ ಶಾರುಖಾನ್ ರವರ ಕೆಲಸ ಶರತ್ತುಗಳ ಅನ್ವಯ ಇರಬೇಕಂತೆ.

ಮೊದಲಿಗೆ ಸುಹಾನಾ ಖಾನ್ ರವರನ್ನು ಪ್ರೀತಿಸುವವನು ಒಂದು ಒಳ್ಳೆ ಉದ್ಯೋಗದಲ್ಲಿ ಸೆಟಲ್ ಆಗಿರಬೇಕು. ಸುಹಾನ ಮೇಲೆ ಹೇಗೆ ಅವರ ಕಾಳಜಿಗಾಗಿ ಕಣ್ಣಿಟ್ಟಿರುತ್ತಾರೆ ಹಾಗೆಯೇ ಅವರ ಬಾಯ್ ಫ್ರೆಂಡ್ ಬಗ್ಗೆ ಕೂಡ ಶಾರುಖ್ ಖಾನ್ ರವರು ಒಂದು ಕಣ್ಣಿಟ್ಟಿರುತ್ತಾರೆ ಅಂತೆ. ತಮ್ಮ ಮಗಳು ಯಾವುದೇ ಕಿರಿಕ್ ನಲ್ಲಿ ಸಿಕ್ಕಿಹಾಕಿಕೊಂಡರು ಶಾರುಖ್ ಖಾನ್ ರವರು ಮೊದಲು ತರಾಟೆ ತೆಗೆದುಕೊಳ್ಳುವುದು ಅವಳ ಬಾಯ್ ಫ್ರೆಂಡ್ ನ್ನೇ. ತಮ್ಮ ಮಗಳನ್ನು ಅತಿಯಾಗಿ ಪ್ರೀತಿಸುವ ಶಾರುಖಾನ್ ಅವರು ತಮ್ಮ ಮಗಳಿಗೆ ಏನಾದರೂ ಕಷ್ಟ ನೀಡಿದ್ದು ಗೊತ್ತಾದರೆ ಬಾಯ್ ಫ್ರೆಂಡ್ ಅನ್ನು ಅಥವಾ ಆಕೆಯ ಮದುವೆಯಾದವರನ್ನು ಯಾವ ಮಟ್ಟಕ್ಕೆ ಬೇಕಾದರೂ ಹೋಗಿ ಏನು ಬೇಕಾದರೂ ಮಾಡುತ್ತಾರಂತೆ.

ಎಲ್ಲದಕ್ಕಿಂತ ಹೆಚ್ಚಾಗಿ ತಮ್ಮ ಮಗಳ ಬಾಯ್ಫ್ರೆಂಡ್ ಅನ್ನು ಶಾರುಖ್ ಖಾನ್ ರವರು ಸುತಾರಾಂ ಇಷ್ಟಪಡುವುದೇ ಇಲ್ಲವಂತೆ. ಎಲ್ಲ ಶರತ್ತುಗಳು ಹಾಗೂ ನಿಯಮಗಳಿಗೆ ಒಪ್ಪಿದರೆ ನೀವು ಕೂಡ ಶಾರುಖ್ ಖಾನ್ ರವರ ಮಗಳು ಸುಹಾನಾ ಖಾನ್ ರವರ ಬಾಯ್ಫ್ರೆಂಡ್ ಆಗೋದಕ್ಕೆ ಏನು ಅಡ್ಡಿ ಇಲ್ಲ. ಈ ವಿಚಾರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವುದರ ಮೂಲಕ ತಪ್ಪದೆ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ.

Get real time updates directly on you device, subscribe now.