ಮದುವೆಯಾಗುತ್ತಾರೆ ಅನ್ಕೊಂಡ್ರೆ, ಇದೇನಪ್ಪ ಇದು ಹೊಸ ಉದ್ಯಮ ಆರಂಭಿಸುತ್ತಾರಾ ದಿವ್ಯ ಅರವಿಂದ್. ಏನಂತೆ ಗೊತ್ತಾ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ಸೀಸನ್ ಕಳೆದ ಎಲ್ಲಾ ಹಿಂದಿನ ಬಿಗ್ ಬಾಸ್ ಸೀಸನ್ ಗಳಿಗಿಂತ ವಿಭಿನ್ನವಾಗಿತ್ತು ಹಾಗೂ ಮನರಂಜನಾತ್ಮಕವಾಗಿತ್ತು. ಅದ್ದೂರಿಯಾಗಿ ಪ್ರಾರಂಭವಾದರೂ ನಂತರ ಅಪೂರ್ಣವಾಗಿ ನಿಂತಿದ್ದು ಇದರ ವಿಪರ್ಯಾಸ ಎಂದು ಹೇಳಬಹುದು. ಆದರೂ ನಡೆದಷ್ಟು ದಿನ ವೀಕ್ಷಕರಿಗೆ ಮನೋರಂಜನೆ ತಪ್ಪಿರಲಿಲ್ಲ. ಬಿಗ್ ಬಾಸ್ ನಲ್ಲಿ ತರಲೆ ತಮಾಷೆ ಪ್ರೇಮ ಸ್ನೇಹ ಎಲ್ಲವೂ ನಡೆದಿತ್ತು.

ಹೌದು ಬಿಗ್ ಬಾಸ್ ಎಂದರೆ ರಿಯಾಲಿಟಿ ಶೋಗಳ ದೊಡ್ಡಣ್ಣ ಎಂದು ಹೇಳಬಹುದು ಕನ್ನಡ ಕಿರುತೆರೆ ಇತಿಹಾಸದಲ್ಲಿ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಅಂದರೆ ಅದು ಬಿಗ್ ಬಾಸ್ ಕನ್ನಡ. ಈ ರಿಯಾಲಿಟಿ ಶೋ ಅನ್ನು 8 ಸೀಸನ್ ಗಳಿಂದ ಅಂದರೆ 2013ರಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಂಡು ಬಂದಿದ್ದಾರೆ. ಕಿಚ್ಚ ಸುದೀಪ್ ರವರ ನಿರೂಪಣಾ ಶೈಲಿ ಹಾಗೂ ಅವರು ಸ್ಪರ್ಧಿಗಳನ್ನು ಹ್ಯಾಂಡಲ್ ಮಾಡುವ ರೀತಿ ಹಾಗೂ ಅವರ ಬುದ್ಧಿ ಮಾತುಗಳು ನೋಡುವ ವೀಕ್ಷಕರಿಗೆ ಅವರು ಪರ್ಫೆಕ್ಟ್ ಎಂದು ಹೇಳುವಂತೆ ಮಾಡಿದೆ ಅಲ್ಲದೆ ಅವರನ್ನು ಬಿಟ್ಟು ಬೇರೆ ಯಾವ ನಟ ಕೂಡ ಅವರ ಸ್ಥಾನವನ್ನು ತುಂಬಲಾರ ಎಂಬ ಬಲವಾದ ನಂಬಿಕೆ ಮೂಡುವಂತೆ ಮಾಡಿದೆ.

ಈ ಬಾರಿಯ ಸೀಸನ್ ಮೊದಲು ಎರಡು ವಾರದಲ್ಲಿ ಕಿಚ್ಚ ಸುದೀಪ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಂತರೆ ನಂತರ ದಿನಗಳಲ್ಲಿ ಲಾಕ್ ಡೌನ್ ಕಠಿಣ ಕ್ರಮಗಳ ಆಧಾರದ ಮೇಲೆ ಸ್ವತಹ ಕಲರ್ಸ್ ಕನ್ನಡ ವಾಹಿನಿಯವರು ಬಿಗ್ ಬಾಸ್ ಅನ್ನು ರದ್ದುಗೊಳಿಸಿ ಸ್ಪರ್ಧಿಗಳನ್ನು ಮನೆಗೆ ಕಳುಹಿಸಿದರು. ಈ ಬಿಗ್ ಬಾಸ್ ನಲ್ಲಿ ಇಬ್ಬರು ಪ್ರೇಮಕ್ಕೆ ಪಕ್ಷಿಗಳ ಕಥೆ ಬಹಳ ಜೋರಾಗಿ ಕರ್ನಾಟಕದ ಮನೆ ಮನೆಯನ್ನು ಮುಟ್ಟಿತ್ತು. ಅವರು ಯಾರೆಂದರೆ ದಿವ್ಯ ಉರುಡುಗ ಹಾಗೂ ಅರವಿಂದ್ ಕೆಪಿ.

ಇವರಿಬ್ಬರ ಪ್ರೇಮ ಕಥೆ ಜೋಡಿ ಟಾಸ್ಕ್ ಇಂದ ಪ್ರಾರಂಭವಾಗಿ ಈಗ ಮನೆಯಿಂದ ಹೊರಬಂದರು ಸಹ ಹಾಗೆಯೇ ಉಳಿದಿದೆ. ಆದರೆ ಇತ್ತೀಚಿಗೆ ಬಂದ ಕೆಲವು ಮಾಹಿತಿ ಪ್ರಕಾರ ಬಿಗ್ ಬಾಸ್ ನಲ್ಲಿದ್ದಾಗ ದಿವ್ಯ ಅರವಿಂದ್ ರವರ ಜೊತೆ ಉಡುಪಿ ಹೋಟೆಲ್ ಬಿಜಿನೆಸ್ ಕುರಿತಂತೆ ಮಾತನಾಡಿದ್ದರಂತೆ. ಮುಂದಿನ ದಿನಗಳಲ್ಲಿ ಇವರಿಬ್ಬರು ಉಡುಪಿ ಹೋಟೆಲ್ ಪಾರ್ಟ್ನರ್ ಆಗಿ ಕಾಣಿಸಿಕೊಂಡರು ಅಚ್ಚರಿಪಡುವಂತಿಲ್ಲ. ಅರವಿಂದ್ ಹಾಗೂ ದಿವ್ಯ ಉರುಡುಗ ರವರ ಉಡುಪಿ ಹೋಟಲ್ ಪಾರ್ಟ್ನರ್ಶಿಪ್ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

Get real time updates directly on you device, subscribe now.