ಇದುವರೆಗೂ ಯಾವುದೇ ಕಿಸ್ಸಿಂಗ್ ದೃಶ್ಯಗಳಲ್ಲಿ ನಟನೆ ಮಾಡದೆ ಇರುವ ನಟ ಹಾಗೂ ನಟಿಯರು ಯಾರ್ಯಾರು ಗೊತ್ತೇ??

26

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಎಂದರೆ ಬೇರೆ ಎಲ್ಲಾ ಚಿತ್ರಗಳಿಗಿಂತ ಹೆಚ್ಚಾಗಿ ಗ್ಲಾಮರ್ ಅನ್ನು ಹೊಂದಿರುವ ಚಿತ್ರರಂಗ ಎಂದು ಹೇಳಬಹುದಾಗಿದೆ. ಇಲ್ಲಿನ ಚಿತ್ರಗಳ ದೃಶ್ಯಗಳಲ್ಲಿ ಬೋಲ್ಡ್ ದೃಶ್ಯಗಳು ಹೆಚ್ಚಾಗಿ ಕಂಡು ಬರುತ್ತವೆ ಎಂದು ಹೇಳಬಹುದಾಗಿದೆ. ಅದರಲ್ಲಿ ಚುಂಬನ ದೃಶ್ಯಗಳು ಬಾಲಿವುಡ್ ಚಿತ್ರರಂಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಚಿತ್ರರಂಗದಲ್ಲಿ ಹಲವಾರು ವರ್ಷಗಳನ್ನು ಕಳೆದ ನಂತರವೂ ಕೂಡ ಇಂದಿನವರೆಗೂ ಚುಂಬನ ದೃಶ್ಯಗಳಲ್ಲಿ ಕಾಣಿಸಿಕೊಳ್ಳದ ನಟಿಯರ ಕುರಿತಂತೆ ಹೇಳಲು ಹೊರಟಿದ್ದೇವೆ. ಹೌದು ಗೆಳೆಯರೇ ಕಿ’ಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳದೆ ಇರುವಂತಹ ಐದು ನಟಿಯರ ಕುರಿತಂತೆ ಇಂದು ಹೇಳಲು ಹೊರಟಿದ್ದೇವೆ.

ಸೋನಾಕ್ಷಿ ಸಿನ್ಹಾ; ಸೋನಾಕ್ಷಿ ಸಿನ್ಹಾ ರವರು ಬಾಲಿವುಡ್ ಚಿತ್ರರಂಗದ ಖ್ಯಾತ ಹಿರಿಯ ನಟ ಶತ್ರುಘ್ನ ಸಿನ್ಹಾ ರವರ ಮಗಳಾಗಿದ್ದರೆ. ಸಲ್ಮಾನ್ ಖಾನ್ ನಟನೆಯ ದಬಾಂಗ್ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟಿರುವ ಇವರು ಇದುವರೆಗೂ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ನಿಜ ಆದರೆ ಇಂದಿನವರೆಗೂ ಒಂದೇ ಒಂದು ಸಿನಿಮಾದಲ್ಲಿ ಲಿಪ್ ಲಾಕ್ ಕಿ’ಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಈ ವಿಚಾರದಲ್ಲಿ ನಟಿ ಸೋನಾಕ್ಷಿ ಸಿನ್ಹಾ ರವರನ್ನು ನಾವು ಮೆಚ್ಚಲೇಬೇಕು.

ಶಿಲ್ಪ ಶೆಟ್ಟಿ; ಕರಾವಳಿ ಮೂಲದ ಕನ್ನಡತಿ ಆಗಿರುವ ಶಿಲ್ಪಾಶೆಟ್ಟಿ ರವರು ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡಮಟ್ಟದಲ್ಲಿ ನಾಯಕಿಯಾಗಿ ಹೆಸರನ್ನು ಗಳಿಸಿದ್ದಾರೆ. ಬಹುತೇಕ ಎಲ್ಲಾ ಬಾಲಿವುಡ್ ಸ್ಟಾರ್ ನಟರ ಜೊತೆಗೆ ನಾಯಕಿಯಾಗಿ ತೆರೆಯನ್ನು ಹಂಚಿಕೊಂಡಿದ್ದಾರೆ. ಸೌಂದರ್ಯ ಹಾಗೂ ಫಿಟ್ನೆಸ್ ನಲ್ಲಿ ಇಡೀ ಬಾಲಿವುಡ್ ಚಿತ್ರರಂಗಕ್ಕೆ ರೋಲ್ ಮಾಡೆಲ್ ಎಂದು ಹೇಳಬಹುದಾಗಿದೆ. ಹಲವಾರು ಗ್ಲಾಮರಸ್ ಪಾತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ ನಿಜ ಆದರೆ ಇದುವರೆಗೂ ಯಾವುದೇ ಲಿಪ್ ಲಾಕ್ ದೃಶ್ಯಗಳಲ್ಲಿ ಶಿಲ್ಪಶೆಟ್ಟಿ ಕಾಣಿಸಿಕೊಂಡಿಲ್ಲ.

ಆಸೀನ್; ದಕ್ಷಿಣ ಭಾರತ ಚಿತ್ರರಂಗದ ಅವರಾಗಿದ್ದರು ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಅಭಿಮಾನಿಗಳನ್ನು ಹಾಗೂ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ. ಮದುವೆಯಾದ ನಂತರ ಸಿನಿಮಾರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ಹಲವಾರು ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು ಕೂಡ ಯಾವುದೇ ಕಾರಣಕ್ಕೂ ಅವರು ಕಿ’ಸ್ಸಿಂಗ್ ದೃಶ್ಯಗಳಲ್ಲಿ ಇದುವರೆಗೂ ಕಾಣಿಸಿಕೊಂಡಿಲ್ಲ.

ಅಮೃತ ರಾವ್; ವಿವಾಹ್ ಸಿನಿಮಾದ ಮೂಲಕವೇ ತಮ್ಮ ಜನಪ್ರಿಯತೆಯನ್ನು ಬಾಲಿವುಡ್ ಚಿತ್ರರಂಗದಲ್ಲಿ ಸ್ಥಾಪಿಸಿರುವ ಅಮೃತಾ ರಾವ್ ರವರು ಚಿತ್ರರಂಗದಲ್ಲಿ ನಟಿಸಿರುವುದು ಕಡಿಮೆ ಚಿತ್ರಗಳಾಗಿದ್ದರೂ ಕೂಡ ಯಾವುದೇ ಕಾರಣಕ್ಕೂ ಅವರು ಚುಂಬನ ದೃಶ್ಯಗಳಲ್ಲಿ ಇದುವರೆಗೂ ಕೂಡ ಕಾಣಿಸಿಕೊಂಡಿಲ್ಲ. ಅದರಲ್ಲೂ ಬಾಲಿವುಡ್ ಚಿತ್ರರಂಗದ ಅತ್ಯಂತ ಸಂಸ್ಕಾರಿ ನಟಿ ಎಂಬುದಾಗಿ ಯಾರನ್ನು ಕರೆಯುತ್ತಾರೆ.

ತಮನ್ನಾ ಭಾಟಿಯಾ; ತೆಲುಗು ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದಲ್ಲಿ ತಮ್ಮ ನಟನೆ ಹಾಗೂ ಸೌಂದರ್ಯದ ಮೂಲಕ ಮಿಲ್ಕಿ ಬ್ಯೂಟಿ ಎಂಬುದಾಗಿ ಎಲ್ಲರ ಬಾಯಿಯಿಂದ ಕರೆಸಿಕೊಳ್ಳುವ ನಟಿ ತಮನ್ನಾ ಭಾಟಿಯಾ ರವರು ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಸತತವಾಗಿ ನಟಿಸಿದ್ದಾರೆ. ಇವರು ಕೂಡ ಯಾವುದೇ ಕಾರಣಕ್ಕೂ ಚುಂಬನ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಅತ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವ ತಮನ್ನಾ ರವರು ಇತ್ತೀಚಿನ ದಿನಗಳಲ್ಲಿ ಕೊಂಚಮಟ್ಟಿಗೆ ಚಿತ್ರರಂಗದಿಂದ ದೂರವಾಗುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇವರಿಷ್ಟು ಜನ ನಟಿಯರು ಇದುವರೆಗೂ ಯಾವುದೇ ಚುಂಬನ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ.

Get real time updates directly on you device, subscribe now.