ಬಾಲಿವುಡ್ ಮೇಲೆ ಮತ್ತೊಂದು ಬಾಣ ಬಿಟ್ಟ ಮಹೇಶ್. ಬಾಲಿವುಡ್ ನಟಿ ಮಣಿಯರ ಮೇಲೆ ಮುನಿಸು. ಯಾಕೆ ಗೊತ್ತೇ, ಖಡಕ್ ಆಗಿ ಏನು ಮಾಡಿದ್ದಾರೆ ಗೊತ್ತೇ?
ನಮಸ್ಕಾರ ಸ್ನೇಹಿತರೆ ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ಸರ್ಕಾರು ವಾರು ಪಾಠ ಸಿನಿಮಾ ಬಿಡುಗಡೆಯಾಗಿ ಈಗಾಗಲೇ ಬಾಕ್ಸಾಫೀಸ್ ನಲ್ಲಿ ದೊಡ್ಡಮಟ್ಟದ ಕಲೆಕ್ಷನ್ ಮಾಡುವ ಮೂಲಕ ಸೂಪರ್ ಹಿಟ್ ಸಿನಿಮಾಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಇನ್ನು ತಮ್ಮ ಮುಂದಿನ ಸಿನಿಮಾವನ್ನು ರಾಜಮೌಳಿ ಅವರ ನಿರ್ದೇಶನದಲ್ಲಿ ಮಹೇಶ್ ಬಾಬು ರವರು ಮಾಡಲಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ಮೂಡಿಬರಲಿದೆ ಫಾರೆಸ್ಟ್ ಅಡ್ವೆಂಚರ್ ಥ್ರಿಲ್ಲರ್ ಮಾದರಿಯ ಸಿನಿಮಾ ಆಗಿರಲಿದೆ ಎಂಬುದಾಗಿ ಹಲವಾರು ಮೂಲಗಳಿಂದ ತಿಳಿದುಬಂದಿದೆ.
ಇದಕ್ಕಾಗಿ ಐನೂರರಿಂದ ಏಳುನೂರು ಕೋಟಿ ರೂಪಾಯಿ ಬಜೆಟ್ ಕೂಡಾ ವಿನಿಯೋಗಿಸಲಾಗುತ್ತದೆ ಎಂಬುದಾಗಿ ಗಾಳಿ ಸುದ್ದಿ ಇದೆ. ಒಂದು ವೇಳೆ ಇಷ್ಟೊಂದು ಹಣವನ್ನು ವಿನಿಯೋಗಿಸಿದರೆ ಖಂಡಿತವಾಗಿ ಇದೊಂದು ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಬಜೆಟ್ ಉಪಯೋಗಿಸಿಕೊಂಡು ನಿರ್ಮಿಸಿರುವ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿರಲಿದೆ. ಇನ್ನು ಮಹೇಶ್ ಬಾಬು ರವರು ಈ ಸಿನಿಮಾದಲ್ಲಿ ರಾಜಮೌಳಿ ಅವರಿಗೆ ಒಂದು ಶರತ್ತನ್ನು ಕೂಡ ವಿಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯರೇ ಅವರ ಈ ಸಿನಿಮಾದಲ್ಲಿ ಬಾಲಿವುಡ್ ನಾಯಕಿಯರನ್ನು ಹಾಕಿಕೊಳ್ಳಬೇಡಿ ಎಂಬುದಾಗಿ ಮಹೇಶ್ ಬಾಬು ರಾಜಮೌಳಿ ಅವರಿಗೆ ಹೇಳಿದ್ದಾರೆ.
ಇನ್ನು ಇದರ ಮೂಲವನ್ನು ಕಂಡು ಹುಡುಕುತ್ತಾ ಹೋದರೆ ಮೇಜರ್ ಪ್ರಮೋಷನ್ ಸಂದರ್ಭದಲ್ಲಿ ಕೂಡ ನಾನು ಬಾಲಿವುಡ್ ಚಿತ್ರರಂಗದಿಂದ ಆಫರ್ ಬಂದರೂ ಕೂಡ ನಟಿಸುವುದಿಲ್ಲ ತೆಲುಗು ಚಿತ್ರರಂಗದಲ್ಲಿ ನಾನು ನಟಿಸಿಕೊಂಡು ಹೋಗುತ್ತೇನೆ ಎಂಬುದಾಗಿ ಮಹೇಶ್ ಬಾಬು ರವರು ಹೇಳಿದ್ದನ್ನು ನಾವು ನೆನಪಿಸಿಕೊಳ್ಳಬಹುದು ಆಗಿದೆ. ಪರೋಕ್ಷವಾಗಿಯೇ ಹಿಂದಿ ಚಿತ್ರರಂಗದಿಂದ ಅಂತರವನ್ನು ಕಾಯ್ದುಕೊಳ್ಳಲು ಮಹೇಶ್ ಬಾಬು ರವರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇದೇ ಕಾರಣಕ್ಕಾಗಿ ದಕ್ಷಿಣ ಭಾರತ ಚಿತ್ರರಂಗದ ನಟಿಯರಿಗೆ ಮೊದಲ ಪ್ರಶಸ್ತಿಯನ್ನು ನೀಡಲು ರಾಜಮೌಳಿ ಅವರಿಗೆ ಮಹೇಶ್ ಬಾಬು ರವರು ಸೂಚಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.