ಅಂದು ನಾಗ ಚೈತನ್ಯ, ಇಂದು ಸಮಂತಾ. ಕೊನೆಗೂ ವಿಚ್ಛೇದನದ ಬಳಿಕ ಸಿಹಿ ಸುದ್ದಿ ನೀಡಿದ ಸಮಂತಾ. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಏಳು ವರ್ಷದ ಪ್ರೀತಿಗೆ ಹಾಗೂ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ತೆಲುಗು ಚಿತ್ರರಂಗದ ಸ್ಟಾರ್ ಜೋಡಿಯಾಗಿರುವ ನಾಗಚೈತನ್ಯ ಹಾಗೂ ಸಮಂತಾ ರುತ್ ಪ್ರಭು ಇಬ್ಬರು ಕೂಡ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ವಿವಾಹ ವಿಚ್ಛೇದನದ ಮೂಲಕ ಅಂತ್ಯವನ್ನು ಹಾಡಿದ್ದಾರೆ. ವಿವಾಹ ವಿಚ್ಛೇದನದ ನಂತರದ ಸಿನಿಮಾ ಜೀವನವನ್ನು ನೋಡಿದರೆ ನಾಗಚೈತನ್ಯ ಅವರಿಗಿಂತ ಹೆಚ್ಚಾಗಿ ಸಮಂತ ರವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಹಾಗೂ ಯಶಸ್ಸನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ.
ಪುಷ್ಪ ಚಿತ್ರದ ಐಟಂ ಡ್ಯಾನ್ಸ್ ನಲ್ಲಿ ಸ್ಟೆಪ್ ಹಾಕುವ ಮೂಲಕ ಚಿತ್ರರಂಗಕ್ಕೆ ಮತ್ತೊಮ್ಮೆ ಕಾಲಿಟ್ಟ ಸಮಂತ ಮತ್ತೆ ಹಿಂದಿರುಗಿ ನೋಡಲೇ ಇಲ್ಲ ಎಂದು ಹೇಳಬಹುದಾಗಿದೆ. ಈಗಾಗಲೇ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದು ಬಹುತೇಕ ಎಲ್ಲಾ ಸಿನಿಮಾಗಳು ಕೂಡ ಬಿಡುಗಡೆಗೆ ಸಿದ್ಧವಾಗಿ ನಿಂತಿವೆ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ವಿಜಯ್ ದೇವರಕೊಂಡ ಜೊತೆಗೆ ಕೂಡ ಹೊಸ ಸಿನಿಮಾದಲ್ಲಿ ನಟನೆ ಮಾಡಿರುವ ಸಮಂತ ಇನ್ನಷ್ಟು ಸಿನಿಮಾಗಳನ್ನು ಬೇರೆ ಬೇರೆ ಭಾಷೆಗಳಲ್ಲಿ ನಟಿಸುವುದು ಪಕ್ಕಾ ಆಗಿದೆ. ಇನ್ನು ವಿವಾಹ ವಿಚ್ಛೇದನದ ನಂತರ ಮತ್ತೊಂದು ಸಂತೋಷದ ಸುದ್ದಿಯನ್ನು ಕೂಡ ಸಮಂತ ಅಭಿಮಾನಿಗಳು ಆನಂದಿಸಬಹುದಾಗಿದೆ.
ಹೌದು ಗೆಳೆಯರೇ ಆರ್ಮ್ಯಾಕ್ಸ್ ಮೀಡಿಯಾ ಪ್ರಕಟಿಸಿರುವ ಲಿಸ್ಟಿನಲ್ಲಿ ಅತ್ಯಂತ ಜನಪ್ರಿಯ ನಟಿಯರ ಪೈಕಿ ಯಲ್ಲಿ ಸಮಂತ ಅವರು ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲಿಸ್ಟಿನಲ್ಲಿ ಐದು ತೆಲುಗು ಹಾಗೂ ಮೂರು ತಮಿಳು ಹಾಗೂ ಇಬ್ಬರು ಹಿಂದಿ ನಟಿಯರು ಕೂಡ ಇದ್ದಾರೆ. ಅವರೆಲ್ಲರನ್ನೂ ಹಿಂದಿಕ್ಕಿ ಮೊದಲ ಸ್ಥಾನದಲ್ಲಿ ಸಮಂತ ಕಾಣಿಸಿಕೊಂಡಿರುವುದು ಅವರ ಜನಪ್ರಿಯತೆ ಕಾಲಕ್ರಮೇಣವಾಗಿ ಭಾರತೀಯ ಚಿತ್ರರಂಗದಲ್ಲಿ ಯಾವ ಮಟ್ಟಿಗೆ ಇರುತ್ತದೆ ಎಂಬುದನ್ನು ಇದು ಸಾಕ್ಷೀಕರಿಸಿದೆ.