ಜೋಡಿ ನಂಬರ್ 1 ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಬರುತ್ತಿರುವವರು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದಂಪತಿಗಳ ಕುರಿತಂತೆ ಮೊದಲಬಾರಿಗೆ ಕಿರುತೆರೆ ಇತಿಹಾಸದಲ್ಲಿ ಇತ್ತೀಚಿನ ದಿನಗಳಲ್ಲಿ ಒಂದು ಒಳ್ಳೆ ಕಾರ್ಯಕ್ರಮವನ್ನು ಪ್ರಸಾರ ಮಾಡಿದಂತಹ ಖ್ಯಾತಿ ಕಲರ್ಸ್ ಕನ್ನಡ ವಾಹಿನಿಗೆ ದಕ್ಕುತ್ತದೆ. ಹೌದು ಗೆಳೆಯರೆ ಕಲರ್ಸ್ ಕನ್ನಡ ವಾಹಿನಿ ರಾಜರಾಣಿ ಕಾರ್ಯಕ್ರಮದ ಮೂಲಕ ದಂಪತಿಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸುವಂತಹ ಕಂಟೆಂಟ್ ಅನ್ನು ಈ ಕಾರ್ಯಕ್ರಮದ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ನೋಡಿ ಆಸ್ವಾದಿಸುವ ಅವಕಾಶವನ್ನು ನೀಡಿತ್ತು.
ಇದಾದ ನಂತರ ಈಗ ಕಲರ್ಸ್ ಕನ್ನಡ ವಾಹಿನಿ ಈಗ ರಾಜ-ರಾಣಿ ಕಾರ್ಯಕ್ರಮದ ಎರಡನೇ ಆವೃತ್ತಿಗೆ ಸಿದ್ಧವಾಗಿ ನಿಂತಿದೆ. ಇದಕ್ಕೂ ಮುನ್ನವೇ ಈಗ ಜೀ ಕನ್ನಡ ವಾಹಿನಿ ಇದೇ ರೀತಿ ದಂಪತಿಗಳ ನಡುವಿನ ಬಾಂಧವ್ಯವನ್ನು ತೋರಿಸುವ ರಿಯಾಲಿಟಿ ಶೋ ಆಗಿರುವ ಜೋಡಿ ನಂಬರ್1 ರಿಯಾಲಿಟಿ ಶೋ ಅನ್ನು ಈಗ ಪ್ರಸಾರ ಮಾಡಲು ಆರಂಭಿಸಿದೆ. ಹೌದು ಗೆಳೆಯರೇ ಶನಿವಾರ ಹಾಗೂ ಭಾನುವಾರ ಸಂಜೆ 6.30 ರಿಂದ ಪ್ರಾರಂಭವಾಗುವ ಈ ಕಾರ್ಯಕ್ರಮ ಇನ್ನು ಮುಂದೆ ಜೀ ಕನ್ನಡ ವಾಹಿನಿಯ ಪ್ರೇಕ್ಷಕರು ಕೂಡ ದಂಪತಿಗಳ ರಿಯಾಲಿಟಿ ಶೋ ಕಾರ್ಯಕ್ರಮವನ್ನು ಆನಂದಿಸಬಹುದಾಗಿದೆ. ಇನ್ನು ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಯಾರು ಬರುತ್ತಾರೆ ಎಂಬುದಾಗಿ ಎಲ್ಲರೂ ಕಾದುಕುಳಿತಿದ್ದರು.
ಈಗ ಈ ಪ್ರಶ್ನೆಗೂ ಕೂಡ ಉತ್ತರ ದೊರಕಿದೆ. ಹೌದು ಗೆಳೆಯರೇ ಜೋಡಿ ನಂಬರ್ 1 ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಖ್ಯಾತ ನಟಿ ಮಾಳವಿಕ ಅವಿನಾಶ್ ಹಾಗೂ ನೆನಪಿರಲಿ ಪ್ರೇಮ್ ಅವರು ಕಾಣಿಸಿಕೊಳ್ಳಲಿದ್ದಾರೆ. ಒಟ್ಟಾರೆಯಾಗಿ ತೀರ್ಪುಗಾರರ ಕುರ್ಚಿಯಲ್ಲಿ ಹಲವು ಕಾಲಗಳ ನಂತರ ಹೊಸಮುಖ ಕಾಣಿಸುತ್ತಿರುವುದು ಎಲ್ಲರಿಗೂ ಕೂಡ ಕಾರ್ಯಕ್ರಮದ ಕುರಿತಂತೆ ಇನ್ನಷ್ಟು ಕುತೂಹಲವನ್ನು ಹೆಚ್ಚಿಸುವಂತೆ ಮಾಡುತ್ತಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.