ಯಶ್ ಅವರ ಮುಂದಿನ ಸಿನಿಮಾ ಯಾವುದು ಗೊತ್ತಾ ?? ಬಜೆಟ್ ಗೆ ಕೋಟಿಗಳ ಲೆಕ್ಕವೇ ಇಲ್ಲ ಬಿಡಿ, ಚಿತ್ರರಂಗ ಅಲ್ಲಾಡೋದೂ ಗ್ಯಾರಂಟಿ

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾದ ಮೇಲೆ ರಾಕಿಂಗ್ ಸ್ಟಾರ್ ಯಶ್ ಅವರ ಖದರ್ರೇ ಬದಲಾಗಿ ಹೋಗಿದೆ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಸ್ಟ್ಯಾಂಡರ್ಡನ್ನು ಮಾತ್ರವಲ್ಲದೆ ಅವರ ಸ್ಟ್ಯಾಂಡರ್ಡನ್ನು ಹಾಗೂ ಮಾರ್ಕೆಟ್ ಲೆವೆಲ್ ಅನ್ನು ಕೂಡ ವಿಸ್ತರಿಸಿಕೊಂಡಿದ್ದಾರೆ ರಾಕಿಂಗ್ ಸ್ಟಾರ್ ಯಶ್.

ಈಗಾಗಲೇ ರಾಕಿಂಗ್ ಸ್ಟಾರ್ ಆಗಿದ್ದ ಅಂತಹ ಯಶ್ ರವರು ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾದ ಮೇಲೆ ಹಾಗೂ ಅದರ ಯಶಸ್ಸಿನ ಕೃಷಿಯನ್ನು ಕಂಡಮೇಲೆ ಪ್ಯಾನ್ ಇಂಡಿಯಾ ಸ್ಟಾರ್ ಹಾಗೂ ನ್ಯಾಷನಲ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅವರ ಸಂಭಾವನೆ ಕೂಡ ದುಪ್ಪಟ್ಟು ಆಗಿದೆ. ಈಗಾಗಲೇ ಅವರು ತಮ್ಮ ಮುಂದಿನ ಚಿತ್ರದ ಮಾತುಕತೆಯಲ್ಲಿ ಇದ್ದು ಆ ಚಿತ್ರ ಕೂಡ ನೆಕ್ಸ್ಟ್ ಲೇವೆಲ್ ಅಲ್ಲಿ ಮೂಡಿಬರಲಿದೆ. ಏನು ತಮ್ಮ ಮುಂದಿನ ಚಿತ್ರಕ್ಕಾಗಿ ಯಶ್ ಅವರು ಬರೋಬ್ಬರಿ 25 ರಿಂದ 30 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.

ಇನ್ನು ಈ ಚಿತ್ರ ವನ್ನು ಯಾರು ನಿರ್ಮಾಣ ಮಾಡುತ್ತಿದ್ದಾರೆ ಹಾಗೂ ಯಾರು ನಿರ್ದೇಶನ ಮಾಡುತ್ತಿದ್ದಾರೆ ಎಂದು ತಿಳಿಯಬೇಕೆಂದರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇನೆ. ಹೌದು ಸ್ನೇಹಿತರೆ ಕೆಜಿಎಫ್ ಚಾಪ್ಟರ್ 2 ಕನ್ನಡ ಚಿತ್ರರಂಗದಲ್ಲಿ ಸಾವಿರ ಕೋಟಿ ಗಳಿಸುವ ಮೊದಲ ಚಿತ್ರವಾಗಿ ಮೂಡಿಬರಲಿದೆ ಎಂಬ ನಿರೀಕ್ಷೆ ದಟ್ಟವಾಗಿದೆ. ಈಗಾಗಲೇ ಬಿಡುಗಡೆಗೂ ಮುನ್ನವೇ 400ರಿಂದ 500 ಕೋಟಿ ವ್ಯಾಪಾರವನ್ನು ಕೆಜಿಎಫ್ ಚಾಪ್ಟರ್ 2 ಗಳಿಸಿಕೊಂಡಿದೆ. ಇನ್ನು ಯಶ್ ರವರ ಮುಂದಿನ ಚಿತ್ರ 200ರಿಂದ 300 ಕೋಟಿ ಬಜೆಟ್ ನಲ್ಲಿ ಭಾರತದ ಬಹುದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರುವ ಜೀ ಸಿನಿಮಾ ನಿರ್ಮಾಣದಲ್ಲಿ ಮೂಡಿ ಬರಲಿದ್ದು ಈ ಚಿತ್ರವನ್ನು ಮಫ್ತಿ ಖ್ಯಾತಿಯ ನರ್ತನ್ ಅವರು ನಿರ್ದೇಶನ ಮಾಡಲಿದ್ದಾರೆ. ಇನ್ನು ಈ ಚಿತ್ರದ ಸ್ಕ್ರಿಪ್ಟ್ ವರ್ಕ್ 2020 ರಲ್ಲಿ ಮುಗಿದಿದ್ದು ಪರಿಸ್ಥಿತಿ ತಿಳಿಗೊಂಡ ಮೇಲೆ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರ 15 ಭಾಷೆಗಳಲ್ಲಿ ಮೂಡಿ ಬರಲಿದ್ದು ತ್ರೀಡಿಯಲ್ಲಿ ಕೂಡ ಕಾಣಸಿಗಲಿದೆ.

Get real time updates directly on you device, subscribe now.