ಮಾಲಾಶ್ರೀ ರವರ ಬಳಿ ತಲೆಬಾಗಿ ಕ್ಷಮೆ ಕೋರಿದ ಜಗ್ಗೇಶ್, ರಾಮುರವರ ಅಗಲಿಕೆಯ ಬಗ್ಗೆ ಹೀಗೆ ಹೇಳಿದ್ದು ಯಾಕೆ ಗೊತ್ತಾ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಕಂಡ ಉತ್ತಮ ನಿರ್ಮಾಪಕರಲ್ಲಿ ಒಬ್ಬರಾದ ಕೋಟಿ ರಾಮು ಎಂದೇ ಹೆಸರು ಪಡೆದು ಕೊಂಡಿದ್ದ ರಾಮು ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಕೋರೋಣ ಕಾರಣದಿಂದ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಇದರಲ್ಲಿ ಯಾವುದೇ ಎರಡು ಮಾತಿಲ್ಲ.

ಇನ್ನು ಕೋಟಿ ರಾಮು ರವರು ಕೇವಲ ಕನ್ನಡ ಚಿತ್ರರಂಗವನ್ನು ಅನಾಥವಾಗಿ ಮಾಡಿಲ್ಲ ಬದಲಾಗಿ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿಯರಲ್ಲಿ ಒಬ್ಬರಾಗಿರುವ ಮಾಲಾಶ್ರೀ ಹಾಗೂ ಅವರ ಮಕ್ಕಳನ್ನು ಕೂಡ ಅನಾಥರನ್ನಾಗಿ ಮಾಡಿದ್ದಾರೆ. ಈ ಘಟನೆಗೆ ಇಡೀ ಚಿತ್ರರಂಗ ಒಟ್ಟಾಗಿ ಸಂತಾಪ ಸೂಚಿಸಿದೆ. ಇನ್ನು ಕೋಟಿ ರಾಮು ರವರನ್ನು ಸಹೋದರ ಎಂದು ಕೊಳ್ಳುತ್ತಿದ್ದ ಜಗ್ಗೇಶ್ ಅವರು ಇದೀಗ ಇದರ ಕುರಿತು ಮಾಲಾಶ್ರೀ ರವರ ಬಳಿ ತಲೆಬಾಗಿ ಕ್ಷಮೆ ಕೇಳಿದ್ದಾರೆ.

ಹೌದು ಸ್ನೇಹಿತರೆ ಕರುನಾ ಕಾರಣದಿಂದ ಮಾಲಾಶ್ರೀ ರವರ ಕುಟುಂಬವನ್ನು ಭೇಟಿ ಮಾಡಲು ಜಗ್ಗೇಶ್ ಅವರಿಗೆ ಸಾಧ್ಯವಾಗಿಲ್ಲ ಅದೇ ಕಾರಣಕ್ಕಾಗಿ, ಟ್ವಿಟರ್ನಲ್ಲಿ ನಿಮ್ಮ ಸಂಕಷ್ಟದಲ್ಲಿ ಭಾಗಿಯಾಗುವ ಯೋಗ್ಯತೆ ಇಲ್ಲದಂತೆ ಈ ಸಮಯ ಮಾಡಿದೆ, ಕೇವಲ ಸಾಂತ್ವನ ಹೇಳುವ ಶಕ್ತಿ ಮಾತ್ರ ಉಳಿದಿದೆ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ, ಹಲವಾರು ಜನರಿಗೆ ನೀಡಿದ ಅನ್ನ ನೀಡಿದ ಮಹನೀಯ ನನ್ನ ತಮ್ಮ ರಾಮು, ಅವನ ಆತ್ಮಕ್ಕೆ ಶಾಂತಿ ಸಿಗಲಿ ನಿಮ್ಮ ಮನೆಯಲ್ಲಿಯೇ ಮತ್ತೊಮ್ಮೆ ಹುಟ್ಟಿ ಬರಲಿ, ನಿಮ್ಮ ಜೊತೆ ಇಡೀ ಉದ್ಯಮ ಇದೆ, ನಿಮ್ಮ ಮಕ್ಕಳನ್ನು ರಾಮುರವರ ಎತ್ತರಕ್ಕೆ ಬೆಳೆಸಿ ಎಂದು ಬರೆದು ಕೊಂಡಿದ್ದಾರೆ

Get real time updates directly on you device, subscribe now.