ಮಂಜು ಗೆಲ್ಲಬೇಕು ಎಂದರೇ ಈ ಕೆಲಸ ಮಾಡಲೇಬೇಕು ಇಲ್ಲವಾದಲ್ಲಿ ಸಾಧ್ಯವೇ ಇಲ್ಲ ! ಮಹತ್ವದ ಕೆಲಸವಾದರೂ ಏನು ಗೊತ್ತಾ??

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಬಿಗ್ಬಾಸ್ ಆರಂಭವಾದ ದಿನದಿಂದಲೂ ಕೂಡ ಕೆಲವೊಂದಿಷ್ಟು ವಾರಗಳ ಕಾಲ ಅಂದರೆ ಈ ಎರಡು ಮೂರು ವಾರಗಳ ಹಿಂದಿನ ಲೆಕ್ಕಾಚಾರ ನಾವು ತೆಗೆದು ಕೊಳ್ಳುವುದಾದರೆ ಯಾರು ಗೆಲ್ಲುತ್ತಾರೆ ಎಂದ ತಕ್ಷಣ ಶೇಕಡ 80 ಕ್ಕೂ ಹೆಚ್ಚು ಜನರಲ್ಲಿ ಕೇಳಿ ಬರುತ್ತಿದ್ದ ಹೆಸರು ಮಂಜು ಪಾವಗಡ ರವರದ್ದು. ಮಂಜು ಪಾವಗಡ ರವರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಎಂದು ಆರಂಭವಾದ ಮೊದಲನೇ ವಾರದಿಂದಲೇ ಪ್ರೇಕ್ಷಕರು ಫಿಕ್ಸ್ ಆಗಿಬಿಟ್ಟಿದ್ದರು.

ಮಂಜುರವರು ಮೊದಲು ದಿವ್ಯ ಸುರೇಶ್ ರವರ ಜೊತೆ ಹಾಸ್ಯ ಬರಿತ ಸನ್ನಿವೇಶಗಳನ್ನು ಸೃಷ್ಟಿಸುವ ಮೂಲಕ ಹಾಗೂ ಮನೆಯ ಇತರ ಮಂದಿಯ ಜೊತೆ ಕೂಡ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡು ಪ್ರತಿಯೊಂದು ಸನ್ನಿವೇಶಗಳನ್ನು ಮನರಂಜನೆಯ ಸನ್ನಿವೇಶವಾಗಿ ಬದಲಾಗಿಸಿ ಹಾಗೂ ಬಿಗ್ ಬಾಸ್ ನೀಡಿದ ಎಲ್ಲಾ ಟಾಸ್ಕ್ ಗಳಲ್ಲಿ ಕೂಡ ಉತ್ತಮ ಪ್ರದರ್ಶನ ತೋರುತ್ತಾ ಕೇವಲ ಪ್ರೇಕ್ಷಕರಿಗೆ ಅಷ್ಟೇ ಅಲ್ಲದೆ ಮನೆಯ ಮಂದಿಯು ಕೂಡ ಮಂಜು ಪಾವಗಡ ರವರು ಎಲ್ಲರ ಮನಗೆದ್ದಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ಮಟ್ಟಕ್ಕೆ ಮಂಜು ಪಾವಗಡ ರವರು ಸದ್ದು ಮಾಡಿದ್ದರು.

ಆದರೆ ಕಳೆದ ಎರಡು ಮೂರು ವಾರಗಳಿಂದ ದಿವ್ಯ ಸುರೇಶ್ ರವರ ಜೊತೆ ವೈಯಕ್ತಿಕ ಕಾರಣಗಳಿಗೆ ಹಾಗೂ ಇನ್ಯಾವುದೋ ಮಾತುಕತೆಯ ಸಂದರ್ಭದಲ್ಲಿ ಸೃಷ್ಟಿಯಾದ ಗೊಂದಲಗಳಿಂದ ಬಹುತೇಕ ಸಮಯವನ್ನು ದಿವ್ಯ ಸುರೇಶ್ ರವರ ಜೊತೆ ಸಣ್ಣ ರೀತಿಯಲ್ಲಿ ಖಾರವಾದ ಮಾತುಗಳಿಂದ ವಾದಗಳನ್ನು ನಡೆಸುತ್ತಾ ಕಾಲ ಕಳೆಯುತ್ತಿದ್ದಾರೆ. ಇದರಿಂದ ಮಂಜು ಪಾವಗಡ ರವರು ಸಂಪೂರ್ಣ ಆಟವನ್ನು ಮರೆತುಬಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು.

ಅದೇ ಸಮಯದಲ್ಲಿ ದಿವ್ಯ ಸುರೇಶ್ ರವರು ನಿಧಿ ಸುಬ್ಬಯ್ಯ ಅರಬರ ಜೊತೆ ಇತರ ಸ್ಪರ್ಧಿಗಳ ಪತ್ರಗಳನ್ನು ಹುಡುಕಿಕೊಳ್ಳಲು ಒಪ್ಪಂದ ಮಾಡಿಕೊಂಡಾಗ ವಿಷಯ ತಿಳಿದಿದ್ದರೂ ಮಂಜು ಪಾವಗಡ ರವರು ದಿವ್ಯ ಸುರೇಶ್ ರವರಿಗೆ ಮಾಡಿದ್ದು ತಪ್ಪು ಎಂದು ಹೇಳದೆ ಇದ್ದ ಕಾರಣ ಮನೆಯ ಸ್ಪರ್ಧಿಗಳು ಕೂಡ ಮಂಜು ಪಾವಗಡ ರವರ ವಿರುದ್ಧ ಗರಮ್ ಆಗಿದ್ದಾರೆ. ಆದರೆ ಅರವಿಂದ್ ಹಾಗೂ ದಿವ್ಯ ಉರುದುಗ ರವರು ಮಂಜು ಪಾವಗಡ ರವರ ವಿರುದ್ಧ ಅಸಮಾಧಾನ ತೋಡಿಕೊಳ್ಳುತ್ತಿರುವುದನ್ನು ನೋಡಿದ ಪ್ರೇಕ್ಷಕರು ಇದು ಸರಿಯಲ್ಲ ಎಂದು ಕೂಡ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಮಂಜು ಪಾವಗಡ ರವರು ತಪ್ಪು ಮಾಡಿಲ್ಲ ಎಂದು ಪ್ರೇಕ್ಷಕರ ವಾದವಾಗಿದೆ ಆದರೆ ಇದೇ ಸಂದರ್ಭದಲ್ಲಿ ಇಷ್ಟು ದಿವಸ ನಾವು ಮಂಜು ರವರನ್ನು ವಿನ್ನರ್ ಎಂದು ಕೊಂಡಿದ್ದೇವೆ ಆದರೆ ಮಂಜುರವರು ಫೈನಲ್ ವರೆಗೆ ತಲುಪುವ ಸಾಧ್ಯತೆ ಕೂಡ ಕಂಡು ಬರುತ್ತಿಲ್ಲ ಎಂದು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಷ್ಟು ದಿವಸ ಮಂಜು ಪಾವಗಡ ಎಂದ ತಕ್ಷಣ ಜೈ ಜೈ ಎನ್ನುತ್ತಿದ್ದ ಪ್ರೇಕ್ಷಕರು ಅದ್ಯಾಕೆ ಮಂಜು ಪಾವಗಡ ರವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ನಾವು ನೋಡುವುದಾದರೆ, ಈ ಮೊದಲೇ ಹೇಳಿದಂತೆ ದಿವ್ಯ ಸುರೇಶ್ ರವರ ಜೊತೆ ಬಹುತೇಕ ಸಮಯವನ್ನು ಕಳೆಯುತ್ತಾರೆm ಮನೆಯ ಮಂದಿಯ ಜೊತೆ ಒಟ್ಟು ಕೂಡದೆ ಟಾಸ್ಕ್ ಇದ್ದಾಗ ಮಾತ್ರ ಕಾಣಿಸಿಕೊಳ್ಳುತ್ತಾ ಇರುವ ಕಾರಣ ಪ್ರೇಕ್ಷಕರಿಗೆ ಇದು ಇಷ್ಟವಾಗಿಲ್ಲ ಅದೇ ಕಾರಣಕ್ಕಾಗಿ ಮಂಜು ಪಾವಗಡ ರವರು ದಿವ್ಯ ಸುರೇಶ್ ರವರ ಜೊತೆ ಕೆಲವು ವಾರಗಳಿಂದ ನಡೆಯುತ್ತಿರುವ ಸನ್ನಿವೇಶಗಳಿಂದ ದೂರ ಬಂದು ಅಥವಾ ಸಾಧ್ಯವಾದರೆ ಸಂಪೂರ್ಣವಾಗಿ ದೂರ ಬಂದರೇ ಖಂಡಿತ ಮುಂದಿನ ವಾರಗಳಲ್ಲಿ ಮಂಜು ಪಾವಗಡ ರವರು ಮತ್ತೆ ಮೊದಲಿನಂತೆ ನಮ್ಮೆಲ್ಲರನ್ನು ಮನರಂಜಿಸುವ ಮೂಲಕ ಗೆಲ್ಲಬಹುದು ಎಂದು ಸಲಹೆ ನೀಡಿದ್ದಾರೆ.

Get real time updates directly on you device, subscribe now.