ಬಿಗ್ ಬಾಸ್ ನಲ್ಲಿ ಮಹತ್ವದ ತಿರುವು, ಸದಸ್ಯರಿಗೆ ಕಾದಿದೆ ಬಿಗ್ ಶಾಕ್‌. ಏನು ಗೊತ್ತಾ?? ಪ್ರೇಕ್ಷಕರಿಗೆ ಹಬ್ಬ?

0

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿ ಕಳೆದ ಆರು ವಾರಗಳ ಕಾಲ ಯಶಸ್ವಿಯಾಗಿ ಕಳೆದು ಇದೀಗ ಏಳನೇ ವಾರ ಕೂಡ ಬಹಳ ಉತ್ತಮವಾಗಿ ಮೂಡಿ ಬರುತ್ತಿದೆ. ದಿನೇ ದಿನೇ ಆಟದ ಕಾವು ಏರುತ್ತಿರುವ ಸಂದರ್ಭದಲ್ಲಿ ಇದೀಗ ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಹಾಗೂ ಪ್ರೇಕ್ಷಕರಿಗೆ ಕೂಡ ಒಂದು ಶಾಕಿಂಗ್ ವಿಚಾರ ಎದುರಾಗಿದೆ. ಹೌದು ಸ್ನೇಹಿತರೇ ವಿಚಾರವಾದರೂ ಏನು ಹಾಗೂ ಈ ಕುರಿತು ನಡೆಯುತ್ತಿರುವ ಸಂಪೂರ್ಣ ಚರ್ಚೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ ಕೇಳಿ

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ಮೊದಲ ದಿನದಿಂದಲೂ ಕೂಡ ಕನ್ನಡದ ಖ್ಯಾತ ನಟ ಹಾಗೂ ಅಭಿನಯ ಚಕ್ರವರ್ತಿ ಎಂಬ ಬಿರುದು ಪಡೆದು ಕೊಂಡಿರುವ ಕಿಚ್ಚ ಸುದೀಪ್ ರವರು ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಡುತ್ತಾ ಬಂದಿದ್ದಾರೆ, ಇವರನ್ನು ಬದಲಾಯಿಸುವ ಆಲೋಚನೆ ಕೂಡ ಇಲ್ಲಿಯವರೆಗೂ ಮಾಡಲಾಗಿಲ್ಲ.

ಆದರೆ ಈ ವಾರ ಸುದೀಪ್ ರವರು ಅ’ನಾರೋಗ್ಯದ ಕಾರಣ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವುದು ಬಹುತೇಕ ಅನುಮಾನವಾಗಿದೆ, ಇಂತಹ ಸಂದರ್ಭದಲ್ಲಿ ವಾಹಿನಿಯು ಇತರ ನಟರನ್ನು ಸಂಪರ್ಕಿಸಿ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವ ಅಂತೆ ಮಾತುಕತೆ ನಡೆಸಿದೆ ಅಷ್ಟೇ ಅಲ್ಲದೆ ಒಂದು ವೇಳೆ ಮಾತುಕತೆಗಳು ವಿಫಲವಾದಲ್ಲಿ ಈ ವಾರದ ವೀಕೆಂಡ್ ಕಾರ್ಯಕ್ರಮ ನಡೆಸಿಕೊಡಲು ಇರಲು ವಾಹಿನಿ ಚರ್ಚೆ ನಡೆಸಿದ್ದು, ಮುಂದಿನವಾರ ಎರಡು ಎಲಿಮಿನೇಷನ್ ಮಾಡಲು ಆಲೋಚನೆ ನಡೆಸಿದೆ.

ಇನ್ನು ವಾಹಿನಿಯು ಯಾವ ಯಾವ ನಟರ ಜೊತೆ ಮಾತುಕತೆ ನಡೆಸಿದೆ, ಎಂಬುದನ್ನು ನೋಡುವುದಾದರೇ ವಾಹಿನಿಯು ಮೊದಲನೇ ಆಯ್ಕೆಯಾಗಿ ಕಿರುತೆರೆಯಲ್ಲಿ ತನ್ನ ನಿರೂಪಣ ಶೈಲಿಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ವೀಕೆಂಡ್ ವಿಥ್ ಕಾರ್ಯಕ್ರಮ ನಿರೂಪಣೆ ಮಾಡಿ ಯಶಸ್ವಿ ನಿರೂಪಕರ ಸಾಲಿಗೆ ಸೇರಿರುವ ರಮೇಶ್ ಅರವಿಂದ್ ರವರನ್ನು ಬಿಗ್ಬಾಸ್ ಕಾರ್ಯಕ್ರಮ ನಡೆಸಿಕೊಡುವಂತೆ ಮಾತುಕತೆ ನಡೆಸಲು ವಾಹಿನಿ ಎಲ್ಲಾ ಸಿದ್ಧತೆ ನಡೆಸಿದೆ.

ಇನ್ನು ರಮೇಶ್ ಅರವಿಂದ್ ರವರನ್ನು ಹೊರತುಪಡಿಸಿ ಈಗಾಗಲೇ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಣೆ ಮಾಡಿ ಕಿರುತೆರೆಯಲ್ಲಿಯೂ ಕೂಡ ಮೋಡಿ ಮಾಡಿರುವ ಕನ್ನಡದ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಪುನೀತ್ ರಾಜಕುಮಾರ್ ರವರ ಜೊತೆ ವಾಹಿನಿಯು ಮಾತುಕತೆ ನಡೆಸಲು ಸಿದ್ಧತೆ ನಡೆಸಿದ್ದು ಇವರನ್ನು ಕೂಡ ಆಯ್ಕೆಗೆ ಪರಿಗಣಿಸಲಾಗಿದೆ.

ಇನ್ನು ಮೂರನೆಯದಾಗಿ ಇದೇ ಮೊಟ್ಟ ಮೊದಲ ಬಾರಿಗೆ ಕಿರುತೆರೆ ಗೆ ಕರೆತರಲು ಸ್ಟಾರ್ ನಟ ಕೆಜಿಎಫ್ ಖ್ಯಾತಿಯ ಯಶ್ ರವರನ್ನು ವಾಹಿನಿಯು ಆಲೋಚನೆ ನಡೆಸಿದ್ದು, ಯಶ್ ರವರು ಒಪ್ಪಿಕೊಂಡರೆ ಮುಂದಿನ ಬಿಗ್ ಬಾಸ್ ಕಾರ್ಯಕ್ರಮವನ್ನು ಆಯೋಜಿಸಲು ವಾಹಿನಿಯು ಅನುವು ಮಾಡಿಕೊಡಲಿದೆ, ಇದಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲು ಕೂಡ ವಾಹಿನಿ ಸಿದ್ದವಿದೆ ಎಂಬುದು ತಿಳಿದು ಬಂದಿದೆ. ಒಂದು ವೇಳೆ ಈ ಮೇಲಿನ ಮೂರು ಯಾವುದೇ ನಟನಾಗಿರಲಿ ಒಪ್ಪಿಕೊಂಡರೇ ಕಂಡಿತ ಅಭಿಮಾನಿಗಳಿಗೆ ಅದು ಭರಪೂರ ಮನರಂಜನೆ ನೀಡಲಿದೆ ಎಂಬುದು ನಮ್ಮ ಅಭಿಪ್ರಾಯ.

Get real time updates directly on you device, subscribe now.