ಕವಿತಾ ನಂತರ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕನ್ನಡದ ಖ್ಯಾತ ಕಿರುತೆರೆ ನಟಿ ಯಾರು ಗೊತ್ತಾ??
ನಮಸ್ಕಾರ ಸ್ನೇಹಿತರೇ ಕಳೆದ ವರ್ಷ ಹಲವಾರು ಸೆಲೆಬ್ರಿಟಿಗಳು ಕೋರೋನ ನಡುವೆಯೂ ಕೂಡ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದರು, ಇತ್ತೀಚಿನ ದಿನಗಳಲ್ಲಿ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೇ ಸೆಲೆಬ್ರೆಟಿಗಳು ಹೆಚ್ಚಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಅದೇ ಸಮಯದಲ್ಲಿ ಕೊರೋನಾ ನಡುವೆಯೂ ಕೂಡ ವಿವಿಧ ಸೆಲೆಬ್ರಿಟಿಗಳು ಈಗಾಗಲೇ ಮದುವೆಗೆ ತಯಾರಿ ನಡೆಸಿದ್ದಾರೆ
ಇತ್ತೀಚೆಗಷ್ಟೇ ಕನ್ನಡ ಕಿರುತೆರೆಯ ಖ್ಯಾತ ಜೋಡಿಗಳಲ್ಲಿ ಒಂದಾದ ಚಂದನ್ ಹಾಗೂ ಕವಿತ ಗೌಡ ರವರು ಕೂಡ ನಿಶ್ಚಿತಾರ್ಥ ಮಾಡಿಕೊಂಡು ಮುಂದಿನ ತಿಂಗಳಿನಲ್ಲಿ ಮದುವೆ ಮಾಡಿ ಕೊಳ್ಳಲು ಸಕಲ ಸಿದ್ಧತೆ ನಡೆಸಿದ್ದಾರೆ, ಈತನ್ಮಧ್ಯೆ ಮತ್ತೊಬ್ಬರು ನಟಿ ಕೂಡ ದಾಂಪತ್ಯ ಜೀವನಕ್ಕೆ ಕಾಲಿಡುವ ದಾಗಿ ಘೋಷಣೆ ಮಾಡಿದ್ದಾರೆ.
ಹೌದು ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ವಿವಿಧ ಧಾರವಾಹಿಗಳಲ್ಲಿ ನಾಯಕಿ ನಟಿಯಾಗಿ ನಟಿಸಿ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ಕಾವ್ಯ ಗೌಡರವರು ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡುವುದಕ್ಕೆ ಘೋಷಣೆ ಮಾಡಿದ್ದಾರೆ, ದಿನಾಂಕ ಖಚಿತವಾಗಿ ಇನ್ನೂ ನಿರ್ಧಾರ ಮಾಡಿಲ್ಲವಾದರೂ ಕೂಡ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡುವುದು ಖಚಿತ ಎಂದು ಕಾವ್ಯ ಗೌಡರವರು ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಸಾಯಿ ರಾಮ್ ದಯೆಯಿಂದ ಮನೆಯವರು ಒಳ್ಳೆ ಹುಡುಗನನ್ನು ಹುಡುಕಿದ್ದಾರೆ ಎಂದು ಇದೆ ಸಮಯದಲ್ಲಿ ತಿಳಿಸಿದ್ದಾರೆ. ಈ ಮೂಲಕ ಕಿರುತೆರೆಯ ಕ್ರಶ್ ಮತ್ತೊಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.