ಮಂಜು, ಅರವಿಂದ್ ದಿವ್ಯ ಠುಸ್, ಗೆಲ್ಲುವ ಸಾಮರ್ಥ್ಯವಿರುವುದು ಇಬ್ಬರಿಗೆ ಮಾತ್ರ ! ಯಾರ್ಯಾರು ಗೊತ್ತಾ??
ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಇದೀಗ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ದಿನೇ ದಿನೇ ಸ್ಪರ್ದಿಗಳ ನಡುವೆ ನಡೆಯುತ್ತಿರುವ ಘಟನೆಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಮೊದಲ ದಿಂದಲೂ ಜನರನ್ನು ನಕ್ಕು ನಲಿಸುವ ಯಶಸ್ವಿಯಾಗಿದ್ದ ಮಂಜು ಪಾವಗಡ ರವರು ಇತ್ತೀಚಿನ ದಿನಗಳಲ್ಲಿ ಕೊಂಚ ಮಂಕಾದಂತೆ ಕಾಣುತ್ತಿದೆ, ಯಾವುದೇ ಸನ್ನಿವೇಶವನ್ನು ಹಾಸ್ಯವಾಗಿ ಪರಿವರ್ತನೆ ಮಾಡುತ್ತಿದ್ದ ಮಂಜ ಪಾವಗಡ ರವರು ಈಗ ಮಹಿಳಾ ಸ್ಪರ್ಧಿಗಳ ಪರವಾಗಿ ಮೃದು ಧೋರಣೆ ತೋರಿಸಲು ಹೋಗಿ ತಮ್ಮನ್ನು ತಾವು ಕಳೆದು ಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿವೆ.
ಅಷ್ಟೇ ಅಲ್ಲದೆ ಮಂಜು ರವರಿಗೆ ವಿವಿಧ ಸ್ಪರ್ದಿಗಳು ಪೈಪೋಟಿ ನೀಡುವ ಮಾತುಗಳು ಕೇಳಿಬಂದಿದ್ದವು. ಆದರೆ ಕಳೆದ ಒಂದು ವಾರದಿಂದ ಬಹುತೇಕ ಸ್ಪರ್ಧಿಗಳು ಟಾಸ್ಕ್ ಅಥವಾ ಪ್ರೇಕ್ಷಕರ ಕುರಿತು ಮರೆತು ತಮ್ಮದೇ ಆದ ಲೋಕದಲ್ಲಿ ಕಳೆದು ಹೋಗಿದ್ದಾರೆ, ಅದರಲ್ಲಿ ದಿವ್ಯ ಸುರೇಶ್, ಮಂಜು ಪಾವಗಡ, ಸೇರಿದಂತೆ ಅರವಿಂದ್ ಹಾಗೂ ದಿವ್ಯ ಉರುಡುಗ ರವರು ಕೂಡ ಸೇರಿಕೊಂಡಿದ್ದಾರೆ. ಇವರಿಂದ ಯಾವುದೇ ಮನರಂಜನೆ ಸಿಗುತ್ತಿಲ್ಲ ಎಂಬ ಮಾತುಗಳು ಕೂಡ ಪ್ರೇಕ್ಷಕರಿಂದ ಕೇಳಿಬಂದಿದೆ.
ಇಂತಹ ಸಂದರ್ಭದಲ್ಲಿ ಯಾವುದೇ ಗೋಜಿಗೆ ಹೋಗದೆ, ಎಲ್ಲರ ಜೊತೆ ಬಹಳ ಚೆನ್ನಾಗಿ ನಡೆದು ಕೊಳ್ಳುತ್ತಾ ಕಳೆದ ವಾರ ಟಾಸ್ಕ್ ನಲ್ಲಿನಂತೂ ಅದ್ಭುತ ಪ್ರದರ್ಶನ ನೀಡಿರುವ ವೈಷ್ಣವಿ ಗೌಡ ರವರು ಇದೀಗ ಸದ್ಯದ ಮಟ್ಟಿಗೆ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿ ಕಾಣಸಿಗುತ್ತಾರೆ, ಇನ್ನು ಇವರನ್ನು ಹೊರತು ಪಡಿಸಿದರೆ ಇತ್ತೀಚಿನ ದಿನಗಳಲ್ಲಿ ವಾದವಿವಾದಗಳನ್ನು ಹೆಚ್ಚು ಮಾಡುತ್ತಿರುವ ಪ್ರಶಾಂತ ಸಂಬರ್ಗಿ ರವರು ಕೂಡ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಯಾಗಿ ಬದಲಾಗುತ್ತಿದ್ದಾರೆ, ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.