ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಅಮೂಲ್ಯ ಗೌಡರವರ ವಯಸ್ಸು ಇಷ್ಟೇನಾ?? ಎಷ್ಟು ಗೊತ್ತಾ??

66

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ವಿವಿಧ ಧಾರವಾಹಿಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಅಮೂಲ್ಯ ಗೌಡ ರವರು ಇತ್ತೀಚೆಗೆ ಕಳೆದ ಕೆಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ಕಮಲಿ ಧಾರಾವಾಹಿಯ ಮೂಲಕ ಮನೆಮಾತಾಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಯಾರಿಗುಂಟು ಯಾರಿಗಿಲ್ಲ ಸ್ಪರ್ಧೆಯ ಮೂಲಕ ಮೊದಲ ಬಾರಿಗೆ ಟಿವಿಯಲ್ಲಿ ಕಾಣಿಸಿಕೊಂಡ ಅಮೂಲ್ಯ ಗೌಡ ರವರಿಗೆ, ಈ ಕಾರ್ಯಕ್ರಮದ ಬಳಿಕ ಆಡಿಷನ್ ನಲ್ಲಿ ಭಾಗವಹಿಸುವಂತೆ ಅವಕಾಶ ನೀಡಲಾಗಿತ್ತು.

ಡಿಪ್ಲೋಮಾ ಓದುತ್ತಿದ್ದ ಸಂದರ್ಭದಲ್ಲಿ ಆಡಿಶನ್ ಗೆ ಕರೆ ಬಂದಾಗ, ಅಮೂಲ್ಯ ಗೌಡರವರು ಮೊದಲು ಸ್ವಾತಿಮುತ್ತು ಎಂಬ ಧಾರವಾಹಿ ಗೆ ಆಯ್ಕೆಯಾಗುತ್ತಾರೆ, ಈ ಧಾರವಹಿಯಲ್ಲಿ ಕೆಲವು ತಿಂಗಳುಗಳ ಕಾಲ ನಟನೆ ಮಾಡಿ ತದ ನಂತರ ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿರುವ ಪುನರ್ವಿವಾಹ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಪಡೆಯುತ್ತಾರೆ, ಇಲ್ಲಿಯವರೆಗೂ ಹೆಚ್ಚೇನು ಸದ್ದು ಮಾಡದೇ ಇದ್ದರೂ ಕೂಡ ಕೊನೆಯದಾಗಿ ಉದಯ ಟಿವಿಯಲ್ಲಿ ಪ್ರಸಾರವಾದ ಅರಮನೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ.

ಅರಮನೆ ಧಾರವಾಹಿಯಲ್ಲಿ ನೆಗೆಟಿವ್ ಶೇಡ್ ಪಾತ್ರ ಇದ್ದರೂ ಕೂಡ ಬಹಳ ಅತ್ಯದ್ಭುತವಾಗಿ ನಟನೆ ಮಾಡಿರುವ ಇವರು ಇಲ್ಲಿಯವರೆಗೂ ಯಾವುದೇ ನಟನೆಯ ತರಬೇತಿ ಪಡೆದು ಕೊಂಡಿಲ್ಲ ಎಂಬುದು ನಿಜಕ್ಕೂ ಒಂದು ಆಶ್ಚರ್ಯದ ಸಂಗತಿ ಕೇವಲ ಕ್ಯಾಮರಾ ಮುಂದೆ ನಿಂತುಕೊಂಡು ನಟನೆಯನ್ನು ಕಲಿತು ಬಹಳ ಅದ್ಭುತವಾಗಿ ನಟನೆ ಮಾಡುವ ಇವರು ಅರಮನೆ ಧಾರವಾಹಿಯಲ್ಲಿ ಯಶಸ್ಸು ಗಳಿಸಿದ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆಯುತ್ತಾರೆ.

ನಿಜ ಜೀವನದಲ್ಲಿ ಬಹಳ ಮಾಡ್ರನ್ ಆಗಿರುವ ಅಮೂಲ್ಯ ಗೌಡ ರವರಿಗೆ, ಕಮಲಿ ಧಾರಾವಾಹಿಯಲ್ಲಿ ಸಿಕ್ಕಿದ್ದು ಪಕ್ಕ ಹಳ್ಳಿ ಹುಡುಗಿಯ ಪಾತ್ರ, ಎರಡು ಜಡೆ ಎಂದರೆ ಇಷ್ಟವಾಗದ ಇವರು ನಟನೆಗಾಗಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟನೆ ಮಾಡಲು ಒಪ್ಪಿಕೊಂಡರು. ಹೀಗೆ ಒಪ್ಪಿಕೊಂಡು ಇವರು ಸುಮ್ಮನೆ ಕೂರಲಿಲ್ಲ ಬದಲಾಗಿ ತಮಗೆ ನೀಡಿದ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಮೂಲಕ ನಿಜಕ್ಕೂ ಅಮೂಲ್ಯ ಗೌಡರವರು ಹಳ್ಳಿಯ ಹುಡುಗಿ ಆಗಿರಬೇಕು ಅದೇ ಕಾರಣಕ್ಕಾಗಿ ಬಹಳ ಅದ್ಭುತವಾಗಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುವಂತೆ ನಟನೆ ಮಾಡಿದ್ದಾರೆ.

ಇನ್ನು ತೆರೆಯಮೇಲೆ ಲಂಗ ದಾವಣಿಯಲ್ಲಿ ಬಹಳ ಸುಂದರವಾಗಿ ಕಾಣುವ ಇವರು ನಿಜ ಜೀವನದಲ್ಲಿ ಮಾತ್ರ ಮಾಡ್ರನ್ ಹುಡುಗಿ, ಆದರೆ ತೆರೆಯ ಮೇಲೆ ಮಾತ್ರ ನಿಜಕ್ಕೂ ಇವರು ಹಳ್ಳಿಯ ಹುಡುಗಿ ಎಂಬಂತೆ ನಟನೆ ಮಾಡಿದ್ದಾರೆ ಎಂಬುವುದನ್ನು ಎಲ್ಲರೂ ಕೂಡ ಕೊಳ್ಳುತ್ತಾರೆ.

ಇನ್ನು ಇವರ ವೈಯಕ್ತಿಕ ಜೀವನದ ಕುರಿತು ನಾವು ಮಾತನಾಡುವುದಾದರೆ, ಅಮೂಲ್ಯ ಗೌಡರವರು ಮೂಲತಹ ಬೆಂಗಳೂರಿನವರಾಗಿದ್ದಾರೆ, ಬೆಂಗಳೂರಿನಲ್ಲಿಯೇ ಡಿಪ್ಲೋಮೋ ಓದಿ ಮುಗಿಸಿ, ತದ ನಂತರ ಧಾರವಾಹಿ ಕಾರಣಗಳಿಂದ ಅವರು ಅದನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ, ಐದಕ್ಕೂ ಹೆಚ್ಚು ಭಾಷೆಗಳನ್ನು ಸರಾಗವಾಗಿ ಮಾತನಾಡಬಲ್ಲ ಇವರು ಕಾರು ಹಾಗೂ ಬೈಕುಗಳನ್ನು ಬಹಳ ಸುಲಭವಾಗಿ ಓಡಿಸುತ್ತಾರೆ. ಇನ್ನೂ ಅವರ ಹುಟ್ಟಿದ ದಿನಾಂಕವನ್ನು ನಾವು ನೋಡುವುದಾದರೇ ಸ್ನೇಹಿತರೇ 1993 ರಲ್ಲಿ ಬೆಂಗಳೂರಿನಲ್ಲಿ ಜನಿಸಿರುವ ಇವರು ವರ್ಷದ ಮೊದಲ ದಿನ ಅಂದರೆ ಜನವರಿ ಒಂದನೇ ತಾರೀಕಿನಂದು ಜನಿಸಿದ್ದಾರೆ. ಅಂದರೆ ಇಂದಿನ ಲೆಕ್ಕಾಚಾರದ ಪ್ರಕಾರ ಇವರಿಗೆ 27 ವರ್ಷಗಳಾಗಿವೆ.

Get real time updates directly on you device, subscribe now.