ಶನಿ ಧಾರಾವಾಹಿಯ ದಾಮಿನಿ ಈಗ ಏನು ಮಾಡುತ್ತಿದ್ದಾರೆ ಗೊತ್ತಾ?? ಪರದೆಯ ಮೇಲೆ ಯಾವಾಗ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಗೊತ್ತೇ??

60

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಧಾರ್ಮಿಕ ಧಾರವಾಹಿಗಳಿಗೆ ವಿಶೇಷ ಸ್ಥಾನವಿದೆ ಹಾಗೂ ಪ್ರೇಕ್ಷಕರು ಧಾರ್ಮಿಕ ಧಾರವಾಹಿಗಳನ್ನು ಎಷ್ಟರ ಮಟ್ಟಿಗೆ ಆಸಕ್ತಿಯಿಂದ ನೋಡುತ್ತಾರೆ ಎಂಬುದನ್ನು ಕನ್ನಡ ಕಿರುತೆರೆಗೆ ತಿಳಿಸಿಕೊಟ್ಟ ಧಾರವಾಹಿಗಳಲ್ಲಿ ಶನಿ ಧಾರಾವಾಹಿ ಮೊದಲನೇ ಸ್ಥಾನ ಪಡೆದು ಕೊಳ್ಳುತ್ತದೆ. ಈ ಧಾರವಾಹಿ ಕನ್ನಡ ಕಿರುತೆರೆ ಕಂಡ ಅತ್ಯಂತ ಯಶಸ್ವಿ ಧಾರಾವಾಹಿಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇನ್ನು ಈ ದಾರವಾಹಿ ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಸದ್ದು ಮಾಡಿದ ಕಾರಣ ಈ ದಾರವಾಹಿಯಲ್ಲಿ ನಟಿಸಿದ ಕಲಾವಿದರು ಕೂಡಾ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡರು.

ಈ ಧಾರಾವಾಹಿಯಲ್ಲಿ ಶನಿ ದೇವರ ಪತ್ನಿಯ ಪಾತ್ರದಲ್ಲಿ ನಟನೆ ಮಾಡಿದ ದಾಮಿನಿ ಪಾತ್ರದಾರಿ ಬ್ರಿಂದ ಆಚಾರ್ಯರವರು ಕೂಡ ಕರ್ನಾಟಕದಲ್ಲಿ ಜನಪ್ರಿಯತೆಯನ್ನು ಗಳಿಸಿದರು, ಧಾರವಾಹಿ ಆರಂಭವಾದ ಮೇಲೆ ಹಲವಾರು ದಿನಗಳಾದ ಬಳಿಕ ತೆರೆಯ ಮೇಲೆ ಕಾಣಿಸಿಕೊಂಡರೂ ಕೂಡ, ಈಕೆಯ ಸೌಂದರ್ಯ ಹಾಗೂ ನಟನೆಗೆ ಜನರು ಫುಲ್ ಮಾರ್ಕ್ ನೀಡಿದರು. ಇನ್ನು ಇವರು ಈಗ ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡುವುದಾದರೇ ಈ ಧಾರವಾಹಿ ಇವರಿಗೆ ಬೆಳ್ಳಿ ತೆರೆಯಲ್ಲಿ ನಟಿಸುವ ಅವಕಾಶ ನೀಡಿತು.

ತೆರೆಯ ಮೇಲೆ ಅದ್ಭುತ ನಟನೆ ಹಾಗೂ ಸೌಂದರ್ಯದ ಮೂಲಕ ಮಿಂಚಿದ ಬ್ರಿಂದ ಆಚಾರ್ಯರವರು ಇದೀಗ ನೆನಪಿರಲಿ ಪ್ರೇಮ್ ರವರ ಜೊತೆ ಪ್ರೇಮಂ ಪೂಜ್ಯಂ ಎಂಬ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಸಿನಿಮಾ ಬಿಡುಗಡೆ ಕೂಡ ಆಗಲಿದೆ. ಇನ್ನು ಹಲವಾರು ಕಥೆ ಕೇಳುವ ಮೂಲಕ ತನ್ನ 25ನೇ ಸಿನಿಮಾವನ್ನು ಬಹಳ ಅಳೆದು ತೂಗಿ ಆಯ್ಕೆ ಮಾಡಿ ಕೊಂಡಿರುವ ನೆನಪಿರಲಿ ಪ್ರೇಮ್ ಅವರು ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ. ಈ ಚಿತ್ರದಲ್ಲಿ ನಾಯಕಿ ನಟಿಯಾಗಿ ಬ್ರಿಂದ ಆಚಾರ್ಯರವರು ನಟನೆ ಮಾಡುತ್ತಿದ್ದಾರೆ.

Get real time updates directly on you device, subscribe now.