ತಿಂಡಿಗೆ ಏನು ಮಾಡಬೇಕು ಎಂದು ಯೋಚನೇನ?? ಎಲ್ಲರೂ ಇಷ್ಟ ಪಟ್ಟು ತಿನ್ನುವ ಈ ಅಕ್ಕಿ ಹಿಟ್ಟಿನ ದೋಸಾ ಈ ರೀತಿ ಮಾಡಿ ನೋಡಿ.

AMP Ads

ನಮಸ್ಕಾರ ಸ್ನೇಹಿತರೇ ಬೆಳಗಿನ ಉಪಹಾರ ಅಥವಾ ಸಂಜೆ ಸ್ನಾಕ್ಸ್ ಆಗಿ ಈ ದೋಸೆ ಮಾಡಿಕೊಂಡ್ರೆ ಎಷ್ಟು ರುಚಿಯಾಗಿರತ್ತೆ ಗೊತ್ತಾ! ಇಲ್ಲಿದೆ ನೋಡಿ ರೆಸಿಪಿ. ಅಕ್ಕಿಹಿಟ್ಟಿನ ರೊಟ್ಟಿ ಮಾಡಲು ಬೇಕಾಗಿರುವ ಸಾಮಗ್ರಿಗಳು: ಅಕ್ಕಿ ಹಿಟ್ಟು ಒಂದುವರೆ ಕಪ್, ರವಾ ಅಥವಾ ಸೂಜಿ ಅರ್ಧ ಕಪ್, ಒಂದು ದೊಡ್ಡ ಈರುಳ್ಳಿ ಹೆಚ್ಚಿದ್ದು, ಕ್ಯಾರೆಟ್ ಒಂದು ತುರಿದದ್ದು, ೨ ಹಸಿಮೆಣಸು ಹೆಚ್ಚಿದ್ದು, ಚೀರಿಗೆ ಒಂದು ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಕರಿಬೇವು ಸ್ವಲ್ಪ, ನೀರು ಮತ್ತು ಉಪ್ಪು.

ಮಾಡುವ ವಿಧಾನ: ಒಂದು ದೊಡ್ಡ ಪಾತ್ರೆಗೆ ಮೊದಲು ಅಕ್ಕಿ ಹಿಟ್ಟನ್ನು ಹಾಕಿಕೊಳ್ಳಿ. ಇದಕ್ಕೆ ರವೆಯನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಳ್ಳಿ. ನಂತರ ನಾಲ್ಕು ಕಪ್ ನಷ್ಟು ನೀರನ್ನು ಹಾಕಿ. ಈ ದೋಸೆ ಮಾಡಲು ಹೆಚ್ಚು ನೀರನ್ನು ಹಾಕಿಕೊಳ್ಳಬೇಕು. ನೀರು ದೊಸೆಯ ಹದಕ್ಕೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಬೇಕು. ನೀರು ಹಾಕಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳಿ, ಕ್ಯಾರೆಟ್, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ಜೀರಿಗೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಮುಚ್ಚಳ ಮುಚ್ಚಿ ೨೦ ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಒಂದು ದೋಸಾ ತವಾ ಬಿಸಿ ಮಾಡಿ ಅದಕ್ಕೆ ಎಣ್ಣೆ ಸವರಿ ದೋಸೆ ಹಿಟ್ಟಿನಿಂದ ದೋಸೆ ಹುಯ್ಯಿರಿ, ತೆಳ್ಳಗೆ ಹಿಟ್ಟನ್ನು ತವಾದ ತುಂಬ ಚೆಲ್ಲಬೇಕು. ಗರಿಗರಿಯಾಗಿ ಈ ದೋಸೆಯನ್ನು ತೆಗೆದು ಒಂದು ಪ್ಲೇಟ್ ಗೆ ಹಾಕಿಕೊಳ್ಳಿ.

AMP Ad3

ಇನ್ನು ಈ ದೋಸೆಗೆ ಅತ್ಯದ್ಭುತ ಕಾಂಬಿನೇಶನ್ ಅಂದ್ರೆ ಶೇಂಗಾ ಚಟ್ನಿ. ಶೇಂಗಾ ಚಟ್ನಿ ಮಾಡಲು ಒಂದು ಪ್ಯಾನ್ ಗೆ ಒಂದು ಚಮಚ ಎಣ್ಣೆಯನ್ನು ಹಾಕಿ. ಅದಕ್ಕೆ ಶೇಂಗಾ/ ಕಡಲೆಕಾಯಿ, ೨ ಎಸಳು ಬೆಳ್ಳುಳ್ಳಿ, ೪-೫ ಒಣಮೆಣಸು, ಹುರಿಗಡಲೆ ಕಾಲು ಚಮಚ ಇವುಗಳನ್ನು ಹಾಕಿ ಹುರಿದುಕೊಳ್ಳಿ. ನಂತರ ಒಂದು ಮಿಕ್ಸರ್ ಜಾರ್ ಗೆ ಹುರಿದ ಮಿಶ್ರಣವನ್ನು ಹಾಕಿ, ಇದಕ್ಕೆ ಸ್ವಲ್ಪ ಹುಣಸೆಹಣ್ಣು, ಉಪ್ಪು ಹಾಗೂ ನೀರನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ಬಸಿದರೆ ರುಚಿಕರವಾದ ಕಡಲೆಕಾಯಿ ಚಟ್ನೆ ದೋಸೆಯೊಂದಿಗೆ ಸವಿಯಲು ಸಿದ್ದ. ಈ ಚಟ್ನಿಗೆ ಅಗತ್ಯವಿದ್ದರೆ ಒಂದು ಒಗ್ಗರಣೆ ಮಾಡಿಕೊಳ್ಳಬಹುದು. ಸ್ನೇಹಿತರೆ ಈ ರೆಸಿಪಿಯನ್ನು ನೋಡಲು ಕೆಳಗಿನ ಈ ವಿಡಿಯೋವನ್ನು ನೋಡಿ.

Comments (0)
Add Comment