ಮನೆಯಲ್ಲಿಯೇ ಒಣದ್ರಾಕ್ಷಿಯನ್ನು ತಯಾರು ಮಾಡುವುದು ಹೇಗೆ ಗೊತ್ತೇ?? ದೇಹಕ್ಕೆ ಬಹಳ ಮುಖ್ಯ.

AMP Ads

ನಮಸ್ಕಾರ ಸ್ನೇಹಿತರೆ ಒಣದ್ರಾಕ್ಷಿಯು ದೇಹಕ್ಕೆ ಎಷ್ಟು ಪೋಷಕಾಂಶವನ್ನು ನೀಡುತ್ತದೆ ಎಂಬುದು ನಿಮಗೂ ತಿಳಿದೇ ಇರುತ್ತದೆ. ಇದು ಹಲವಾರು ಸಮಸ್ಯೆಗಳಿಂದ ನಮ್ಮನ್ನು ದೂರ ಮಾಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ನಮ್ಮ ದೇಶಕ್ಕೆ ಸಾಕಷ್ಟು ಶಕ್ತಿ ನೀಡುವ ಅಂಶಗಳನ್ನು ಒಣದ್ರಾಕ್ಷಿ ತನ್ನಲ್ಲಿ ಇಟ್ಟುಕೊಂಡಿದೆ. ಅದೇ ಕಾರಣಕ್ಕಾಗಿ ಎಲ್ಲರೂ ಕೂಡ ಒಣ ದ್ರಾಕ್ಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುತ್ತಾರೆ. ಅದೇ ಕಾರಣಕ್ಕಾಗಿ ಇಂದು ನಾವು ಮನೆಯಲ್ಲಿ ಒಣ ದ್ರಾಕ್ಷಿ ಮಾಡುವ ಸುಲಭ ವಿಧಾನವನ್ನು ಹೇಳಿಕೊಳ್ಳುತ್ತೇವೆ ಕೇಳಿ.

ಹೌದು ಸ್ನೇಹಿತರೇ ಇಂದು ನಾವು ಮನೆಯಲ್ಲಿಯೇ ಒಣದ್ರಾಕ್ಷಿ ಮಾಡುವ ಸುಲಭ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಒಣದ್ರಾಕ್ಷಿ ಮಾಡುವ ವಿಧಾನ: ಒಣದ್ರಾಕ್ಷಿಯನ್ನು ಮಾಡಲು ಫ್ರೆಶ್ ಆಗಿರುವ ಹಳದಿ ಬಣ್ಣದ ದ್ರಾಕ್ಷಿ ಬೇಕಾಗುತ್ತದೆ. ಮೊದಲಿಗೆ ಅರ್ಧ ಕೆಜಿ ಹಳದಿ ಬಣ್ಣದ ದ್ರಾಕ್ಷಿಯನ್ನು ತೆಗೆದುಕೊಳ್ಳಿ. ನಂತರ ನೀರಿನಿಂದ ಚೆನ್ನಾಗಿ ತೊಳೆದುಕೊಂಡು ಸ್ವಲ್ಪ ನೀರಿನ ಅಂಶ ಕಡಿಮೆಯಾಗುವವರೆಗೂ ಹಾಗೆಯೇ ಬಿಡಿ. ನಂತರ ದ್ರಾಕ್ಷಿಯನ್ನು ಬಿಡಿಸಿಕೊಂಡು ಇಡ್ಲಿ ಪ್ಲೇಟಿಗೆ ಹಾಕಿಕೊಳ್ಳಿ.

AMP Ad3

ನಂತರ ಗ್ಯಾಸ್ ಮೇಲೆ ಇಡ್ಲಿ ಪಾತ್ರೆಯನ್ನು ಇಟ್ಟು ಅದಕ್ಕೆ 2 ಬಟ್ಟಲಿನಷ್ಟು ನೀರನ್ನು ಹಾಕಿ ಕಾಯಲು ಬಿಡಿ. ನೀರು ಕಾದ ನಂತರ ದ್ರಾಕ್ಷಿಗಳನ್ನು ಇಟ್ಟಿರುವ ಪ್ಲೇಟನ್ನು ಇಡ್ಲಿ ಪಾತ್ರೆಯ ಒಳಗಡೆ ಇಟ್ಟು ಮುಚ್ಚಳವನ್ನು ಮುಚ್ಚಿ 20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ. ನಂತರ ದ್ರಾಕ್ಷಿಗಳನ್ನು ಒಂದು ಪ್ಲೇಟಿನಲ್ಲಿ ಒಂದಕೊಂದು ತಾಕದ ಹಾಗೆ ಜೋಡಿಸಿಕೊಳ್ಳಿ. ನಂತರ ಇದನ್ನು ಮನೆಯಲ್ಲಿ 1 ದಿನಗಳ ಕಾಲ ಒಣಗಿಸಿಕೊಂಡರೆ ಒಣದ್ರಾಕ್ಷಿಯಾಗುತ್ತದೆ. ಒಂದು ವೇಳೆ ನೀವು ಬಿಸಿಲಿನಲ್ಲಿ ಒಣಗಿಸಬೇಕಾದರೆ ಅರ್ಧ ದಿನ ಮಾತ್ರ ಬಿಸಿಲಿನಲ್ಲಿ ಇಟ್ಟರೆ ಒಣದ್ರಾಕ್ಷಿಯಾಗುತ್ತದೆ. ಈ ಒಣದ್ರಾಕ್ಷಿಗಳನ್ನು 1 ವರ್ಷಗಳವರೆಗೆ ಸ್ಟೋರ್ ಮಾಡಬಹುದು.

Comments (0)
Add Comment