ಬಿಸಿಬಿಸಿ ಟೊಮೆಟೊ ಸಾಂಬಾರ್ ಮಧ್ಯಾಹ್ನದ ಊಟಕ್ಕೆ ಮುದ್ದೆ ಅನ್ನದ ಜೊತೆಗೆ ಪರ್ಫೆಕ್ಟ್ ಕಾಂಬಿನೇಷನ್.

AMP Ads

ನಮಸ್ಕಾರ ಸ್ನೇಹಿತರೇ, ಇಂದು ನಾವು ಟೊಮೇಟೊ ಸಾಂಬಾರ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಟೊಮೇಟೊ ಸಾಂಬಾರ್ ಮಾಡಲು ಬೇಕಾಗುವ ಪದಾರ್ಥಗಳು: ಸ್ವಲ್ಪ ಎಣ್ಣೆ, ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, 9 ರಿಂದ 10 ಎಸಳು ಬೆಳ್ಳುಳ್ಳಿ, 4 ಹಸಿಮೆಣಸಿನಕಾಯಿ, 2 ಬ್ಯಾಡಿಗೆ ಮೆಣಸಿನಕಾಯಿ, ಸ್ವಲ್ಪ ಇಂಗು, ಸ್ವಲ್ಪ ಕರಿಬೇವು, 1 ಈರುಳ್ಳಿ, 5 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಅರಿಶಿನ ಪುಡಿ, 4 ಚಮಚ ತೊಗರಿಬೇಳೆ, 2 ಚಮಚ ಸಾಂಬಾರ್ ಪುಡಿ, 2 – 3 ಚಮಚ ಹಸಿ ತೆಂಗಿನಕಾಯಿತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು.

ಟೊಮೇಟೊ ಸಾಂಬಾರ್ ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಕುಕ್ಕರ್ ನನ್ನು ಇಟ್ಟುಕೊಂಡು ಅದಕ್ಕೆ 4 ಚಮಚ ತೊಗರಿಬೇಳೆ, 2 ಲೋಟ ನೀರು, 1 ಚಮಚ ಎಣ್ಣೆ, ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಬೆಳೆಯನ್ನು ನುಣ್ಣಗೆ ಬೇಯಿಸಿಕೊಳ್ಳಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನಿಟ್ಟು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅರ್ಧ ಚಮಚ ಸಾಸಿವೆ ಅರ್ಧ ಚಮಚ ಜೀರಿಗೆ, ಜಜ್ಜಿದ ಬೆಳ್ಳುಳ್ಳಿ, ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿ, 2 ಬ್ಯಾಡಿಗೆ ಮೆಣಸಿನಕಾಯಿ, 2 ಚಿಟಿಕೆಯಷ್ಟು ಇಂಗು, ಸ್ವಲ್ಪ ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ.

AMP Ad3

ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿಯನ್ನು ಹಾಕಿ ಹಸಿವಾಸನೆ ಹೋಗುವವರೆಗೂ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಟೊಮೇಟೊ, ಸ್ವಲ್ಪ ಉಪ್ಪು, ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 5 ನಿಮಿಷಗಳ ಕಾಲ ಬೇಯಲು ಬಿಡಿ. ನಂತರ ಇದಕ್ಕೆ ಬೇಯಿಸಿಕೊಂಡ ಬೇಳೆ, ಸಾಂಬಾರಿಗೆ ಬೇಕಾಗುವಷ್ಟು ನೀರು, 2 ಚಮಚ ಸಾಂಬಾರಿನ ಪುಡಿ, ರುಚಿಗೆ ತಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ ಕೊಳ್ಳಿ. ಕೊನೆಯದಾಗಿ ಇದಕ್ಕೆ ಹಸಿ ತೆಂಗಿನಕಾಯಿತುರಿ ಹಾಗೂ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಟೊಮೊಟೊ ಸಾಂಬಾರ್ ಸವಿಯಲು ಸಿದ್ಧ

Comments (0)
Add Comment