ಹಿಂದೂಗಳು ಯಾಕೆ ಮೂರ್ತಿ ಪೂಜೆ ಮಾಡುತ್ತೀರಿ ಎಂದು ಮುಸ್ಲಿಂ ನವಾಬ ಕೇಳಿದಾದ ಸ್ವಾಮಿ ವಿವೇಕಾನಂದರು ನೀಡಿದ ಉತ್ತರವೇನು ಗೊತ್ತಾ??

AMP Ads

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಜಾಗತಿಕವಾಗಿ ಹಿಂದೂ ಧರ್ಮ ಹಾಗೂ ಸನಾತನ ಸಂಸ್ಕೃತಿಯ ಕುರಿತಂತೆ ಸಾರಿ ದವರಲ್ಲಿ ಪ್ರಮುಖರಾದವರು ಎಂದರೆ ನಮ್ಮೆಲ್ಲರ ನೆಚ್ಚಿನ ಸ್ವಾಮಿ ವಿವೇಕಾನಂದರು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ವಿವೇಕಾನಂದರು ಸನಾತನ ಸಂಸ್ಕೃತಿಯನ್ನು ಜಗಜ್ಜಾಹೀರು ಮಾಡಿದವರಲ್ಲಿ ಪ್ರಮುಖರು ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. 1893 ರಲ್ಲಿ ಅಮೆರಿಕಾದ ಶಿಕಾಗೋದಲ್ಲಿ ನಡೆದಂತಹ ಧರ್ಮ ಸಂಸದ ಚರ್ಚೆಯಲ್ಲಿ ಸ್ವಾಮಿ ವಿವೇಕಾನಂದರು ಮಾಡಿದಂತಹ ಭಾಷಣದಿಂದಾಗಿ ಪರ ಧರ್ಮೀಯರೂ ಕೂಡ ಹಿಂದೂ ಸಂಸ್ಕೃತಿಯ ಕುರಿತಂತೆ ಆಕರ್ಷಿತರಾಗುವಂತೆ ಮಾಡಿದ್ದರು.

ಇನ್ನು ಈ ಭಾಷಣದಿಂದ ಆಗಿಯೇ ಜಾಗತಿಕವಾಗಿ ಹಿಂದೂ ಧರ್ಮದ ಕುರಿತಂತೆ ಗೌರವ ಹಾಗೂ ಪ್ರೀತಿ ಭಾವನೆ ಹೆಚ್ಚಾಯಿತು ಎಂದರೆ ತಪ್ಪಾಗಲಾರದು. ಅಮೆರಿಕದಲ್ಲಿ ಭಾಷಣ ಮಾಡುವಾಗಲೂ ಕೂಡ ಸಹೋದರ ಹಾಗೂ ಸಹೋದರಿಯರೆ ಎಂದು ಹೇಳುವ ಮೂಲಕ ಸ್ವಾಮಿವಿವೇಕಾನಂದರು ಸನಾತನ ಧರ್ಮ ಎಲ್ಲರನ್ನೂ ಕೂಡ ತನ್ನ ಕುಟುಂಬದವರಂತೆ ಭಾವಿಸುತ್ತದೆ ಎಂಬುದನ್ನು ಜಗತ್ತಿಗೆ ಸಾರಿದರು. ಇನ್ನು ರಾಮಕೃಷ್ಣ ಮಿಷನ್ ಎನ್ನುವ ಸಂಸ್ಥೆಯ ಮೂಲಕ ಸನಾತನಧರ್ಮದ ಪ್ರಚಾರವನ್ನು ಮುಂದುವರಿಸಿದರು. ಹಿಂದೂ ಧರ್ಮದ ಹೇಳಿಕೆಗೆ ಸ್ವಾಮಿವಿವೇಕಾನಂದರ ಕೊಡುಗೆ ಅಪಾರವಾಗಿದೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಕೇವಲ ಹಿಂದೂಧರ್ಮೀಯರು ಮಾತ್ರವಲ್ಲದೆ ಪರ ಧರ್ಮೀಯರೂ ಕೂಡ ಇಷ್ಟಪಡುವಂತಹ ಹಿಂದೂ ಆಗಿದ್ದರು ನಮ್ಮೆಲ್ಲರ ನೆಚ್ಚಿನ ಸ್ವಾಮಿವಿವೇಕಾನಂದರು. ಸ್ವಾಮಿ ವಿವೇಕಾನಂದರ ಕುರಿತಂತೆ ಇಂದಿಗೂ ಕೂಡ ಹಲವಾರು ಕಥೆಗಳು ಪ್ರಚಲಿತದಲ್ಲಿವೆ. ಅವುಗಳಲ್ಲಿ ಒಂದರ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ.

AMP Ad3

ಒಮ್ಮೆ ಸ್ವಾಮಿ ವಿವೇಕಾನಂದರು ತಮ್ಮ ಸ್ನೇಹಿತರಾಗಿರುವ ಮುಸ್ಲಿಂ ನವಾಬರ ಬಳಿ ಹೋಗುತ್ತಾರೆ. ಆ ಸಂದರ್ಭದಲ್ಲಿ ನವಾಬರು ಸ್ವಾಮಿ ವಿವೇಕಾನಂದರನ್ನು ಒಳ್ಳೆಯ ರೀತಿಯಲ್ಲಿ ಅತಿಥಿಸತ್ಕಾರ ಮಾಡುತ್ತಾರೆ. ಅತಿಥಿಸತ್ಕಾರ ನಡೆದ ನಂತರ ನೀವು ಅಲ್ಲಾ ಹಾಗೂ ದೇವರು ಒಂದೇ ಎನ್ನುವುದಾದರೆ ಯಾಕೆ ನೀವು ಮೂರ್ತಿಪೂಜೆ ಮಾಡುತ್ತೀರಿ ಎಂಬುದಾಗಿ ಹೇಳುತ್ತಾರೆ. ಆಗ ಸ್ವಾಮಿ ವಿವೇಕಾನಂದರು ನಿಮ್ಮ ಹಿಂದೆ ಇರುವ ಫೋಟೋ ಯಾರದು ಎಂಬುದಾಗಿ ಹೇಳುತ್ತಾರೆ. ಹಾಗಾದ್ರೆ ನಮ್ಮ ತಂದೆ ನೆನಪನ್ನು ಮಾಡುತ್ತದೆ ಎಂಬುದಾಗಿ ನವಾಬರು ಹೇಳುತ್ತಾರೆ. ಆಗ ಮುಗುಳ್ನಕ್ಕು ವಿವೇಕಾನಂದರು ಕೂಡ ನಮಗೆ ಮೂರ್ತಿಯಲ್ಲಿ ದೇವರ ಸ್ವರೂಪ ಕಂಡುಬರುತ್ತದೆ ಇದಕ್ಕಾಗಿ ನಾವು ಮೂರ್ತಿಪೂಜೆ ಮಾಡುತ್ತೇವೆ ಎಂಬುದಾಗಿ ಹೇಳುತ್ತಾರೆ. ಇದೇ ರೀತಿ ವಾಕ್ಪಟುತ್ವದಲ್ಲೂ ಕೂಡ ಸ್ವಾಮಿ ವಿವೇಕಾನಂದರನ್ನು ಮೀರಿಸುವವರು ಆ ಕಾಲದಲ್ಲಿ ಯಾರೂ ಇರಲಿಲ್ಲ ಎಂಬುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Comments (0)
Add Comment