Kannada News: ಬೆಳಗಾವಿ ವಿವಾದದ ಬಗ್ಗೆ ಕೊನೆಗೂ ಮಾತನಾಡಿದ ಅಮಿತ್ ಶಾ: ಹೇಳಿದ್ದೇನು ಗೊತ್ತೇ? ಕೆಣಕಿದ ಮಹಾರಾಷ್ಟ್ರಕ್ಕೆ ಮುಜುಗರ.

AMP Ads

Kannada News: ಕರ್ನಾಟಕ (Karnataka) ಮತ್ತು ಮಹಾರಾಷ್ಟ್ರದ (Maharashtra) ನಡುವಿನ ಗಡಿ ವಿವಾದ ಮತ್ತೆ ಶುರುವಾಗಿದೆ. ಕರ್ನಾಟಕಕ್ಕೆ ಸೇರಿರುವ ಮರಾಠಿ (Marathi) ಮಾತನಾಡುವ ಜನರು ಇರುವ ಪ್ರದೇಶಗಳು ಮಹಾರಾಷ್ಟ್ರಗೆ ಸೇರಬೇಕು ಎನ್ನುವುದು ಅವರ ವಾದ ಆಗಿದೆ. ಮರಾಠಿ ಮಾತಾನಡುವ ಜನರಿರುವ 814 ಹಳ್ಳಿಗಳು ಈಗ ಕರ್ನಾಟಕಕ್ಕೆ ಸೇರಿವೆ, ಅವುಗಳು ಮಹಾರಾಷ್ಟ್ರ ರಾಜ್ಯಕ್ಕೆ ಸೇರಬೇಕು ಎನ್ನುವುದು ಅವರ ವಾದ ಆಗಿದ್ದು, ಈ ವಿಚಾರದ ಬಗ್ಗೆ 1957ರಿಂದಲು ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ, ಆದರೆ ಇನ್ನೂ ತೀರ್ಪು ನೀಡಿಲ್ಲ. ಈ ವಿಷಯದಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಆಗಾಗ ವಿವಾದಗಳು ಭುಗಿಲೇಳುತ್ತಿರುತ್ತದೆ.

ಇತ್ತೀಚೆಗೆ ಶುರುವಾದ ವಿವಾದದ ಬಿಸಿ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡು ರಾಜ್ಯಗಳಲ್ಲಿ ಬಿಗುವಿನ ವಾತಾವರಣ ಉಂಟು ಮಾಡಿತ್ತು, ಕರ್ನಾಟಕ ರಾಜ್ಯದಲ್ಲಿ ಮಹಾರಾಷ್ಟ್ರದ ವಾಹನಗಳಿಗೆ ಮಸಿ ಬಳಿದು, ತೊಂದರೆ ಮಾಡಲಾಗಿತ್ತು. ಅದೇ ರೀತಿ ಮಹಾರಾಷ್ಟ್ರದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ (Uddhav Thakre) ಗುಂಪಿನ ಕಾರ್ಯಕರ್ತರು, ಕರ್ನಾಟಕದ ಬಸ್ ಗಳಿಗೆ ತೊಂದರೆ ಮಾಡಿದ್ದರು. ಈ ರೀತಿಯ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ, ಗಡಿಭಾಗದ ಜನರಿಗೆ ತೊಂದರೆ ಆಗುವುದಂತು ತಪ್ಪಿಲ್ಲ, ಇದೆಲ್ಲವೂ ನಡೆಯುತ್ತಿರುವಾಗ, ಮತ್ತೊಂದು ವಿಷಯ ಈಗ ನಡೆದಿದೆ. ಇದನ್ನು ಓದಿ..Kannada News: ಇಡೀ ವಿಶ್ವವೇ ಕಾಂತಾರ ಮೆಚ್ಚಿರುವಾಗ ಆ ಒಬ್ಬ ಬಾಲಿವುಡ್ ನವನಿಗೆ ಶುರುವಾಗಿದೆ ಉರಿ: ಯಾಕೆ ಗೊತ್ತೇ? ಏನು ಹೇಳಿದ್ದಾರೆ ಗೊತ್ತೇ??

AMP Ad3

ಈ ವಿಷಯಗಳು ದಿನದಿಂದ ದಿನಕ್ಕೆ ಭುಗಿಲೇಳುತ್ತಿದ್ದ ಹಾಗೆ, ಗೃಹಸಚಿವ ಅಮಿತ್ ಶಾ (Amith Shah) ಅವರು ಉಭಯ ನಾಯಕರ ಜೊತೆಗೆ ಸಭೆ ನಡೆಸಿದ್ದಾರೆ. ಸಭೆಯ ನಂತರ ತಿಳಿದು ಬಂದಿರುವ ವಿಚಾರ ಏನೆಂದರೆ, ಸುಪ್ರೀಂ ಕೋರ್ಟ್ ಕಡೆಯಿಂದ ಕೊನೆಯ ತೀರ್ಪು ಬರುವವರೆಗೂ ತಮ್ಮ ಹಕ್ಕುಗಳನ್ನು ಪ್ರತಿಪಾತಿಸದೆ ಇರಲು ಒಪ್ಪಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ವಿವಾದಗಳು ಹೆಚ್ಚಾಗುತ್ತಿರುವ ಕಾರಣ ಗೃಹ ಸಚಿವ ಅಮಿತ್ ಶಾ ಅವರು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ (Ekanath Shinde), ಅವರ ಜೊತೆಗೆ ಸಭೆ ನಡೆಸಲಾಗಿದೆ..ಎರಡು ರಾಜ್ಯಗಳನ್ನು ಈಗ ಸಹಜತೆಯ ಕಡೆಗೆ ತೆಗೆದುಕೊಂಡು ಹೋಗಬೇಕು. 2023ರಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ, ಬುದ್ಧಿವಂತಿಕೆಯಿಂದ ಇರಬೇಕು ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಇದನ್ನು ಓದಿ.. Kannada News: ನಿಶ್ಚಿತಾರ್ಥ ಮುಗಿದ 2 ದಿನಕ್ಕೆ ಮುಂದಿನ ಸೊಸೆ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಸುಮಲತಾ, ಕೇಳಿ ಎಲ್ಲರೂ ಶಾಕ್.

Comments (0)
Add Comment