ಅಖಾಡಕ್ಕಿಳಿದ ಡಿಆರ್ಡಿಒ, ಮರೆತುಬಿಡಿ ಆಕ್ಸಿಜನ್ ಸಮಸ್ಯೆಯನ್ನು ! ಡಿಆರ್ಡಿಒ ಮಾಡಲು ಹೊರಟಿರುವುದಾದರೂ ಏನು ಗೊತ್ತಾ??

AMP Ads

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದೇಶದ ಎಲ್ಲೆಡೆ ಹಲವಾರು ಸಂದರ್ಭಗಳಲ್ಲಿ ಇದೀಗ ಆಕ್ಸಿಜನ್ ಕೊರತೆ ಎದ್ದು ಕಾಣುತ್ತಿದೆ. ಬಹುತೇಕ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮಸ್ಯೆಗೆ ಕಾಡುತ್ತಿರುವ ಕಾರಣ ರೋಗಿಗಳು ಇಹಲೋಕ ತ್ಯಜಿಸುವ ಪರಿಸ್ಥಿತಿ ಎದುರಾಗಿದೆ, ಅಚ್ಚರಿಯೆಂದರೆ ರಾಜ್ಯಗಳಿಗೆ ಈ ಕುರಿತು ಮೊದಲೇ ಎಚ್ಚರಿಕೆ ಬಂದು ಹಣ ಬಿಡುಗಡೆಯಾಗಿದ್ದರೂ ಕೂಡ ಬಹುತೇಕ ರಾಜ್ಯಗಳು ಆಕ್ಸಿಜನ್ ಉತ್ಪಾದನೆ ಮಾಡುವ ಸ್ಥಾವರಗಳನ್ನು ಸ್ಥಾಪಿಸಲಿಲ್ಲ.

AMP Ad3

ಕೆಲವೊಂದು ರಾಜ್ಯಗಳು ಮಾತ್ರ ಒಂದೆರಡು ಆಮ್ಲಜನಕ ಉತ್ಪಾದನಾ ಸ್ಥಾವರಗಳನ್ನು ಸ್ಥಾಪಿಸಿದರೇ ಇನ್ನಷ್ಟು ರಾಜ್ಯಗಳು ಹಣ ಬಿಡುಗಡೆಯಾಗಿ ಅಕೌಂಟ್ಗೆ ಬಂದಿದ್ದರೂ ಕೂಡ ಒಂದು ಆಮ್ಲಜನಕ ಉತ್ಪಾದನಾ ಘಟಕವನ್ನು ಕೂಡ ಸ್ಥಾಪಿಸಲಿಲ್ಲ. ಇದೇ ಕಾರಣಕ್ಕೆ ಇದೀಗ ಡಿಆರ್ಡಿಒ ಅಧಿಕೃತ ಆದೇಶ ಹೊರಡಿಸಿದೆ. ಹೌದು ಸ್ನೇಹಿತರೇ ಡಿಆರ್ಡಿಒ ಇದೀಗ ಅಧಿಕೃತ ಆದೇಶವನ್ನು ಹೊರಡಿಸಿದ್ದು ಬೆಂಗಳೂರು ಮೂಲದ ಬೆಂಗಳೂರು ಮೂಲದ ಡಿಫೆನ್ಸ್ ಬಯೋ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರೋಮೆಡಿಕಲ್ ಲ್ಯಾಬೊರೇಟರಿ (ಡೆಬೆಲ್) ತನ್ನ ಲಘು ಯುದ್ಧ ವಿಮಾನವಾದ ತೇಜಸ್‌ಗಾಗಿ ಆನ್ – ಬೋರ್ಡ್ ಆಕ್ಸಿಜನ್ ಜನರೇಷನ್‌ಗಾಗಿ ಅಭಿವೃದ್ಧಿಪಡಿಸಿದ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ (ಎಂಒಪಿ) ತಂತ್ರಜ್ಞಾನದ ಪ್ರಕಾರ,

ಮೂರು ತಿಂಗಳಲ್ಲಿ 500 ವೈದ್ಯಕೀಯ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಯೋಜಿಸಿದೆ. ಈ ಸ್ಥಾವರಗಳನ್ನು ಪಿಎಂ-ಕೇರ್ಸ್ ನಿಧಿಯಡಿಯಲ್ಲಿ ಸ್ಥಾಪಿಸಲಾಗುವುದು. ಈ ಆಕ್ಸಿಜನ್ ಪ್ಲಾಂಟ್ ಅನ್ನು ನಿಮಿಷಕ್ಕೆ 1,000 ಲೀಟರ್ (ಎಲ್ಪಿಎಂ) ಸಾಮರ್ಥ್ಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ಸ್ಥಾವರದ ಸ್ಥಾಪನೆಯು ವಿರಳವಾದ ಆಮ್ಲಜನಕ ಸಿಲಿಂಡರ್‌ಗಳ ಮೇಲೆ ಆಸ್ಪತ್ರೆಯ ಅವಲಂಬನೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ಹೆಚ್ಚಿನ ಎತ್ತರ ಮತ್ತು ಪ್ರವೇಶಿಸಲಾಗದ ದೂರದ ಪ್ರದೇಶಗಳಲ್ಲಿ. ಈಶಾನ್ಯ ಮತ್ತು ಲೇಹ್-ಲಡಾಖ್ ಪ್ರದೇಶದ ಕೆಲವು ಸೇನಾ ತಾಣಗಳಲ್ಲಿ ಈಗಾಗಲೇ ಎಂಒಪಿ ಸ್ಥಾಪಿಸಲಾಗಿದೆ.

Comments (0)
Add Comment