RCB IPL: ಐಪಿಎಲ್ ನಿಜಕ್ಕೂ ತನ್ನ ಜೀವನದಲ್ಲಿ ಏನು ಬದಲಾವಣೆ ಮಾಡಿದೆ ಎಂಬುದನ್ನು ತಿಳಿಸಿದ ABD. ಹೇಳಿದ್ದೇನು ಗೊತ್ತೇ??

AMP Ads

RCB IPL: ಕ್ರಿಕೆಟ್ ಲೋಕದ ಲೆಜೆಂಡ್ ಗಳಲ್ಲಿ ಒಬ್ಬರು ಎಬಿಡಿ ವಿಲಿಯರ್ಸ್. ಇವರನ್ನು ಇಡೀ ವಿಶ್ವವೇ ಅತ್ಯುತ್ತಮ ಕ್ರಿಕೆಟರ್ ಎಂದು ಒಪ್ಪಿಕೊಂಡಿದೆ. ಮಿ.360 ಎಂದೇ ಎಬಿಡಿ ಅವರನ್ನು ಕರೆಯುತ್ತಾರೆ. ಸೌತ್ ಆಫ್ರಿಕಾ ತಂಡಕ್ಕೆ ಇವರು ನೀಡಿರುವ ಕೊಡುಗೆ ಅಪಾರವಾದದ್ದು. ನ್ಯಾಷನಲ್ ಟೀಮ್ ಗಾಗಿ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ ಎಬಿಡಿ. ಅಷ್ಟೇ ಅಲ್ಲದೆ ಎಬಿಡಿ ಅವರು ಟಿ20 ಲೀಗ್ ಗಳಲ್ಲಿ ಸಹ ಆಡುತ್ತಿದ್ದರು. ಅವುಗಳ ಮೂಲಕ ಒಳ್ಳೆಯ ಹೆಸರು ಗಳಿಸಿದ್ದಾರೆ ಎಬಿಡಿ..

ವಿಶೇಷವಾಗಿ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗೆ ಎಬಿಡಿ ಅವರ ಪಯಣ ಎಲ್ಲರೂ ನೆನಪಿಡುವಂಥದ್ದು, ಆರ್ಸಿಬಿ ತಂಡದ ಆಪತ್ಬಾಂಧವ ಎಂದೇ ಇವರನ್ನು ಕರೆಯುತ್ತಿದ್ದರು. ಆರ್ಸಿಬಿ ತಂಡದ ಪರವಾಗಿ ಹಲವು ವರ್ಷಗಳ ಕಾಲ ಆಡಿದ್ದಾರೆ ಎಬಿಡಿ. ಇವರು ಐಪಿಎಲ್ ನಲ್ಲಿ ಒಟ್ಟು 184 ಪಂದ್ಯಗಳನ್ನು ಆಡಿದ್ದು, 5162 ರನ್ಸ್ ಸಿಡಿಸಿದ್ದಾರೆ. ಇವರ ಆವರೇಜ್ 39.7 ಇತ್ತು. ಹೀಗೆ ಎಬಿಡಿ ಅವರಿಗೆ ಐಪಿಎಲ್ ಜೊತೆಗೆ ಅವಿನಾಭಾವ ಸಂಬಂಧ ಇದೆ. ಇಂದಿಗೂ ಆರ್ಸಿಬಿ ಅಭಿಮಾನಿಗಳು ಇವರನ್ನು ಮರೆತಿಲ್ಲ.

AMP Ad3

ಇದೀಗ ಎಬಿಡಿ ಅವರು ಐಪಿಎಲ್ ಮತ್ತು ಆರ್ಸಿಬಿ ತಂಡ ತಮ್ಮ ಜೀವನದಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತಂದಿತು ಎನ್ನುವ ಬಗ್ಗೆ ಮಾತನಾಡಿದ್ದಾರೆ. “ಐಪಿಎಲ್ ನ ಆರಂಭ ನಮ್ಮೆಲ್ಲರ ಜೀವನವನ್ನ ಬದಲಾಯಿಸಿತು.” ಎಂದಿದ್ದಾರೆ. ಐಪಿಎಲ್ ಜೊತೆಗೆ ಹತ್ತಿರದ ಒಡನಾಟ ಇಟ್ಟುಕೊಂಡಿದ್ದು ತುಂಬಾ ಪ್ಯಾಷನೇಟ್ ಆಗಿತ್ತು ಎಂದಿರುವ ಎಬಿಡಿ ಅವರು, ಆಸ್ಟ್ರೇಲಿಯಾದ ಲೆಜೆಂಡ್ McGrath ಅವರೊಡನೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದು, ಐಪಿಎಲ್ ಆರಂಭದ ದಿನಗಳಲ್ಲಿ ಬಹಳ ಸ್ಪೆಶಲ್ ಆಗಿತ್ತು ಎಂದಿದ್ದಾರೆ. ಅಷ್ಟೇ ಅಲ್ಲದೆ, ಭಾರತದ ಜನರು ತಮ್ಮ ದೇಶದ ತಂಡಗಳನ್ನು ಮಾತ್ರ ಸಪೋರ್ಟ್ ಮಾಡದೆ ಪ್ಲೇಯರ್ ಗಳನ್ನು ಕೂಡ ಸಪೋರ್ಟ್ ಮಾಡುತ್ತಾರೆ, ಅದರಿಂದಲೇ ಐಪಿಎಲ್ ಇನ್ನಷ್ಟು ಸ್ಪೆಷಲ್ ಎನ್ನಿಸುತ್ತದೆ ಎಂದಿದ್ದಾರೆ..

Comments (0)
Add Comment