Kannada News: ಅಪ್ಪ ಅಮ್ಮನ ಹಾದಿ ತುಳಿಯುತ್ತ, 2022 ರಲ್ಲಿ ಕನ್ನಡಕ್ಕೆ ಪ್ರವೇಶ ಕೊಟ್ಟ ಸ್ಟಾರ್ ನಟರ ಮಕ್ಕಳು ಯಾರ್ಯಾರು ಗೊತ್ತೇ??

AMP Ads

Kannada News: 2022 ಈ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಅತ್ಯುತ್ತಮವಾದ ವರ್ಷ ಎಂದು ಹೇಳಬಹುದು. ಕನ್ನಡದ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ, ಇಡೀ ಪ್ರಪಂಚವೇ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದೆ. ಅಷ್ಟೇ ಅಲ್ಲದೆ ಈ ವರ್ಷದ ಮತ್ತೊಂದು ವಿಶೇಷಗೆ ಏನು ಎಂದರೆ, ಕನ್ನಡದ ಸ್ಟಾರ್ ಕಲಾವಿದರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವರ್ಷ ಬಹಳಷ್ಟು ಸ್ಟಾರ್ ಕಲಾವಿದರ ಮಕ್ಕಳು ಹೊಸ ಕನಸಿನ ಜೊತೆಗೆ ಚಿತ್ರರಂಗಕ್ಕೆ ಬಂದಿದ್ದಾರೆ. ತಂದೆ ತಾಯಿಯ ಹಾಗೆ ನಟನೆಯಲ್ಲಿ ಸಾಧನೆ ಮಾಡುವ ಆಸೆ ಹೊಂದಿದ್ದಾರೆ. ಹಾಗಿದ್ದಲ್ಲಿ, ಈ ವರ್ಷ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ಸ್ಟಾರ್ ಕಿಡ್ಸ್ ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..

ನಟ ಶರಣ್ ಅವರ ಗುರು ಶಿಷ್ಯರು ಸಿನಿಮಾ ಮೂಲಕ ಸ್ಟಾರ್ ಕಿಡ್ ಗಳ ದಂಡೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ, ನಟ ಶರಣ್ ಅವರ ಮಗ ಹೃದಯ್, ನೆನಪಿರಲಿ ಪ್ರೇಮ್ ಅವರ ಮಗ ಏಕಾಂತ್, ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್, ನವೀನ್ ಕೃಷ್ಣ ಅವರ ಮಗ ಹರ್ಷಿತ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಗುರು ಶಿಷ್ಯರು ಸಿನಿಮಾ ಸೂಪರ್ ಹಿಟ್ ಆಯಿತು. ಇನ್ನು ನಟ ಪ್ರೇಮ್ ಅವರ ಮಗಳು ಅಮೃತಾ ಪ್ರೇಮ್ ಅವರು ಟಗರು ಪಲ್ಯ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಡಾಲಿ ಧನಂಜಯ್ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಇತ್ತೀಚೆಗೆ ಸಿನಿಮಾದ ಮುಹೂರ್ತ ನೆರವೇರಿತು. ನಟಿ ಮಾಲಾಶ್ರೀ ಅವರ ಮಗಳು ರಾಧನಾ, ದರ್ಶನ್ ಅವರ ಮುಂದಿನ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಇದನ್ನು ಓದಿ..Kannada News: ವಿಶ್ವವನ್ನೇ ಶೇಕ್ ಮಾಡಿರುವ ಅವತಾರ ಸಿನಿಮಾ ಕಲಾವಿದರಿಗೆ ಕೊಟ್ಟಿರುವ ಸಂಭಾವನೆ ಎಷ್ಟು ಗೊತ್ತೇ??

AMP Ad3

ಸಿನಿಮಾ ಮುಹೂರ್ತ ಈಗಾಗಲೇ ನೆರವೇರಿದೆ. ಇನ್ನಿ ಕಾಂತಾರ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಅವರ ಮಕ್ಕಳು ಕೂಡ ಎಂಟ್ರಿ ಕೊಟ್ಟಿದ್ದಾರೆ. ಕಾಂತಾರ ಸಿನಿಮಾ ಶುರುವಿನಲ್ಲಿ, ರಾಜ ರಾಣಿಯ ಪಾತ್ರ ಬರುತ್ತದೆ, ಅಡದಲ್ಲಿ ರಾಣಿಯ ಪಾತ್ರ ಮಾಡಿರುವುದು ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ, ಇನ್ನು ಮಕ್ಕಳ ಪಾತ್ರದಲ್ಲಿ ರಿಷಬ್ ಶೆಟ್ಟಿ ಅವರ ಮಕ್ಕಳನ್ನೇ ತೋರಿಸಲಾಗಿದೆ. ಇಷ್ಟೇ ಅಲ್ಲದೆ, ಚಂದನವನಕ್ಕೆ ಇನ್ನು ಇಬ್ಬರು ಯುವ ಹೀರೋಯಿನ್ ಗಳು ಸಜ್ಜಾಗಿದ್ದಾರೆ. ಯುವ ರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ದಂಪತಿಯ ಮಗಳು ಐಶ್ವರ್ಯ ಉಪೇಂದ್ರ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ. ಇನ್ನು ನಟಿ ಸುಧಾರಾಣಿ ಅವರ ಮಗಳು ನಿಧಿ ಅವರು ಕೂಡ ನಾಯಕಿಯಾಗಿ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗುತ್ತಿದೆ.. ಇದನ್ನು ಓದಿ..Kannada News: ಆರೋಗ್ಯ ಸುಧಾರಿಸುತ್ತಿದ್ದಂತೆ, ಪಾಠ ಕಲಿಸಲು ಎರಡನೇ ಮದುವೆ ಬಗ್ಗೆ ಗಟ್ಟಿ ನಿರ್ಣಯ ತೆಗೆದುಕೊಂಡ ಸಮಂತಾ. ಹೇಳಿದ್ದೇನು ಗೊತ್ತೇ??

Comments (0)
Add Comment